IGNOU: ಅಂತಿಮ ವರ್ಷದ ಪರೀಕ್ಷೆಗಳ ಪರೀಕ್ಷಾ ದಿನಾಂಕ ಪ್ರಕಟ

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ (ಇಗ್ನೋ) ಜೂನ್‌ ತಿಂಗಳ ಅಂತಿಮ ವರ್ಷದ / ಸೆಮಿಸ್ಟರ್ ಪರೀಕ್ಷೆಗಳನ್ನು ಸೆಪ್ಟೆಂಬರ್‌ ತಿಂಗಳಿನಲ್ಲಿ ನಡೆಸಲು ನಿರ್ಧರಿಸಿದೆ. ಇಗ್ನೊ ನೀಡಿದ ಪ್ರಕಟಣೆಯಲ್ಲಿ, "ಜೂನ್‌ ತಿಂಗಳಲ್ಲಿ ನಡೆಯಬೇಕಿದ್ದ ಸ್ನಾತಕೋತ್ತರ, ಪದವಿ, ಪೋಸ್ಟ್‌ ಗ್ರಾಜುಯೇಟ್ ಡಿಪ್ಲೊಮ, ಡಿಪ್ಲೊಮ ಮತ್ತು ಸರ್ಟಿಫಿಕೇಟ್‌ ಪ್ರೋಗ್ರಾಮ್‌ಗಳ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಸೆಪ್ಟೆಂಬರ್ ತಿಂಗಳ ಮೊದಲ ವಾರ ನಡೆಸಲಾಗುತ್ತದೆ," ಎಂದು ತಿಳಿಸಿದೆ.

ಇಗ್ನೋ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಹತ್ವ ಮಾಹಿತಿ

ಮಾನವ ಸಂಪನ್ಮೂಲ ಅಭವೃದ್ಧಿ ಸಚಿವಾಲಯ ಮತ್ತು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗದ ಮಾರ್ಗಸೂಚಿಯಂತೆ ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಇಗ್ನೊ ತಿಳಿಸಿದೆ. ಯುಜಿಸಿಯು ಇತ್ತೀಚೆಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಸೆಪ್ಟೆಂಬರ್‌ನಲ್ಲಿ ಅಂತಿಮ ವರ್ಷದ / ಸೆಮಿಸ್ಟರ್‌ಗಳ ಪರೀಕ್ಷೆ ನಡೆಸುವ ಕುರಿತು ವಿವಿಗಳಿಂದ ಅಭಿಪ್ರಾಯ ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಇಗ್ನೊ ಯುನಿವರ್ಸಿಟಿ ನಿಯಮಗಳು ಮತ್ತು ರಿಜಿಸ್ಟ್ರೇಷನ್ ವ್ಯಾಲಿಡಿಟಿ ಅವಧಿಯನ್ನು ಪೂರ್ಣಗೊಳಿಸುವ ಸಲುವಾಗಿ ಟರ್ಮ್‌ ಎಂಡ್ ಎಕ್ಸಾಮಿನೇಷನ್‌ ನಡೆಸಲಾಗುವುದು ಎಂದು ತಿಳಿಸಿತ್ತು.

ಅಂತಿಮ ವರ್ಷದ / ಸೆಮಿಸ್ಟರ್‌ನ ಮಾಸ್ಟರ್‌ ಡಿಗ್ರಿ, ಬ್ಯಾಚುಲರ್ ಡಿಗ್ರಿ, ಪಿಜಿ ಡಿಪ್ಲೊಮ / ಡಿಪ್ಲೊಮ ಮತ್ತು ಸರ್ಟಿಫಿಕೇಟ್‌ ಪ್ರೋಗ್ರಾಮ್‌ಗಳ ಪರೀಕ್ಷೆಗಳಿಗೆ ರಿಜಿಸ್ಟರ್‌ ಪಡೆದಿರುವ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಇಗ್ನೊ ಮಧ್ಯಂತರ ಸೆಮಿಸ್ಟರ್ / ವರ್ಷದ ವಿದ್ಯಾರ್ಥಿಗಳಿಗೂ ಡಿಸೆಂಬರ್ ತಿಂಗಳಲ್ಲಿ ಪರೀಕ್ಷೆ ನಡೆಸುವ ಕುರಿತು ಹೇಳಿದೆ. ಕೋವಿಡ್‌-19 ಕಾರಣದಿಂದ ಸೆಪ್ಟೆಂಬರ್‌ನಲ್ಲಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ, ಡಿಸೆಂಬರ್ ಅವಧಿಯಲ್ಲಿ ನಡೆಸಲಾಗುವ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ ಎಂದು ಇಗ್ನೋ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

For Quick Alerts
ALLOW NOTIFICATIONS  
For Daily Alerts

English summary
ignou final year exams to be held in september as per ugc guidelines.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X