ಐಸಿಎಸ್ಇ ಅಂಕಮಿತಿ: 10ನೇ ತರಗತಿಗೆ ಶೇ.33, 12ನೇ ತರಗತಿಗೆ ಶೇ.35

ಐಸಿಎಸ್ಇ ಮಂಡಳಿಯು 2019ರ ಪರೀಕ್ಷೆಯಲ್ಲಿ ಹತ್ತನೇ ತರಗತಿ ಹಾಗೂ ಹನ್ನೆರಡನೇ ತರಗತಿಯ ಶೇಕಡವಾರು ಉತ್ತೀರ್ಣ ಅಂಕಮಿತಿಯನ್ನು ಇಳಿಸಿದೆ.

 

ಈ ಹಿಂದೆ ಇದ್ದ ಅಂಕಮಿತಿಗಿಂತ ಹತ್ತನೆ ತರಗತಿಯಲ್ಲಿ ಎರಡು ಪರ್ಸೆಂಟ್ ಹಾಗೂ ಹನ್ನೆರಡನೇ ತರಗತಿಯಲ್ಲಿ ಐದು ಪರ್ಸೆಂಟ್ ಅಂಕಗಳನ್ನು ಕಡಿಮೆ ಮಾಡಲಾಗಿದೆ.

ಐಸಿಎಸ್ಇ ಅಂಕಮಿತಿ ಇಳಿಕೆ

ಈ ಬಗ್ಗೆ ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಪರಿಷತ್ತು ಸೋಮವಾರ ಸುತ್ತೋಲೆ ಹೊರಡಿಸಿದ್ದು, 2018-19ನೇ ಶೈಕ್ಷಣಿಕ ಸಾಲಿನಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ.

ಸದ್ಯ ಅಂಕಮಿತಿಯು ಹತ್ತನೇ ತರಗತಿಗೆ ಶೇ.35 ಮತ್ತು ಹನ್ನೆರಡನೇ ತರಗತಿಗೆ ಶೇ.40 ಇದೆ. ನೂತನ ಕ್ರಮದಂತೆ ಹತ್ತನೇ ತರಗತಿಗೆ ಶೇ.33 ಮತ್ತು ಹನ್ನೆರಡನೇ ತರಗತಿಗೆ ಶೇ.35 ಆಗಲಿದೆ.

ದೇಶದ ಸುಮಾರು 2100 ಶಾಲೆಗಳು ಐಸಿಎಸ್ಇ ಪಠ್ಯಕ್ರಮ ಅನುಸರಿಸುತ್ತಿವೆ, ಬೇರೆ ಮಂಡಳಿಗಳ ಪರೀಕ್ಷಾ ಫಲಿತಾಂಶದೊಂದಿಗೆ ಸಾಮ್ಯತೆ ತರಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ.

 

ಐಸಿಎಸ್ಇ

ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್ (ಐಸಿಎಸ್ಇ) ಯು ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಷಮ ( ಐಎಸ್ ಸಿಇ) ನಡೆಸುವ ಪರೀಕ್ಷೆಯಾಗಿದೆ. ಸಾಮಾನ್ಯ ಶಿಕ್ಷಣದ ಉದ್ದೇಶದಿಂದ ಪ್ರಾರಂಭವಾದ ಇದು ಹೊಸ ಹೊಸ ಶಿಕ್ಷಣ ನೀತಿಗಳನ್ನು ಅಳವಡಿಸಿಕೊಳ್ಳುತ್ತಾ ಬಂದಿದೆ. ಇದು 1986 ರ ಮೊದಲು ಫ್ರೆಂಚ್ ಬೋರ್ಡ್ ಆಫ್ ಎಕ್ಸಾಮಿನೇಷನ್ಗೆ ಸಂಬಂಧಿಸಿತ್ತು.

For Quick Alerts
ALLOW NOTIFICATIONS  
For Daily Alerts

English summary
The Council for the Indian School Certificate Examinations (CISCE) has announced to decrease the pass percentage for class 10 and 12 examinations from 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X