ಐಎಎಫ್ ನೇಮಕಾತಿ 2019: ಏರ್ ಮೆನ್ (ಗ್ರೂಪ್ X ಮತ್ತು ಗ್ರೂಪ್ Y ಟ್ರೇಡ್ಸ್ ) ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಏರ್ ಫೋರ್ಸ್ ಏರ್ ಏರ್ ಮೆನ್ (ಗ್ರೂಪ್ X ಮತ್ತು ಗ್ರೂಪ್ Y ಟ್ರೇಡ್ಸ್) ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ. ಐಎಎಫ್ ಭಾರತೀಯ ಜನರಿಂದ (ಅವಿವಾಹಿತ ಪುರುಷರು) ಏರ್ ಮೆನ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾಗುವ ಟ್ರೇಡ್ಸ್ ಗಳನ್ನು ಅಧಿಕಾರಿಗಳು, ನೌಕಾಪಡೆಗಳು ಮತ್ತು ಪೈಲಟ್ ಗಳು ಅಭ್ಯರ್ಥಿಗಳು ಭಾರತೀಯ ಸೇನಾಪಡೆಗಳ ವಾಯುಪಡೆಯೊಂದಿಗೆ ಜನವರಿ 21,2019 ರಲ್ಲಿ ನಿಯೋಜಿಸಲಿದ್ದಾರೆ.

ಐಎಎಫ್ ನಲ್ಲಿ ಏರ್ ಮೆನ್ ಆಗಿ ಆಯ್ಕೆಯಾಗಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನವರಿ 19, 1999 ಮತ್ತು ಜನವರಿ 1,2004ರ ನಡುವೆ ಜನಿಸಿರಬೇಕು ಹಾಗೂ 21 ವರ್ಷ ವಯಸ್ಸನ್ನು ದಾಟಿರಬಾರದು.

ಐಎಎಫ್ ನೇಮಕಾತಿ 2019: ಏರ್ ಮೆನ್ (ಗ್ರೂಪ್ X  ಮತ್ತು ಗ್ರೂಪ್ Y  ಟ್ರೇಡ್ಸ್ ) ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಭ್ಯರ್ಥಿಗಳು ಜನವರಿ2, 2019 ರಿಂದ ಜನವರಿ 21,2019 ರವರೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು. ಅರ್ಜಿಯ ಜೊತೆಗೆ ಪರೀಕ್ಷೆಯ ಶುಲ್ಕವನ್ನು ಕಟ್ಟಬೇಕು. ಪರೀಕ್ಷೆಯ ಶುಲ್ಕವನ್ನು ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.

ಹುದ್ದೆಯ ಹೆಸರು, ಅರ್ಹತೆ ಹಾಗೂ ಸಂಬಳದ ಬಗೆಗೆ ಮತ್ತಷ್ಟು ಮಾಹಿತಿ ತಿಳಿಯಲು ಮುಂದಕ್ಕೆ ಓದಿ:

CRITERIA DETAILS
Name Of The Posts ಏರ್ ಮೆನ್ (ಗ್ರೂಪ್ X ಮತ್ತು ಗ್ರೂಪ್ Y ಟ್ರೇಡ್ಸ್)
Organisation ಇಂಡಿಯನ್ ಏರ್ ಫೋರ್ಸ್‍
Educational Qualification 10+2/ ಇಂಟರ್ ಮೀಡಿಯೇಟ್ ಅಥವಾ ಗ್ರೂಪ್ X ಮತ್ತು ಗ್ರೂಪ್ Y ಟ್ರೇಡ್ಸ್ ಡಿಪ್ಲೊಮ ಇನ್ ನಿಗಧಿತ ಕ್ಷೇತ್ರಗಳು/ ವಿಭಾಗಗಳಲ್ಲಿ/ ವಿಷಯಗಳಲ್ಲಿ
Skills Required ಫಿಸಿಕಲ್ ಫಿಟ್ನೆಸ್
Job Location ಭಾರತದೆಲ್ಲೆಡೆ
Salary Scale ತಿಂಗಳಿಗೆ 33,100/- ರೂ (ಗ್ರೂಪ್ X ) ; ತಿಂಗಳಿಗೆ 29,900/-ರೂ (ಗ್ರೂಪ್ Y )
Industry ಡಿಫೆನ್ಸ್
Application Start Date January 2, 2019
Application End Date January 21, 2019

