IBPS CRP RRB X Mains 2021 Admit Card : ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ ?

ದಿ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ 2021ನೇ ಸಾಲಿನ ನೇಮಕಾತಿಯ ಸಿಆರ್‌ಪಿ ಆರ್‌ಆರ್‌ಬಿ X (ಸ್ಕೇಲ್ I ಅಧಿಕಾರಿ) ಹುದ್ದೆಗಳ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದೆ. ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಐಬಿಪಿಎಸ್ ಸಿಆರ್‌ಪಿ ಆರ್‌ಆರ್‌ಬಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ರಿಲೀಸ್

ಐಬಿಪಿಎಸ್ ಸಿಆರ್‌ಪಿ ಆರ್‌ಆರ್‌ಬಿ X (ಸ್ಕೇಲ್ I ಅಧಿಕಾರಿ) ಒಟ್ಟು 10,368 ಹುದ್ದೆಗಳನ್ನು ಭರ್ತಿ ಮಾಡಲು ಜೂನ್ 28,2021ರೊಳಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪ್ರಿಲಿಮಿನರಿ ಪರೀಕ್ಷೆ ಮತ್ತು ಪ್ರಮುಖ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು. ಆಗಸ್ಟ್ ನಲ್ಲಿ ಪ್ರಿಲಿಮಿನರಿ ಪರೀಕ್ಷೆಯು ನಡೆದಿದ್ದು, ಈಗಾಗಲೇ ಫಲಿತಾಂಶ ಕೂಡ ಪ್ರಕಟವಾಗಿದೆ. ಪ್ರಿಲಿಮಿನರಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ಪ್ರಮುಖ ಪರೀಕ್ಷೆಗೆ ಹಾಜರಾಗಲು ಅರ್ಹತೆಯನ್ನು ಪಡೆದಿರುತ್ತಾರೆ. ಐಬಿಪಿಎಸ್ ಸಿಆರ್‌ಪಿ ಆರ್‌ಆರ್‌ಬಿ X (ಸ್ಕೇಲ್ I ಅಧಿಕಾರಿ) ಹುದ್ದೆಗಳ ಪ್ರಮುಖ ಪರೀಕ್ಷೆಯು ಇದೇ ಸೆಪ್ಟೆಂಬರ್ 25,2021ರಂದು ಒಟ್ಟು 200 ಅಂಕಗಳಿಗೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಿದ್ದು, ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಐಬಿಪಿಎಸ್‌ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ ? :

ಸ್ಟೆಪ್ 1: ಅಭ್ಯರ್ಥಿಗಳು ದಿ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ಅಧಿಕೃತ ವೆಬ್‌ಸೈಟ್‌ https://www.ibps.in/ ಗೆ ಭೇಟಿ ನೀಡಿ.
ಸ್ಟೆಪ್ 2: ನಂತರ ಹೋಂ ಪೇಜ್‌ನಲ್ಲಿ ಲಭ್ಯವಿರುವ "Click here to download your online main exam call letter for CRP RRBs X Officer Scale" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಹೊಸ ಪುಟಕ್ಕೆ ಹೋಗುವಿರಿ ಅಲ್ಲಿ ನಿಮ್ಮ ರಿಜಿಸ್ಟ್ರೇಶನ್ ನಂಬರ್/ರೋಲ್ ನಂಬರ್ ಮತ್ತು ಪಾಸ್‌ವರ್ಡ್/ಜನ್ಮ ದಿನಾಂಕ ನಮೂದಿಸಿ
ಸ್ಟೆಪ್ 4: ನಂತರ ನಿಮ್ಮ ಪ್ರವೇಶ ಪತ್ರವು ಸ್ಕ್ರೀನ್ ಮೇಲೆ ಲಭ್ಯವಾಗುವುದು
ಸ್ಟೆಪ್ 5 : ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

ಪ್ರಮುಖ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರವೇಶ ಪತ್ರ ಜೊತೆಗೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗತಕ್ಕದ್ದು. ಅಭ್ಯರ್ಥಿಗಳು ಪರೀಕ್ಷೆಯ ಬಗೆಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪಡೆಯಬಹುದು.

ಅಭ್ಯರ್ಥಿಗಳು ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರವನ್ನು ನೇರವಾಗಿ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
IBPS released main examination admit card for CRP RRB X (Officer scale I). How to download here is the steps.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+