IGNOU Student Innovation Award 2022 : ವಿದ್ಯಾರ್ಥಿ ಆವಿಷ್ಕಾರ ಪ್ರಶಸ್ತಿಗೆ ಅರ್ಜಿ ಆಹ್ವಾನ

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯವು (IGNOU) 'ವಿದ್ಯಾರ್ಥಿ ನಾವೀನ್ಯತೆ ಪ್ರಶಸ್ತಿ 2022' ಗಾಗಿ ಅರ್ಜಿಯನ್ನು ಆಹ್ವಾನಿಸಿದೆ. ವಿದ್ಯಾರ್ಥಿ ನಾವೀನ್ಯತೆ ಪ್ರಶಸ್ತಿಯು ಹೊಸತನವನ್ನು ಅನ್ವೇಷಿಸುವ ವಿದ್ಯಾರ್ಥಿಗಳನ್ನು ಹುಡುಕಲು, ಅಂಗೀಕರಿಸಲು ಮತ್ತು ಪ್ರೋತ್ಸಾಹಿಸಲು ಪ್ರಯತ್ನಿಸುತ್ತದೆ.

ವಿದ್ಯಾರ್ಥಿ ಆವಿಷ್ಕಾರ ಪ್ರಶಸ್ತಿಗೆ ಅರ್ಜಿ ಆಹ್ವಾನ

ಹೊಸ ಅನ್ವೇಷಣೆಗಳನ್ನು ಮಾಡಿದಂತಹ ವಿದ್ಯಾರ್ಥಿಗಳು ಇಗ್ನೋ ಸ್ಟೂಡೆಂಟ್ ಇನ್ನೋವೇಶನ್ ಅವಾರ್ಡ್ 2022 ಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ನಮೂದುಗಳನ್ನು ಸಲ್ಲಿಸಲು ಅರ್ಜಿ ನಮೂನೆ ಮತ್ತು ಮಾರ್ಗಸೂಚಿಗಳನ್ನು ಪಡೆಯಲು ಇಗ್ನೋ ಅಧಿಕೃತ ವೆಬ್‌ಸೈಟ್ ignou.ac.in ನಿಂದ ಡೌನ್‌ಲೋಡ್ ಮಾಡಿಕೊಳ್ಳಹುದು. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30, 2022 ಕೊನೆಯ ದಿನವಾಗಿರುತ್ತದೆ.

IGNOU ಹೇಳಿಕೆಯ ಪ್ರಕಾರ ಆಯ್ಕೆಯಾದ ಅತ್ಯುತ್ತಮ ಮೂರು ವಿದ್ಯಾರ್ಥಿಗಳಿಗೆ ಟ್ರೋಫಿಗಳು, ಪ್ರಮಾಣಪತ್ರಗಳು ಮತ್ತು ಕ್ರಮವಾಗಿ ರೂ 10,000, ರೂ 7,000 ಮತ್ತು ರೂ 5,000 ನಗದು ಬಹುಮಾನಗಳನ್ನು ನೀಡಲಾಗುತ್ತದೆ.

ವಿದ್ಯಾರ್ಥಿ ಆವಿಷ್ಕಾರ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹಿನ್ನೆಲೆಯಲ್ಲಿ ಕೆಲವು ಮಹತ್ವಾಕಾಂಕ್ಷಿ ಆವಿಷ್ಕಾರಗಳನ್ನು ಮಾಡಿದ ವಿದ್ಯಾರ್ಥಿಗಳನ್ನು ಉನ್ನತ ಆವಿಷ್ಕಾರಕರೊಂದಿಗೆ ಮಾತನಾಡಲು ಆಹ್ವಾನಿಸಲಾಗುವುದು ಎಂದು IGNOU ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಆವಿಷ್ಕಾರಗಳ ಬಗ್ಗೆ ಪ್ರಸ್ತುತಿಯನ್ನು ನೀಡಬೇಕಾಗುತ್ತದೆ. ತದನಂತರ ಆಯ್ಕೆಯಾದ ಅಭ್ಯರ್ಥಿಗಳನ್ನು ದೇಶಾದ್ಯಂತ ಗುರುತಿಸಲಾಗುತ್ತದೆ.

2018 ರಲ್ಲಿ ಇಗ್ನೋ, ದೂರಶಿಕ್ಷಣದಲ್ಲಿ ನಾವೀನ್ಯತೆಗಾಗಿ ರಾಷ್ಟ್ರೀಯ ಕೇಂದ್ರ (NCIDE) ಮೊದಲ ಬಾರಿಗೆ ವಿದ್ಯಾರ್ಥಿ ನಾವೀನ್ಯತೆ ಪ್ರಶಸ್ತಿ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಅಂದಿನಿಂದ ಪ್ರತಿ ವರ್ಷವೂ ಪ್ರಮುಖ ಮೂರು ನವೋದ್ಯಮಿಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಇತರ ನಾಮನಿರ್ದೇಶಿತ ಸಂಭಾವ್ಯ ನವೋದ್ಯಮಿಗಳಿಗೆ ವಿವಿಧ ರೀತಿಯ ತರಬೇತಿ ಮತ್ತು ಬೆಂಬಲವನ್ನು ನೀಡಲಾಗುತ್ತದೆ ಮತ್ತು ಅವರ ಆವಿಷ್ಕಾರವನ್ನು ಮುಂದುವರಿಸಲು ಸಹಾಯ ಮಾಡುತ್ತದೆ. ಅದಲ್ಲದೆ ಸಚಿವಾಲಯ ಮತ್ತು ಇತರ ಸಂಸ್ಥೆಗಳು ಆಯೋಜಿಸುವ ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಅವರು ಸಮರ್ಥರಾಗಿದ್ದಾರೆ.

ರಾಷ್ಟ್ರದ ಒಟ್ಟಾರೆ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳ ಪ್ರಾಮುಖ್ಯತೆಯನ್ನು ಗುರುತಿಸಿ, IGNOU ದೇಶಾದ್ಯಂತದ ಇನ್ನೋವೇಟರ್ ವಿದ್ಯಾರ್ಥಿಗಳ ಗುರುತಿಸುವಿಕೆ ಮತ್ತು ಪ್ರಚಾರಕ್ಕೆ ಆದ್ಯತೆ ನೀಡಿದೆ.

More News  

For Quick Alerts
ALLOW NOTIFICATIONS  
For Daily Alerts

English summary
IGNOU invited applications for student innovation award 2022. Aspirants can apply before september 30.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+