ವಿದೇಶದಲ್ಲಿ ಐಐಎಂ ಶಿಕ್ಷಣ ನೀಡುವ ವಿದೇಯಕಕ್ಕೆ ಗ್ರೀನ್ ಸಿಗ್ನಲ್

ಭಾರತೀಯ ಮ್ಯಾನೇಜ್‌ಮೆಂಟ್‌ ಶಿಕ್ಷಣ ಸಂಸ್ಥೆಗಳು ವಿದೇಶಗಳಲ್ಲಿ ಮ್ಯಾನೇಜ್‌ಮೆಂಟ್‌ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿ ಶಿಕ್ಷಣ ನೀಡುವ ವಿಧೇಯಕವನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ.

ಕೆ ಎಸ್ ಆರ್ ಟಿ ಸಿ: ದರ್ಜೆ-2 ಅಧಿಕಾರಿ ಹುದ್ದೆಗಳಿಗೆ ಡಿಸೆಂಬರ್ 24 ರಂದು ಕ್ಯಾಟ್ ಪರೀಕ್ಷೆ

ಮುಂಚೂಣಿಯಲ್ಲಿರುವ ಮ್ಯಾನೇಜ್‌ಮೆಂಟ್‌ ಶಿಕ್ಷಣ ಸಂಸ್ಥೆಗಳಿಗೆ ಮತ್ತಷ್ಟು ಸ್ವಾಯತ್ತೆ ನೀಡುವ ಉದ್ದೇಶವುಳ್ಳ ಈ ವಿಧೇಯಕವನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಲೋಕಸಭೆಯಲ್ಲಿ ಫೆಬ್ರವರಿ 9ರಂದು ಮಂಡಿಸಿದ್ದರು.

ಕೆರಿಯರ್ ಟ್ರೆಂಡ್ಸ್ 2018: ಸ್ಪರ್ಧಾತ್ಮಕ ಪರೀಕ್ಷೆಗಳ ಪಟ್ಟಿ

ವಿದೇಶದಲ್ಲಿ ಐಐಎಂ ಶಿಕ್ಷಣ

 

ಭಾರತೀಯ ಐಐಎಂ ಗಳು 'ರಾ‍‍‍‍ಷ್ಟ್ರೀಯ ಮಹತ್ವದ ಸಂಸ್ಥೆಗಳಾಗಿದ್ದು' ವಿದೇಶಗಳಲ್ಲಿ ಕ್ಯಾಂಪಸ್‌ ಸ್ಥಾಪಿಸಿ ಪದವಿ ಪ್ರದಾನಕ್ಕೆ ಅನುಮತಿ ನೀಡುವ ವಿಧೇಯಕವನ್ನು ರಾಜ್ಯಸಭೆ ಸರ್ವಾನುಮತದಿಂದ ಅಂಗೀಕರಿಸಿದೆ. ಕೆಳಮನೆಯಲ್ಲೂ ಈ ವಿಧೇಯಕ ಸರ್ವಾನುಮತದ ಅನುಮೋದನೆ ಪಡೆದಿತ್ತು.

