ಐಬಿಪಿಎಸ್ ಪಿಒ ಪ್ರಿಲಿಮ್ಸ್ 2018 ಸ್ಕೋರ್ ಕಾರ್ಡ್ ರಿಲೀಸ್

By Nishmitha Bekal

ದಿ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ಇದೀಗ ಸಿಆರ್ ಪಿ-ಪಿಒ/ಎಂಟಿ-ಪ್ರೊಬಷನರಿ ಆಫೀಸರ್ಸ್/ಮ್ಯಾನೇಜ್‌ಮೆಂಟ್ ಟ್ರೈನೀಸ್ ಪ್ರೆಲಿಮ್ಸ್ 2018 ಪರೀಕ್ಷೆಯ ಸ್ಕೋರ್ ಕಾರ್ಡ್ ರಿಲೀಸ್ ಆಗಿದ್ದು, ಅಭ್ಯರ್ಥಿಗಳು ಆಫೀಶೀಯಲ್ ವೆಬ್‌ಸೈಟ್‌ಗೆ ವಿಸಿಟ್ ಮಾಡಿ ಚೆಕ್ ಮಾಡಿಕೊಳ್ಳಬಹುದಾಗಿದೆ.

ಐಬಿಪಿಎಸ್ ಪಿಒ ಪ್ರಿಲಿಮ್ಸ್ 2018 ಸ್ಕೋರ್ ಕಾರ್ಡ್ ರಿಲೀಸ್

 

ಐಬಿಪಿಎಸ್ ಪ್ರೊಬಷನರಿ ಆಫೀಸರ್ಸ್ ಪ್ರೆಲಿಮ್ಸ್ ಪರೀಕ್ಷೆಯು ಅಕ್ಟೋಬರ್ 13 ಮತ್ತು 14, 2018 ರಂದು ನಡೆದಿತ್ತು. ಈ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳು ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ ಸ್ಕೋರ್ ಚೆಕ್ ಮಾಡಿಕೊಳ್ಳಬಹುದಾಗಿದೆ.

ಇನ್ನು ನವಂಬರ್ 18, 2018 ರಂದು ಐಬಿಪಿಎಸ್ ಪ್ರೊಬಷನರಿ ಆಫೀಸರ್ಸ್ ಪ್ರಮುಖ ಪರೀಕ್ಷೆ ನಡೆಯಲಿದೆ ಎಂದು ನಿರೀಕ್ಷೆ ಇದ್ದು, ಶಾರ್ಟ್ ಲಿಸ್ಟ್ ನಲ್ಲಿ ಸೆಲೆಕ್ಟ್ ಆಗುವ ಅಭ್ಯರ್ಥಿಗಳು ಆಗಾಗ ಐಬಿಪಿಎಸ್ ಆಫೀಶಿಯಲ್ ವೆಬ್‌ಸೈಟ್ ಚೆಕ್ ಮಾಡುತ್ತಾ ಇರಬೇಕು ಹಾಗೂ ಈ ಪ್ರಮುಖ ಪರೀಕ್ಷೆ ವೇಳೆ ಅಭ್ಯರ್ಥಿಗಳು ಸಂಬಂಧಪಟ್ಟ ಎಲ್ಲಾ ದಾಖಲೆ ಪತ್ರಗಳನ್ನ ಜತೆಗೆ ಕೊಂಡೊಯ್ಯಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನು ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ಪ್ರಾರಂಭ ಮುನ್ನ ಹಾಗೂ ಪರೀಕ್ಷೆ ಮುಕ್ತಾಯದ ಬಳಿಕ ಒಟ್ಟು ಎರಡು ಬಾರಿ ಅಭ್ಯರ್ಥಿಗಳ ಫೋಟೋ ಕ್ಲಿಕ್ಕಿಸಲಾಗುವುದು. ಹಾಗೂ ಯಾವುದೇ ಬ್ಯಾನ್ ಆಗಿರುವ ಸಾಮಾಗ್ರಿಗಳನ್ನ ಪರೀಕ್ಷೆ ಹಾಲ್ ಗೆ ತರುವಂತಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಆಧಾರದ ಮೇಲೆ ಸಂದರ್ಶನಕ್ಕಾಗಿ ಅಭ್ಯರ್ಥಿಗಳ ಹೆಸರನ್ನ ಶಾರ್ಟ್ ಲಿಸ್ಟ್ ಮಾಡಲಾಗುವುದು. ಐಬಿಪಿಎಸ್ ಪಿಒ ಪ್ರಿಲಿಮ್ಸ್ 2018 ಸ್ಕೋರ್ ಕಾರ್ಡ್ ಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Institute of Banking Personnel Selection (IBPS) has released the IBPS PO online preliminary exam scores. Candidates who have appeared for this examination on October 13 and 14 can now visit the official website of IBPS to check their scores for the IBPS PO preliminary examinations 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X