ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಟ್ಸ್ ಆಫ್ ಇಂಡಿಯಾ, ಇದೀಗ ಸಿಎ ಫೌಂಡೇಶನ್, ಇಂಟರ್ ಮೀಡಿಯೆಟ್, ಇಂಟರ್ ಮೀಡಿಯೆಟ್ ಫೈನಲ್ ಮತ್ತು ಫೈನಲ್ ನ್ಯೂ ನವಂಬರ್ 2018 ಪರೀಕ್ಷೆಯ ಪ್ರವೇಶ ಪತ್ರ ಇದೀಗ ಪ್ರಕಟಿಸಿದೆ. ಈ ಪರೀಕ್ಷೆಗೆ ರಿಜಿಸ್ಟ್ರೇಶನ್ ಮಾಡಿಸಿಕೊಂಡಿರುವ ಅಭ್ಯರ್ಥಿಗಳು ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಸಿಎ ಫೌಂಡೇಶನ್, ಇಂಟರ್ ಮೀಡಿಯೆಟ್, ಇಂಟರ್ ಮೀಡಿಯೆಟ್ ಫೈನಲ್ ಮತ್ತು ಫೈನಲ್ ನ್ಯೂ ನವಂಬರ್ 2018 ಪರೀಕ್ಷೆಯ ಪ್ರವೇಶ ಪತ್ರ ಇದೀಗ ಆಫೀಶಿಯಲ್ ವೆಬ್‌ಸೈಟ್ ನಲ್ಲಿ ಲಭ್ಯವಿದೆ. ಇನ್ನು ಪ್ರವೇಶ ಪತ್ರದಲ್ಲಿ ಅಭ್ಯರ್ಥಿಗಳ ಫೋಟೋ ಹಾಗೂ ಸಹಿ ಕೂಡಾ ಇರಲಿದೆ. ಅಭ್ಯರ್ಥಿಗಳಿಗೆ ಫೋಸ್ಟ್ ಮೂಲಕ ಪ್ರವೇಶ ಪತ್ರ ಕಳುಹಿಸಲಾಗುವುದಿಲ್ಲ. ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿ, ಪ್ರಿಂಟೌಟ್ ತೆಗೆದುಕೊಳ್ಳತಕ್ಕದ್ದು.
ಪ್ರವೇಶ ಪತ್ರ ಡೌನ್‌ಲೋಡ್:
ಈ ಕೆಳಗಿನ ಸ್ಟೆಪ್ ಮೂಲಕ ಅಭ್ಯರ್ಥಿಗಳು ಪ್ರವೇಶ ಪತ್ರವನ್ನ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಸ್ಟೆಪ್ 1
ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಟ್ಸ್ ಆಫ್ ಇಂಡಿಯಾ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2
ನೋಟಿಫಿಕೇಶನ್ ಲಿಸ್ಟ್ ಮೂಡುತ್ತದೆ
ಸ್ಟೆಪ್ 3
ಅನೌಂಸ್ ಮೆಂಟ್ ಬಾಕ್ಸ್ ಒಳಗೆ ಇರುವ Admit Cards : Foundation, Intermediate(IPC), Intermediate, Final-Existing and Final-New November 2018 Examination ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4
ಹೇಗೆ ಡೌನ್‌ಲೋಡ್ ಮಾಡಲಾಗುವುದು ಎಂದು ಸೂಚನೆ ಮೂಡುತ್ತದೆ. ಕೇರ್ ಫುಲ್ ಆಗಿ ಓದಿಕೊಳ್ಳಿ
ಸ್ಟೆಪ್ 5
ಬಳಿಕ ಹೋಮ್‌ಪೇಜ್ ಗೆ ಹಿಂತಿರುಗಿ ಟಾಪ್ ಟ್ಯಾಬ್‌ನ ಎಡಭಾಗದಲ್ಲಿ ಲಾಗಿನ್ ರಿಜಿಸ್ಟ್ರೇಶನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಐಡಿ ಹಾಗೂ ಪಾಸ್‌ವರ್ಡ್ ನಮೂದಿಸಿ
- ಸ್ಟೆಪ್ 6: ಡೌನ್‌ಲೋಡ್ ಅಡ್ಮಿಟ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 7: ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಟ್ಸ್ ಆಫ್ ಇಂಡಿಯಾ ಪರೀಕ್ಷೆಯನ್ನ ಆಯ್ಕೆ ಮಾಡಿ
- ಸ್ಟೆಪ್ 8: ಸ್ಕ್ರೀನ್ ಮೇಲೆ ಅಡ್ಮಿಟ್ ಕಾರ್ಡ್ ಮೂಡುತ್ತದೆ, ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ


Click it and Unblock the Notifications