ಗ್ರೂಪ್ X ಮತ್ತು ಗ್ರೂಪ್ Y ಟ್ರೇಡ್ಸ್ ನ ಶೈಕ್ಷಣಿಕ ಅರ್ಹತೆಗಳು:

ಗ್ರೂಪ್ X ಟ್ರೇಡ್ ನ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭೌತಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಕನಿಷ್ಟ ಶೇ50% ಅಂಕಗಳನ್ನು (ಒಟ್ಟಾರೆ) ಹೊಂದಿರುವ HSC/10+2/ ಇಂಟರ್ ಮೀಡಿಯೇಟ್ ಅಥವಾ ಸಮಾನ ಪರೀಕ್ಷೆಯಲ್ಲಿ ಅರ್ಹರಾಗಿರಬೇಕು ಮತ್ತು ಇಂಗ್ಲಿಷ್ ನಲ್ಲಿ ಶೇ50% ಅಂಕಗಳನ್ನು ಗಳಿಸಿರಬೇಕು. ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಪಾಲಿಟೆಕ್ನಿಕ್ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ನ 3ವರ್ಷದ ಡಿಪ್ಲೊಮ ಕೋರ್ಸ್ ನಲ್ಲಿ ಶೇ50% ಅಂಗಳನ್ನು (ಒಟ್ಟಾರೆ) ಗಳಿಸಿರಬೇಕು ಮತ್ತು ಡಿಪ್ಲೊಮ ಇನ್ ಇಂಗ್ಲಿಷ್ ನಲ್ಲಿ ಶೇ50% ಅಂಕಗಳನ್ನು ಪಡೆದಿರಬೇಕು.

ಗ್ರೂಪ್ Y ನ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇಂದ್ರ/ ರಾಜ್ಯ ಶಿಕ್ಷಣ ಮಂಡಳಿಗಳು ಅನುಮೋದಿಸಿದ ಯಾವುದೇ ಸ್ಟ್ರೀಮ್ಸ್ / ವಿಭಾಗಗಳಲ್ಲಿ ಕನಿಷ್ಟ 50% ಅಂಕಗಳನ್ನು (ಒಟ್ಟಾರೆ) ಹೊಂದಿರುವ HSC/10+2/ ಇಂಟರ್ ಮೀಡಿಯೇಟ್ ಅಥವಾ ಸಮಾನ ಪರೀಕ್ಷೆಯಲ್ಲಿ ಅರ್ಹರಾಗಿರಬೇಕು ಮತ್ತು ಇಂಗ್ಲೀಷ್ ನಲ್ಲಿ ಶೇ50% ಅಂಕಗಳನ್ನು ಪಡೆದಿರಬೇಕು.

ಗ್ರೂಪ್ Y ಟ್ರೇಡ್ ನ ಅಡಿಯಲ್ಲಿ ಮೆಡಿಕಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು HSC/10+2/ ಇಂಟರ್ ಮೀಡಿಯೇಟ್ ಅಥವಾ ಸಮಾನ ಪರೀಕ್ಷೆಯನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲೀಷ್ ವಿಷಯಗಳಲ್ಲಿ ಕನಿಷ್ಠ ಶೇ50% (ಸಮುಚ್ಚಯ) ಅಂಕಗಳನ್ನು ಮತ್ತು ಇಂಗ್ಲಿಷ್ ವಿಷಯದಲ್ಲಿ ಶೇ50% ಅಂಕಗಳನ್ನು ಪಡೆದುಕೊಂಡಿರಬೇಕು.

