IGNOU Launches BSW Programme : ಇನ್ಮುಂದೆ ಆನ್‌ಲೈನ್ ಮೋಡ್ ನಲ್ಲಿ ಬಿಎಸ್‌ಡಬ್ಲ್ಯೂ ಕೋರ್ಸ್ ಲಭ್ಯ

ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯವು (IGNOU) ಸಾಮಾಜಿಕ ಕಾರ್ಯದಲ್ಲಿ ಬ್ಯಾಚುಲರ್ ಪ್ರೋಗ್ರಾಂ ಅನ್ನು ವರ್ಚುವಲ್ ಮೋಡ್‌ನಲ್ಲಿ ಪ್ರಾರಂಭಿಸಿದೆ.

ಸಾಮಾಜಿಕ ಕಾರ್ಯದಲ್ಲಿ ಬಿಎಸ್‌ಡಬ್ಲ್ಯೂ ಪದವಿ ಕೋರ್ಸ್ ಲಾಂಚ್ ಮಾಡಿದ ಇಗ್ನೋ

ವೃತ್ತಿಪರ ಕೋರ್ಸ್ ಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಸಾಮಾಜಿಕ ಕಾರ್ಯದಲ್ಲಿ ಬ್ಯಾಚುಲರ್ ಪದವಿ ಕಾರ್ಯಕ್ರಮ (BSW) ಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

"ಬದಲಾಗುತ್ತಿರುವ ಜಾಗತಿಕ ಬೆಳವಣಿಗೆಗಳೊಂದಿಗೆ ಮಾನವನ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಕಾಳಜಿ ತೋರಲು ಸಮಾಜ ಕಾರ್ಯವು ನೆರವಾಗಲಿದೆ ಮತ್ತು ಸಮಾಜದಲ್ಲಿ ಬದಲಾವಣೆಯನ್ನು ತರುತ್ತದೆ" ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಬಿಎಸ್‌ಡಬ್ಲ್ಯೂ ಆನ್‌ಲೈನ್ ಕಾರ್ಯಕ್ರಮವನ್ನು ಪ್ರೊ.ನಾಗೇಶ್ವರ್ ರಾವ್ (ಉಪ ಕುಲಪತಿ, ಇಗ್ನೋ), ಪ್ರೊ.ವೈ.ಎಸ್.ಸಿದ್ದೇಗೌಡ (ಉಪಕುಲಪತಿ), ತುಮಕೂರು ವಿಶ್ವವಿದ್ಯಾಲಯ, ಪ್ರೊ.ಕೆ.ಶೇಖರ್, ನಿವೃತ್ತ. Sr. ಪ್ರೊ ಮತ್ತು ಮಾಜಿ ರಿಜಿಸ್ಟ್ರಾರ್, ನಿಮ್ಹಾನ್ಸ್, ಬೆಂಗಳೂರು, ಪ್ರೊ. ಸಂಜಯ್ ಭಟ್, (ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕರು, ದೆಹಲಿ ವಿಶ್ವವಿದ್ಯಾಲಯ) ಮತ್ತು ಪ್ರೊ. ರೋಸ್ ನೆಂಬಿಯಾಕ್ಕಿಮ್ (ನಿರ್ದೇಶಕರು, ಸ್ಕೂಲ್ ಆಫ್ ಸೋಶಿಯಲ್ ವರ್ಕ್,ಇಗ್ನೋ) ಉಪಸ್ಥಿತರೊಂದಿಗೆ ಲಾಂಚ್ ಮಾಡಲಾಯಿತು.

ಆನ್‌ಲೈನ್ ಬಿಎಸ್‌ಡಬ್ಲ್ಯೂ ಕಾರ್ಯಕ್ರಮವು ದೇಶದ ಹೊಸ ಶಿಕ್ಷಣ ನೀತಿ (NEP-2020) ಮಾರ್ಗಸೂಚಿಗಳನ್ನು ಅನುಸರಿಸಲಿದೆ ಎಂದು ಇಗ್ನೋ ಉಪಕುಲಪತಿ ಪ್ರೊ. ನಾಗೇಶ್ವರ ರಾವ್ ಹೇಳಿದರು.

ಸಮಾಜ ಕಾರ್ಯದಲ್ಲಿ ಬ್ಯಾಚುಲರ್ ಪದವಿ ಕಾರ್ಯಕ್ರಮವು NGOಗಳು, INGOಗಳು, CSR ಮತ್ತು ಇತರ ವಕಾಲತ್ತು ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವ ಅಥವಾ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉಪಯುಕ್ತವಾಗಲಿದೆ. ಬಿಎಸ್‌ಡಬ್ಲ್ಯೂ ಪದವೀಧರರು ಸಾಮಾಜಿಕವಾಗಿ ಸಂಬಂಧಿತ ಕ್ಷೇತ್ರಗಳಾದ ಆರೋಗ್ಯ, ಸಮುದಾಯ ಅಭಿವೃದ್ಧಿ, ಶಿಕ್ಷಣ, ಉದ್ಯಮ, ಸಮಾಲೋಚನೆ, ಕುಟುಂಬ, ತಿದ್ದುಪಡಿ ಸೆಟ್ಟಿಂಗ್, ಸಾಮಾಜಿಕ ರಕ್ಷಣೆ, ಮಹಿಳೆಯರು, ಮಕ್ಕಳು, ಮಾನಸಿಕ ಆರೋಗ್ಯ ಕ್ಷೇತ್ರ ಮತ್ತು ಅಂಗವೈಕಲ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶವನ್ನು ಪಡೆಯುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಡಾ.ವಿ.ಕಣ್ಣಪ್ಪ ಸೆಟ್ಟಿ ಮತ್ತು ಡಾ.ಕೆ.ಲಿಂಗ ಸ್ವಾಮಿ SOSW, ಇಗ್ನೋ ಸಂಯೋಜಕರಾಗಿ ಕೆಲಸ ನಿರ್ವಹಿಸಲಿದ್ದಾರೆ.

ಯಾರೆಲ್ಲಾ ಈ ಕೋರ್ಸ್ ಅಧ್ಯಯನ ಮಾಡಬಹುದು ? :

10+2/ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಸಮಾಜ ಕಾರ್ಯದಲ್ಲಿ ವರ್ಚುವಲ್ ಬ್ಯಾಚುಲರ್ ಪದವಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಹೇಗೆ ? :

ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ignouiop.samarth.edu.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು.

ಕಾರ್ಯಕ್ರಮದ ಕುರಿತು ಹೆಚ್ಚಿನ ವಿವರಗಳಿಗಾಗಿ ಅಧಿಕೃತ ವೆಬ್‌ಸೈಟ್-iop.ignouonline.ac.in ಗೆ ಭೇಟಿ ನೀಡಿ.

More News  

For Quick Alerts
ALLOW NOTIFICATIONS  
For Daily Alerts

English summary
Bachelor of social work programme has been launched by ignou in virtual mode.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+