ಇಗ್ನೋ: ಡಿಸೆಂಬರ್ ತಿಂಗಳ ಪರೀಕ್ಷೆ ಫಲಿತಾಂಶ ಪ್ರಕಟ

ಇಗ್ನೋ ಡಿಸೆಂಬರ್ ತಿಂಗಳ ಪರೀಕ್ಷೆಯಲ್ಲಿ ಸುಮಾರು 4.97 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಡಿಸೆಂಬರ್ 1 ರಿಂದ ಡಿ.23 ರವರೆಗೂ ಪರೀಕ್ಷೆಗಳು ನಡೆದಿದ್ದವು.

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ (ಇಗ್ನೋ) ಡಿಸೆಂಬರ್ ತಿಂಗಳ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿದೆ.

ವಿಶ್ವವಿದ್ಯಾನಿಲಯದ ವೆಬ್ಸೈಟ್ ನಲ್ಲಿ ಫಲಿತಾಂಶಗಳು ಪ್ರಕಟವಾಗಿದ್ದು, ವಿದ್ಯಾರ್ಥಿಗಳು ವೆಬ್ಸೈಟ್ ಗೆ ಭೇಟಿ ನೀಡಿ ಫಲಿತಾಂಶ ಪಡೆಯಬಹುದಾಗಿದೆ.

ಡಿಸೆಂಬರ್ 1 ರಿಂದ ಡಿ.23 ರವರೆಗೂ ಪರೀಕ್ಷೆಗಳು ನಡೆದಿದ್ದವು, ಸುಮಾರು 4.97 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.

ಇಗ್ನೋ: ಫಲಿತಾಂಶ ಪ್ರಕಟ

ಫಲಿತಾಂಶ ನೋಡುವ ವಿಧಾನ

  • ಇಗ್ನೋ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
  • ರಿಸಲ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಒಂಬತ್ತು ಅಂಕಿಯ ನೋಂದಣಿ ಸಂಖ್ಯೆ ನಮೂದಿಸಿ
  • ನಿಮ್ಮ ಫಲಿತಾಂಶ ಪಡೆಯಿರಿ

ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಮತ್ತೆ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮರುಪರೀಕ್ಷೆಯ ಅರ್ಜಿಗಳನ್ನು ಫೆಬ್ರವರಿ ತಿಂಗಳಲ್ಲಿ ಪ್ರಕಟಿಸುವ ನಿರೀಕ್ಷೆ ಇದ್ದು, ಜೂನ್ ತಿಂಗಳಲ್ಲಿ ಮರು ಪರೀಕ್ಷೆಗಳು ನಡೆಯುವ ಸಾಧ್ಯತೆ ಇದೆ.

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೋ)

ಇಗ್ನೋ ಎಂದು ಕರೆಯಲ್ಪಡುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು ದೆಹಲಿಯಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿದೆ. ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಕಾಯಿದೆ, 1985 (IGNOU ಆಕ್ಟ್ 1985) ಯನ್ನು ಜಾರಿಗೊಳಿಸಿದ ನಂತರ ರೂ. 20 ಮಿಲಿಯನ್ ಬಜೆಟ್ನೊಂದಿಗೆ ವಿವಿಯನ್ನು ಸ್ಥಾಪಿಸಲ್ಪಟ್ಟಿತು.

ವಿಶ್ವದಲ್ಲೇ ಅತಿ ದೊಡ್ಡ ವಿಶ್ವವಿದ್ಯಾನಿಲಯವಾಗಿರುವ ಇಗ್ನೋದಲ್ಲಿ 40 ಲಕ್ಷಕ್ಕೂ ಅಧಿಕ ಮಂದಿ ಶಿಕ್ಷಣ ಪಡೆಯುತ್ತಿದ್ದಾರೆ. ಇಗ್ನೊ 21 ಶಾಲೆಗಳು, 67 ಪ್ರಾದೇಶಿಕ ಕೇಂದ್ರಗಳು, 2667 ಅಧ್ಯಯನ ಕೇಂದ್ರಗಳು, ಮತ್ತು 29 ವಿದೇಶಿ ಕೇಂದ್ರಗಳನ್ನು (15 ದೇಶಗಳಲ್ಲಿ) ಹೊಂದಿದೆ. ಡಿಪ್ಲೊಮಾ ಮತ್ತು ಪದವಿ ಮಟ್ಟಗಳಲ್ಲಿ ಶಿಕ್ಷಣ ಒಳಗೊಂಡಿರುವ 226 ಶೈಕ್ಷಣಿಕ ಕಾರ್ಯಕ್ರಮಗಳನ್ನು ಇಗ್ನೋ ಒದಗಿಸುತ್ತದೆ

More News  

For Quick Alerts
ALLOW NOTIFICATIONS  
For Daily Alerts

English summary
The Term End Examination Result which was held in December has been declared by Indira Gandhi National Open University (IGNOU). Candidates can view their respective result from the official website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+