CA Exam 2020: ಮೇ ತಿಂಗಳ ಸಿಎ ಪರೀಕ್ಷೆ ರದ್ದು

ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್ ಅಕೌಂಟಂಟ್ಸ್ ಆಫ್‌ ಇಂಡಿಯಾ (ಐಸಿಎಐ) 2020ರ ಮೇ ತಿಂಗಳ ಸಿಎ ಪರೀಕ್ಷೆಯನ್ನು ರದ್ದುಗೊಳಿಸಿದೆ. ಈ ಪರೀಕ್ಷೆಯನ್ನು 2020ರ ನವೆಂಬರ್ ಪರೀಕ್ಷೆ ಜೊತೆಗೆ ನಡೆಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಕುರಿತು ಐಸಿಎಐ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಐಸಿಎಐ ಸಿಎ ಪರೀಕ್ಷೆ ರದ್ದು

2020 ರ ಮೇ ತಿಂಗಳಲ್ಲಿ ಪರೀಕ್ಷೆ ಬರೆಯಲಿದ್ದ ಅಭ್ಯರ್ಥಿಗಳು, ನವೆಂಬರ್‌ ತಿಂಗಳಿನಲ್ಲಿ ಪರೀಕ್ಷೆಯನ್ನು ಬರೆಯಬಹುದು. ಹಾಗೆಯೇ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ವಿಷಯಗಳ ಗುಂಪು ಮತ್ತು ಪರೀಕ್ಷೆ ಕೇಂದ್ರವನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಐಸಿಎಐ ಸೆಕ್ರೆಟರಿ ಎಸ್‌.ಕೆ. ಗಾರ್ಗ್ ರವರು ಶುಕ್ರವಾರ ನೋಟಿಸ್ ಹೊರಡಿಸುವ ಮೂಲಕ, "ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಮೇ 2020ರ ಸಿಎ ಪರೀಕ್ಷೆಯನ್ನು ಮುಂದೂಡಲಾಗಿದ್ದು, ನವೆಂಬರ್ ಪರೀಕ್ಷೆಯೊಂದಿಗೆ ಈ ಪರೀಕ್ಷೆಯನ್ನು ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ನವೆಂಬರ್ 2020ರ ಪರೀಕ್ಷೆಗೆ ಹೊಸದಾಗಿ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಅನುಕೂಲಕ್ಕೆ ತಕ್ಕ ಪರೀಕ್ಷೆ ಕೇಂದ್ರಗಳು, ವಿಷಯಗಳ ಗುಂಪನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ," ಎಂದು ತಿಳಿಸಿದ್ದಾರೆ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್ ಅಕೌಂಟಂಟ್ಸ್‌ ಆಫ್‌ ಇಂಡಿಯಾದ ಅಧಿಕೃತ ವೆಬ್‌ಸೈಟ್‌ www.icai.org ಗೆ ಭೇಟಿ ನೀಡಬಹುದು. ಇತರೆ ಮಾಹಿತಿಗಾಗಿ [email protected] ವಿಳಾಸಕ್ಕೆ ಮೇಲ್ ಮಾಡುವ ಮೂಲಕ ತಮ್ಮ ಪ್ರಶ್ನೆಗಳನ್ನು ಕಳುಹಿಸಬಹುದು.

For Quick Alerts
ALLOW NOTIFICATIONS  
For Daily Alerts

English summary
CA May 2020 exam cancelled. Exam will held on november.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X