ಪ್ರತಿ ಐಐಎಂನ ಆಡಳಿತ ಮಂಡಳಿ (ಬೋರ್ಡ್‌ ಆಫ್‌ ಗವರ್ನರ್ಸ್‌)ಯೂ ಪ್ರಧಾನ ಕಾರ್ಯನಿರ್ವಹಣಾ ಸಂಸ್ಥೆಯಾಗಿದ್ದು, ತಮ್ಮದೇ ಆಯ್ಕೆಯ ಮುಖ್ಯಸ್ಥರನ್ನು ನೇಮಿಸಿಕೊಳ್ಳುವ ಅಧಿಕಾರವನ್ನು ಈ ವಿಧೇಯಕ ನೀಡುತ್ತದೆ. ಕೇಂದ್ರ ಸರಕಾರಕ್ಕೆ ಬದಲಾಗಿ, ಆಡಳಿತ ಮಂಡಳಿಯೇ ತನ್ನ ನಿರ್ದೇಶಕರನ್ನು (ಈಗ ಸಿಇಓ ಎಂದು ಕರೆಯಲಾಗುತ್ತಿದೆ) ನೇಮಿಸಿಕೊಳ್ಳಬಹುದು. ಅಲ್ಲದೆ ಅನ್ವೇಷಣೆ ಮತ್ತು ಆಯ್ಕೆ ಸಮಿತಿಯನ್ನು ಆಡಳಿತ ಮಂಡಳಿಯೇ ರಚಿಸಿಕೊಳ್ಳುತ್ತದೆ. ಈ ಸಮಿತಿಯಲ್ಲಿ ಬೋರ್ಡ್‌ ಮುಖ್ಯಸ್ಥರು ಮತ್ತು ಮೂವರು ಸದಸ್ಯರಿರುತ್ತಾರೆ. ಈ ಸದಸ್ಯರನ್ನು ಗಣ್ಯ ಆಡಳಿತಗಾರರು, ಉದ್ಯಮಿಗಳು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ತಂತ್ರಜ್ಞರು ಮತ್ತು ಮ್ಯಾನೇಜ್‌ಮೆಂಟ್‌ ತಜ್ಞರ ವಲಯದಿಂದ ಆರಿಸಿಕೊಳ್ಳಬೇಕಾಗುತ್ತದೆ.

ಪ್ರತಿ ಐಐಎಂನ ಗವರ್ನರ್‌ ಮಂಡಳಿಯಲ್ಲಿ ಒಬ್ಬ ಮುಖ್ಯಸ್ಥರು, ಕೇಂದ್ರ ಮತ್ತು ರಾಜ್ಯ ಸರಕಾರದಿಂದ ನಾಮಕರಣಗೊಳ್ಳುವ ಇಬ್ಬರು ಸದಸ್ಯರು, ಒಬ್ಬ ಮಹಿಳೆಯೂ ಸೇರಿದಂತೆ ನಾಲ್ವರು ಶ್ರೇಷ್ಠ ವ್ಯಕ್ತಿಗಳು ಸದಸ್ಯರಾಗಿರುತ್ತಾರೆ. ಈ ನಾಲ್ವರನ್ನು ಶಿಕ್ಷಣ, ಉದ್ಯಮ, ವಾಣಿಜ್ಯ, ಸಮಾಜಸೇವೆ ಅಥವಾ ಸಾರ್ವಜನಿಕ ಆಡಳಿತ ಕ್ಷೇತ್ರದಿಂದ ಆರಿಸಿಕೊಳ್ಳಲಾಗುತ್ತದೆ. ಇಬ್ಬರು ಬೋಧಕ ಸಿಬ್ಬಂದಿಗಳು, ಎಸ್‌ಸಿ ಅಥವಾ ಎಸ್‌ಟಿ ವಿಭಾಗದಿಂದ ಒಬ್ಬ ಸದಸ್ಯ ಮತ್ತು ಹಳೆ ವಿದ್ಯಾರ್ಥಿಗಳ ಬಳಗದಿಂದ ಐವರು ಈ ಬೋರ್ಡ್‌ನ ಸದಸ್ಯರಾಗಿರುತ್ತಾರೆ. ಕನಿಷ್ಠ ಮೂವರು ಮಹಿಳಾ ಸದಸ್ಯರು ಇರುವುದು ಕಡ್ಡಾಯ.

ಈ ವಿಧೇಯಕವು, ಕೇಂದ್ರ ಸರಕಾರ ಕಾಲಕಾಲಕ್ಕೆ ನೀಡುವ ಮಾರ್ಗದರ್ಶನಗಳಿಗೆ ಅನುಗುಣವಾಗಿ ವಿದೇಶಗಳಲ್ಲಿ ಮ್ಯಾನೇಜ್‌ಮೆಂಟ್‌ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿ ಶಿಕ್ಷಣ ನೀಡುವ ಅವಕಾಶ ಒದಗಿಸುತ್ತದೆ.

For Quick Alerts
ALLOW NOTIFICATIONS  
For Daily Alerts

English summary
The Rajya Sabha on Tuesday unanimously passed a bill declaring Indian Institutes of Management as "institutions of national importance" and allowing them to grant degrees and set up campuses abroad.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X