ಐಸಿಎಸ್‌ಸಿ ಐಎಸ್‌ಸಿ ಫಲಿತಾಂಶ ಪ್ರಕಟ ಬೆಂಗಳೂರಿನ ವಿಭಾ ದೇಶಕ್ಕೆ ಟಾಪರ್

ಸಿಬಿಎಸ್ಇ ಪರೀಕ್ಷೆ ಫಲಿತಾಂಶ ಪ್ರಕಟವಾದ ನಂತರ ಮೇ 07 ರಂದು ಐಸಿಎಸ್ಇ ಮತ್ತು ಐಎಸ್ಸಿ ಪಠ್ಯಕ್ರಮದ 10 ಮತ್ತು 12ನೇ ತರಗತಿ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದೆ. ಈ ಪರೀಕ್ಷೆಯಲ್ಲಿ ಬೆಂಗಳೂರಿನ ವಿಭಾ ದೇಶಕ್ಕೆ ಟಾಪರ್ ಆಗಿದ್ದಾರೆ.

 ಐಸಿಎಸ್‌ಸಿ ಐಎಸ್‌ಸಿ ಫಲಿತಾಂಶ ಪ್ರಕಟ

ಐಸಿಎಸ್‌ಇ 12ನೇ ತರಗತಿಯಲ್ಲಿ ನಗರದ ಮಲ್ಯ ಅದಿತಿ ಇಂಟರ್‌ ನ್ಯಾಷನಲ್‌ ಸ್ಕೂಲ್‌ ವಿದ್ಯಾರ್ಥಿನಿ ವಿಭಾ ಸ್ವಾಮಿನಾಥನ್‌ 400ಕ್ಕೆ 400 ಅಂಕ ಗಳಿಸುವ ಮೂಲಕ ದೇಶದ ಜಂಟಿ ಟಾಪರ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.ವಿಶೇಷವೆಂದರೆ, ಇದೇ ಶಾಲೆಯ ಇನ್ನೂ ಮೂವರು ಟಾಪರ್‌ಗಳು ರಾಷ್ಟ್ರಮಟ್ಟದಲ್ಲಿ 2 ಮತ್ತು 3ನೇ ಸ್ಥಾನ ಗಳಿಸಿದ್ದಾರೆ. ಫಝಿಲ್‌ ನಯೀರ್‌ 399 ಅಂಕ ಗಳಿಸಿದ್ದರೆ, ದೀಕ್ಷಾ ಬಾಲಾಜಿ ಮತ್ತು ಮಿಹಿರ್‌ ವಿಶ್ವನಾಥನ್‌ ರಾಜಮಾನೆ ತಲಾ 398 ಅಂಕ ಪಡೆದಿದ್ದಾರೆ.10 ನೇ ತರಗತಿಯಲ್ಲಿ ನಗರದ ಶ್ರೀ ವಾಣಿ ಪಬ್ಲಿಕ್‌ ಸ್ಕೂಲ್‌ನ ವಿ.ಸಾಧನಾ ದೇಶದ 3ನೇ ಟಾಪರ್‌ ಆಗಿದ್ದಾರೆ.

<strong>ರೈಲು ವಿಳಂಬದಿಂದ ಅವಕಾಶ ವಂಚಿತರಾದ ಕರ್ನಾಟಕ ವಿದ್ಯಾರ್ಥಿಗಳಿಗಾಗಿ ಮೇ 20ಕ್ಕೆ ನೀಟ್ ಮರು ಪರೀಕ್ಷೆ</strong>ರೈಲು ವಿಳಂಬದಿಂದ ಅವಕಾಶ ವಂಚಿತರಾದ ಕರ್ನಾಟಕ ವಿದ್ಯಾರ್ಥಿಗಳಿಗಾಗಿ ಮೇ 20ಕ್ಕೆ ನೀಟ್ ಮರು ಪರೀಕ್ಷೆ

ಈ ಮಧ್ಯೆ, 12ನೇ ತರಗತಿಯಲ್ಲಿ ರಾಜ್ಯದ ವಿದ್ಯಾರ್ಥಿಗಳ ಸಾಧನೆ ಈ ಬಾರಿ ಸುಧಾರಿಸಿದ್ದರೆ, 10ನೇ ತರಗತಿಯಲ್ಲಿ ಸಾಧನೆ ಕೊಂಚ ಕುಸಿದಿದೆ. 12ನೇ ತರಗತಿಯ ಒಟ್ಟಾರೆ ಉತ್ತೀರ್ಣ ಪ್ರಮಾಣ ಶೇ 99.49 ಆಗಿದ್ದು (ಕಳೆದ ವರ್ಷ ಶೇ 99.2), 10ನೇ ತರಗತಿಯ ಉತ್ತೀರ್ಣ ಪ್ರಮಾಣ ಶೇ 99.77 (ಕಳೆದ ವರ್ಷ ಶೇ 99.78) ಆಗಿದೆ. ರಾಜ್ಯದ 35 ಶಾಲೆಗಳ 1,769 ವಿದ್ಯಾರ್ಥಿಗಳು 12ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 9 ಮಂದಿ ಅನುತ್ತೀರ್ಣರಾಗಿದ್ದಾರೆ. 10ನೇ ತರಗತಿಯಲ್ಲಿ 18,217 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 42 ಮಂದಿ ಅನುತ್ತೀರ್ಣರಾಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, 12ನೇ ತರಗತಿಯಲ್ಲಿ ಬಾಲಕಿಯರೆಲ್ಲರೂ ಉತ್ತೀರ್ಣರಾಗಿದ್ದಾರೆ.

ಫಲಿತಾಂಶ ನೋಡುವುದು ಹೇಗೆ?

ಸ್ಟೆಪ್ 1: http://www.examresults.net/ ವೆಬ್‌ಸೈಟ್‌ ಭೇಟಿ ನೀಡಿ.
ಸ್ಟೆಪ್ 2: ಫಲಿತಾಂಶ 2019ರ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 3: ನಿಮ್ಮ ಪಠ್ಯಕ್ರಮ ವಿಷಯ ಆಯ್ಕೆ ಮಾಡಿಕೊಳ್ಳಿ
ಸ್ಟೆಪ್ 4: ಪ್ರವೇಶ ಸಂಖ್ಯೆ ಇತ್ಯಾದಿ ವಿವರಗಳನ್ನು ನೀಡಿ
ಸ್ಟೆಪ್ 5: 'Submit' ಕ್ಲಿಕ್ ಮಾಡಿ. ಫಲಿತಾಂಶ ವಿವರ ಪಡೆಯಿರಿ,
ನಂತರ ವಿದ್ಯಾರ್ಥಿಗಳು ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಂಡು ಅದರ ಪ್ರಿಂಟ್ ಔಟ್ ಪಡೆಯಿರಿ.

For Quick Alerts
ALLOW NOTIFICATIONS  
For Daily Alerts

English summary
ICSE, ISC Result 2019: 10th, 12th Results Announced in official website on 7th may 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X