ತೃತೀಯ ಲಿಂಗಿಗಳಿಗೆ ಉಚಿತ ಶಿಕ್ಷಣ ಘೋಷಿಸಿದ ಇಗ್ನೋ

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು (ಇಗ್ನೊ) ತೃತೀಯ ಲಿಂಗಿಗಳಿಗೆ ಉಚಿತ ಶಿಕ್ಷಣ ನೀಡುವ ಮಹತ್ತರ ನಿರ್ಧಾರವನ್ನು ತೆಗೆದುಕೊಂಡಿದೆ.

ಇಗ್ನೋದ ಸ್ಥಾಪಕ ಉಪಕುಲಪತಿಗಳಾದ ಜಿ ರಾಮ್ ರೆಡ್ಡಿಯವರ ಸ್ಮರಣಾರ್ತ ನಡೆದ ಕಾರ್ಯಕ್ರಮದಲ್ಲಿ ಇಗ್ನೊ ಕುಲಪತಿ (ಪ್ರಭಾರ) ರವೀಂದ್ರ ಕುಮಾರ್‌ ಈ ವಿಚಾರ ತಿಳಿಸಿದ್ದಾರೆ. ಇಗ್ನೋದ ಯಾವುದೇ ಕೋರ್ಸ್ ಕಲಿಯುವ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಕೋರ್ಸಿನ ಸಂಪೂರ್ಣ ಶುಲ್ಕ ಮನ್ನಾ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ, ರಾಜ್ಯ ಸರ್ಕಾರಗಳು, ವೈದ್ಯಾಧಿಕಾರಿಗಳು ಅಥವಾ ಇತರ ಅಧಿಕೃತ ಸಂಸ್ಥೆಗಳು ನೀಡಿದ ಪ್ರಮಾಣಪತ್ರವನ್ನು ಶುಲ್ಕ ವಿನಾಯಿತಿಗೆ ಸಲ್ಲಿಸಬೇಕು. ಆಧಾರ್‌ ಸಂಖ್ಯೆಯನ್ನು ಕೂಡ ಈ ಉದ್ದೇಶಕ್ಕೆ ಬಳಸಬಹುದು ಎಂದು ಅವರು ಹೇಳಿದ್ದಾರೆ.

ತೃತೀಯ ಲಿಂಗಿಗಳಿಗೆ ಉಚಿತ ಶಿಕ್ಷಣ

 

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಕಾಕತೀಯ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ವೈ ವೈಕುಂಟಂ ಮಾತನಾಡಿ ಸರ್ಕಾರಗಳು ಶಿಕ್ಷಣವನ್ನು ಸ್ವತಂತ್ರವಾಗಿಸಬೇಕು ಜೊತೆಗೆ ಜಿಡಿಪಿಯ ಶೇ 6ರಷ್ಟನ್ನು ಶಿಕ್ಷಣಕ್ಕೆ ಮೀಸಲೀಡಬೇಕೆಂದು ಹೇಳಿದ್ದಾರೆ.

ಉಚಿತ ಶಿಕ್ಷಣ ನೀಡಿದ ಮೊದಲ ರಾಜ್ಯ ಕರ್ನಾಟಕದ

ತೃತೀಯ ಲಿಂಗಿಗಳಿಗೆ ಉಚಿತ್ರ ಶಿಕ್ಷಣ ನೀಡಿದ ಮೊದಲ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಂಡಿದೆ. ಲೈಂಗಿಕ ಅಲ್ಪಸಂಖ್ಯಾತರನ್ನು ತೃತೀಯ ಲಿಂಗಿಗಳೆಂದು ಪರಿಗಣಿಸಬೇಕು ಎಂದು 2014ರಲ್ಲಿ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಅವರಿಗೆ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ನೀಡುವ ಎಲ್ಲ ಅನುಕೂಲಗಳನ್ನು ಒದಗಿಸಬೇಕು ಎಂದೂ ಹೇಳಿತ್ತು. ತೃತೀಯ ಲಿಂಗಿಗಳ ಅಭಿವೃದ್ದಿಗಾಗಿ ರಾಜ್ಯ ಸರ್ಕಾರ ಅವರಿಗೆ ಸ್ನಾತಕೋತ್ತರ ಪದವಿವರೆಗೂ ಉಚಿತ ಶಿಕ್ಷಣ ನೀಡಲು 2016 ರಲ್ಲಿ ನಿರ್ಧರಿಸಿತು.

ತಮಿಳುನಾಡಿನಲ್ಲೂ ಉಚಿತ ಶಿಕ್ಷಣ

ಕರ್ನಾಟಕದ ನಂತರ ತಮಿಳುನಾಡು ಕೂಡ ಈ ನಿರ್ಧಾರ ಕೈಗೊಂಡಿತು. ಕಳೆದ ತಿಂಗಳಷ್ಟೇ ತಮಿಳುನಾಡಿನ ಮನೋಮನಿಯಂ ಸುಂದರನಾರ್ ವಿಶ್ವವಿದ್ಯಾಲಯದಲ್ಲಿ ತೃತೀಯ ಲಿಂಗಿಗಳಿಗೆ ಉಚಿತ ಶಿಕ್ಷಣ ನೀಡುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿತು.

ಪ್ರತಿ ಕೋರ್ಸ್​​​ನಲ್ಲಿ ಕೂಡ ತೃತೀಯ ಲಿಂಗಿಗಳಿಗೆ ಒಂದು ಸ್ಥಾನವನ್ನು ಮೀಸಲಿರಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಈ ಮೂಲಕ ತೃತೀಯ ಲಿಂಗಿಗಳಿಗೆ ಉಚಿತ ಶಿಕ್ಷಣ ನೀಡುವ ದೇಶದ ಮೊದಲ ವಿಶ್ವವಿದ್ಯಾಲಯ ಎಂಬ ಗೌರವಕ್ಕೆ ಮನೋಮನಿಯಂ ವಿಶ್ವವಿದ್ಯಾಲಯ ಪಾತ್ರವಾಗಿದೆ.

For Quick Alerts
ALLOW NOTIFICATIONS  
For Daily Alerts

English summary
Indira Gandhi National Open University has announced that transgender students can now study in any of the programmes offered by the university for free.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X