ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ಪಿಒ ಪ್ರೆಲಿಮಿನರಿ ಫಲಿತಾಂಶ 2018 ಸದ್ಯದಲ್ಲೇ ರಿಲೀಸ್ ಆಗಲಿದೆ. ಆಫೀಶಿಯಲ್ ಸೈಟ್‌ನಲ್ಲಿ ಇದೀಗ ಐಬಿಪಿಎಸ್ ಪಿಒ ಪ್ರೆಲಿಮಿನರಿ ಫಲಿತಾಂಶ ಪ್ರಕಟವಾಗಲಿದ್ದು, ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ವಿಸಿಟ್ ಮಾಡಿ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ.

ಈ ಮೊದಲು ಅಕ್ಟೋಬರ್ 30 ರಂದು ಅಂದ್ರೆ ನಿನ್ನೆ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ಪಿಒ ಪ್ರೆಲಿಮಿನರಿ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಲಾಗಿತ್ತು. ಆದ್ರೆ ಇದೀಗ ಬಂದ ಮಾಹಿತಿ ಪ್ರಕಾರ ಫಲಿತಾಂಶವು ಇಂದು ಅಕ್ಟೋಬರ್ 31 ರಂದು ಪ್ರಕಟಗೊಳ್ಳಲಿದೆ ಎಂದು ತಿಳಿದುಬಂದಿದೆ.
ಫಲಿತಾಂಶ ಚೆಕ್ ಮಾಡಿಕೊಳ್ಳುವುದು ಹೇಗೆ:
ಈ ಕೆಳಗಿನ ಸ್ಟೆಪ್ ಮೂಲಕ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ
- ಸ್ಟೆಪ್ 1: ಐಬಿಪಿಎಸ್ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ
- ಸ್ಟೆಪ್ 2: CRP PO Preliminary examinations 2018 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3: ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ ಸಬ್‌ಮಿಟ್ ಮಾಡಿ
- ಸ್ಟೆಪ್ 4: ಫಲಿತಾಂಶ ಸ್ಕ್ರೀನ್ ಮೇಲೆ ಮೂಡುತ್ತದೆ, ಮುಂದಿನ ರೆಫರೆನ್ಸ್ ಗಾಗಿ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ಪಿಒ ಪ್ರೆಲಿಮಿನರಿ ಪರೀಕ್ಷೆಯಲ್ಲಿ ಪಾಸಾಗುವ ಅಭ್ಯರ್ಥಿಗಳು ನವಂಬರ್ 18, 2018 ರಂದು ನಡೆಯುವ ಐಬಿಪಿಎಸ್ ಪಿಒ ಪ್ರಮುಖ ಪರೀಕ್ಷೆಗೆ ಆಯ್ಕೆಯಾಗುತ್ತಾರೆ. ಇನ್ನು ಈ ಪ್ರಮುಖ ಪರೀಕ್ಷೆಯಲ್ಲಿ ಪಾಸಾಗುವ ಅಭ್ಯರ್ಥಿಗಳಿಗೆ ಸಂದರ್ಶನವಿರುತ್ತದೆ.


Click it and Unblock the Notifications