ಆಯ್ಕೆಯಾದ ಅಭ್ಯರ್ಥಿಗಳನ್ನು ಆರಂಭದಲ್ಲಿ 20 ವರ್ಷಗಳ ಕಾಲ ನೇಮಕ ಮಾಡಲಾಗುವುದು ತದನಂತರ 57 ವರ್ಷ ವಯಸ್ಸಿನ ವರೆಗೆ ವಿಸ್ತರಿಸಲಾಗುವುದು. ತರಬೇತಿಯ ಸಮಯದಲ್ಲಿ ಎಲ್ಲಾ ಟ್ರೇಡ್ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 14,600/-ರೂ ಸ್ಟೈಫಂಡ್ ನೀಡಲಾಗುತ್ತದೆ. ಗ್ರೂಪ್ X ಟ್ರೇಡ್ಸ್ ನ ಅಡಿಯಲ್ಲಿ ಅಭ್ಯರ್ಥಿಗಳು ತರಬೇತಿಯನ್ನು ಮುಗಿಸಿದ ನಂತರ ತಿಂಗಳಿಗೆ 33,100/-ರೂ ವೇತನ ಹಾಗೂ ಮತ್ತಿತರ ಭತ್ಯೆಯನ್ನು ನೀಡಲಾಗುತ್ತದೆ. ಗ್ರೂಪ್ Y ಟ್ರೇಡ್ಸ್ ನ ಅಡಿಯಲ್ಲಿ ತರಬೇತಿ ಪಡೆದುಕೊಂಡ ಅಭ್ಯರ್ಥಿಗಳಿಗೆ ತಿಂಗಳಿಗೆ 29,900/- ರೂ ವೇತನದ ಜೊತೆಗೆ ಮತ್ತಿತರ ಭತ್ಯೆಗಳನ್ನು ನೀಡಲಾಗುತ್ತದೆ.

ಗ್ರೂಪ್ X ಮತ್ತು ಗ್ರೂಪ್ Y ಟ್ರೇಡ್ಸ್ ನ ಅಡಿಯಲ್ಲಿ ಆಯ್ಕೆಯಾದ ಏರ್ ಮೆನ್ ಗೆ ತಿಂಗಳಿಗೆ 2300ರೂ ಪ್ರೀಮಿಯಂ ನ 3,75 ಲಕ್ಷದ ಗ್ರೂಪ್ ಇನ್ಷೂರೆನ್ಸ್ ನೀಡಲಾಗುತ್ತದೆ.

ಆಯ್ಕೆ ವಿಧಾನ:

ಗ್ರೂಪ್ X ಮತ್ತು ಗ್ರೂಪ್ Y ಟ್ರೇಡ್ಸ್ ನ ಅಡಿಯಲ್ಲಿ ಏರ್ ಮೆನ್ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆನ್ ಲೈನ್ ನಲ್ಲಿ ಫೇಸ್ | ಮತ್ತು ಫೇಸ್ || ಪರೀಕ್ಷೆಗಳನ್ನು ನೀಡಲಾಗುತ್ತದೆ ತದನಂತರ ಫಿಸಿಕಲ್ ಫಿಟ್ನೆಸ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅರ್ಹತಾ ಅಭ್ಯರ್ಥಿಗಳು | ಮತ್ತು ||ನೇ ಅಡಾಪ್ಟೇಬಲಿಟಿ ಪರೀಕ್ಷೆಗೆ ಒಳಪಡುತ್ತಾರೆ. ನಂತರ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗುತ್ತದೆ.

ಅನ್ ಲೈನ್ ಪರೀಕ್ಷೆಯು ದಿನಾಂಕ 14 ಮಾರ್ಚ್ 2019 ರಂದು ನಡೆಸಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಕೇಂದ್ರ ಏರ್ ಮೆನ್ ಆಯ್ಕೆ ಮಂಡಳಿಯ ಸೂಚನೆಯಂತೆ ಭೌತಿಕ ಮತ್ತು ವೈದ್ಯಕೀಯ ಮಾನದಂಡಗಳನ್ನು ಪೂರೈಸಬೇಕು.

ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ರಿಜಿಸ್ಟರ್ ಆಗಲು ಇಲ್ಲಿ ಲಾಗಿನ್ ಆಗಿ https://airmenselection.cdac.in/CASB/ ಆಯ್ಕೆ ಪ್ರಕ್ರಿಯೆಯ ಬಗೆಗೆ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
The Indian Air Force (IAF) has invited applications from Indian nationals (unmarried males) for selection as Airmen under Group X and Group Y Trades to be commissioned as Officers, Navigators and Pilots with the air wing of the Indian armed forces by 21 January 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X