ದಿ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ 2019ನೇ ಸಾಲಿನ ಐಬಿಪಿಎಸ್ ಆರ್‌ಆರ್‌ಬಿ ಪ್ರೊಬೇಷನರಿ ಅಧಿಕಾರಿ ಮತ್ತು ಕ್ಲರ್ಕ್ ಹುದ್ದೆಗಳ ಫಲಿತಾಂಶವನ್ನು ಪ್ರಕಟಿಸಿದೆ. ಅಧಿಕಾರಿ ಮತ್ತು ಅಧಿಕಾರಿ ಸಹಾಯಕ ಹುದ್ದೆಗಳಿಗೆ ಮೀಸಲಾತಿ ವರ್ಗದಡಿಯಲ್ಲಿ ಅಭ್ಯರ್ಥಿಗಳ ತಾತ್ಕಾಲಿಕ ಹಂಚಿಕೆಯ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

ಐಬಿಪಿಎಸ್ ಆರ್‌ಆರ್‌ಬಿ ಆಫೀಸರ್ ಸ್ಕೇಲ್ 1 ಪ್ರಿಲಿಮ್ಸ್ ಪರೀಕ್ಷೆಯನ್ನು ಆಗಸ್ಟ್ 03, 04, 11, 2019 ರಂದು ನಡೆಸಲಾಗಿತ್ತು ಮತ್ತು ಐಬಿಪಿಎಸ್ ಆರ್‌ಆರ್‌ಬಿ ಆಫೀಸ್ ಅಸಿಸ್ಟೆಂಟ್ ಪ್ರಿಲಿಮ್ಸ್ ಪರೀಕ್ಷೆಯನ್ನು ಆಗಸ್ಟ್ 17, 18, 25, 2019 ರಂದು ನಡೆಸಲಾಗಿತ್ತು. ಈ ಪರೀಕ್ಷೆಗಳನ್ನು ಬರೆದ ವಿದ್ಯಾರ್ಥಿಗಳು ಫಲಿತಾಂಶವನ್ನು ವೀಕ್ಷಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.
ಐಬಿಪಿಎಸ್ ಆರ್‌ಆರ್‌ಬಿ ಪಿಓ ಮತ್ತು ಕ್ಲರ್ಕ್ ಹುದ್ದೆಗಳ ಫಲಿತಾಂಶ ವೀಕ್ಷಿಸುವುದು ಹೇಗೆ?:
ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://www.ibps.in/ ಗೆ ಭೇಟಿ ನೀಡಿ.
ಸ್ಟೆಪ್ 2: ನಂತರ "IBPS RRB PO and Clerk Result 2019" ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಇನ್ನೊಂದು ಪುಟಕ್ಕೆ ಹೋಗುವಿರಿ ಅಲ್ಲಿ ನಿಮ್ಮ ರಿಜಿಸ್ಟ್ರೇಶನ್ ನಂಬರ್ ಮತ್ತು ಪಾಸ್‌ವರ್ಡ್ ನೀಡಿ ಲಾಗಿನ್ ಆಗಿ
ಸ್ಟೆಪ್ 4: ಅಭ್ಯರ್ಥಿಗಳು ನಿಮ್ಮ ಫಲಿತಾಂಶ ಜೊತೆಗೆ ಮೀಸಲಾತಿ ವರ್ಗದಡಿಯಲ್ಲಿ ಅಭ್ಯರ್ಥಿಗಳ ತಾತ್ಕಾಲಿಕ ಹಂಚಿಕೆಯ ಪಟ್ಟಿಯನ್ನು ವೀಕ್ಷಿಸಿ
ಸ್ಟೆಪ್ 5: ಅಭ್ಯರ್ಥಿಗಳು ನಿಮ್ಮ ಫಲಿತಾಂಶದ ಪ್ರಿಂಟೌಟ್ ಅನ್ನು ತೆಗೆದಿಟ್ಟುಕೊಳ್ಳಿ


Click it and Unblock the Notifications











