CA Exam Guidelines : ಸಿಎ ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಮಾರ್ಗಸೂಚಿ ಪ್ರಕಟ

ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ICAI ಸಿಎ ಡಿಸೆಂಬರ್ ಪರೀಕ್ಷೆ 2021 ರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸಂಸ್ಥೆಯು ಪರೀಕ್ಷಾ ಕೇಂದ್ರಗಳು, ಪರೀಕ್ಷಾ ಕಾರ್ಯನಿರ್ವಾಹಕರು ಮತ್ತು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಪರೀಕ್ಷಾರ್ಥಿಗಳು ಒಮ್ಮೆ ಅಧಿಕೃತ ವೆಬ್‌ಸೈಟ್ icai.org ಗೆ ಭೇಟಿ ನೀಡಿ ಓದಿಕೊಳ್ಳಬಹುದು.

ಸಿಎ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ರಿಲೀಸ್

ICAI ಸಿಎ ಡಿಸೆಂಬರ್ ಪರೀಕ್ಷೆಯನ್ನು ಡಿಸೆಂಬರ್ 5 ರಿಂದ ಡಿಸೆಂಬರ್ 20, 2021 ರವರೆಗೆ ದೇಶಾದ್ಯಂತ 192 ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ. ಕೋವಿಡ್ ಸಾಂಕ್ರಾಮಿಕದ ನಡುವೆಯೂ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಸಹ ಹೊರಡಿಸಲಾಗಿದೆ.

ಪರೀಕ್ಷೆಗೆ ಸಾಮಾನ್ಯ ಮಾರ್ಗಸೂಚಿಗಳು :

ಸುರಕ್ಷತಾ ಮುನ್ನೆಚ್ಚರಿಕಾ ಕ್ರಮವಾಗಿ ಮತ್ತು ಅಗತ್ಯವಿರುವ ನೈರ್ಮಲ್ಯ ಕಾಪಾಡಿಕೊಳ್ಳುವಂತೆ ಎಸ್‌ಒಪಿ ಅನ್ನು ಪಾಲಿಸುವುದು.

ಪರೀಕ್ಷೆಯ ಪ್ರಾರಂಭದ ಮೊದಲು ಪರೀಕ್ಷಾ ಕೊಠಡಿಯ ಆಸನಗಳನ್ನು ಸ್ವಚ್ಚಗೊಳಿಸಬೇಕು.

ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಬೇಕು.

ಪರೀಕ್ಷಾರ್ಥಿಗಳು ಇಚ್ಚಿಸಿದಲ್ಲಿ ಸ್ವಂತ ಕೈಯಿಂದ ಆಸನಗಳನ್ನು ಮತ್ತಷ್ಟು ಸ್ವಚ್ಛಗೊಳಿಸಿಕೊಳ್ಳಬಹುದು.

ಪರೀಕ್ಷೆಗೆ ಹೆಚ್ಚುವರಿಯಾಗಿ ಸ್ಯಾನಿಟೈಸ್, ಮುಖ ಕವಚ, ಕೈ ಕೈಗವಸುಗಳು ಇತ್ಯಾದಿಗಳನ್ನು ಸಹ ಒಯ್ಯಬಹುದು.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.

ವಿದ್ಯಾರ್ಥಿಗಳು ಮತ್ತು ಪರೀಕ್ಷೆಗೆ ಹಾಜರಾಗುವ ಕಾರ್ಯನಿರ್ವಾಹಕರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತದೆ.

ಪರೀಕ್ಷಾ ಕೇಂದ್ರದ ಪ್ರವೇಶದಲ್ಲಿ ಮತ್ತು ಪರೀಕ್ಷಾ ಕೇಂದ್ರದ ಒಳಗೆ ಹ್ಯಾಂಡ್ ಸ್ಯಾನಿಟೈಸರ್ ಲಭ್ಯವಿಡುವುದು.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಈ ಕೆಳಗಿನ ವಸ್ತುಗಳನ್ನು ಕೊಂಡೊಯ್ಯಲು ಅನುಮತಿಸಲಾಗಿದೆ.

* ಮುಖದ ಮೇಲೆ ಮಾಸ್ಕ್ (ಕಡ್ಡಾಯ) ಮತ್ತು ಫೇಸ್ ಶೀಲ್ಡ್ (ಐಚ್ಛಿಕ)ಕಡ್ಡಾಯವಾಗಿ ಧರಿಸಬೇಕು.

* ಕೈಯಲ್ಲಿ ಕೈಗವಸುಗಳನ್ನು ಹಾಕಿರಬೇಕು.

* ವೈಯಕ್ತಿಕ ಪಾರದರ್ಶಕ ನೀರಿನ ಬಾಟಲ್ ಗಳನ್ನು ಪರೀಕ್ಷೆಗೆ ಒಯ್ಯಬೇಕು.

* ವೈಯಕ್ತಿಕ ಸಣ್ಣ ಕೈ ಸ್ಯಾನಿಟೈಸರ್ ಅನ್ನು ಪರೀಕ್ಷೆಗೆ ಒಯ್ಯಿರಿ.

* ಸೂಚನೆಯಂತೆ ಪರೀಕ್ಷೆಗೆ ಸಂಬಂಧಿಸಿದ ಅಗತ್ಯ ವಸ್ತುಗಳು/ದಾಖಲೆಗಳು (ಕ್ಯಾಲ್ಕುಲೇಟರ್‌ಗಳು, ಸ್ಟೇಷನರಿ ವಸ್ತುಗಳು, ಪ್ರವೇಶ ಕಾರ್ಡ್, ಫೋಟೋ ಐಡಿ ಕಾರ್ಡ್, ಇತ್ಯಾದಿ) ತೆಗೆದುಕೊಂಡು ಹೋಗಬೇಕು.

ICAI CA ಡಿಸೆಂಬರ್ 2021ರ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ವಿವರವಾದ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
ICAI released CA Exam guidelines for aspirants who are attending the exam.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+