KVPY Exam Admit Card 2021 : ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ ?

KVPY Exam Admit Card 2021: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ಬೆಂಗಳೂರು ಕಿಶೋರ್ ವಿಜ್ಞಾನಿಕ್ ಪ್ರೋತ್ಸಾಹನ್ ಯೋಜನೆ (ಕೆವಿಪಿವೈ) ಪರೀಕ್ಷೆಯ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷೆಗೆ ಅರ್ಹರಾದ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ಇದೀಗ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕೆವಿಪಿವೈ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ

ಕಿಶೋರ್ ವಿಜ್ಞಾನಿಕ್ ಪ್ರೋತ್ಸಾಹನ್ ಯೋಜನೆ ಪರೀಕ್ಷೆಯನ್ನು ನವೆಂಬರ್ 7,2021ರಂದು ನಿಗದಿಪಡಿಸಲಾಗಿದೆ. ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ kvpy.iisc.ernet.in ಗೆ ಭೇಟಿ ನೀಡಿ ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕೆವಿಪಿವೈ ಪರೀಕ್ಷೆಯು ಬಿಎಸ್ಸಿ, ಬಿಎಸ್, ಬಿಎಸ್‌ಟ್ಯಾಟ್, ಬಿಎಎಮ್‌ಎಥ್, ಇಂಟಿಗ್ರೇಟೆಡ್ ಎಂಎಸ್‌ಸಿ ಮತ್ತು ಇಂಟಿಗ್ರೇಟೆಡ್ ಎಂಎಸ್‌ನ ಮೊದಲ ವರ್ಷದ ಮೂಲ ವಿಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ಆಕಸ್ಮಿಕ ಅನುದಾನಕ್ಕಾಗಿ ನಡೆಸಲಾಗುವ ಆಪ್ಟಿಟ್ಯೂಡ್ ಪರೀಕ್ಷೆಯಾಗಿದೆ. ದೇಶದ ಉನ್ನತ ಸಂಸ್ಥೆಗಳಾದ ಐಐಎಸ್ಸಿ ಮತ್ತು ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು (ಐಐಎಸ್ಇಆರ್) ಕ್ರಮವಾಗಿ ಬಿಎಸ್ ಮತ್ತು ಬಿಎಸ್-ಎಂಎಸ್ ಡ್ಯುಯಲ್ ಪದವಿ ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯಲು ಕೆವಿಪಿವೈ ಚಾನೆಲ್ ಅನ್ನು ಪರಿಗಣಿಸುತ್ತವೆ.

ಕೆವಿಪಿವೈ ಪರೀಕ್ಷಾ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡುವುದು ಹೇಗೆ ?:

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ http://kvpy.iisc.ac.in/main/index.htm ಗೆ ಭೇಟಿ ನೀಡಿ.

ಸ್ಟೆಪ್ 2: ಹೋಂ ಪೇಜ್ ನಲ್ಲಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3: ವಿದ್ಯಾರ್ಥಿಗಳು ನಿಮ್ಮ ID ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ

ಸ್ಟೆಪ್ 4: ಪ್ರವೇಶ ಪತ್ರ ಸ್ಕ್ರೀನ್ ಮೇಲೆ ಮೂಡುವುದು ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ

ಕೆವಿಪಿವೈ ರಾಷ್ಟ್ರೀಯ ಮಟ್ಟದ ಫೆಲೋಶಿಪ್ ಕಾರ್ಯಕ್ರಮವಾಗಿದ್ದು, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಆರಂಭಿಸಿದೆ ಮತ್ತು ಧನಸಹಾಯ ನೀಡುತ್ತದೆ.

ಈ ಯೋಜನೆಗೆ ವಿದ್ಯಾರ್ಥಿಗಳ ಆಯ್ಕೆಯನ್ನು ಆಪ್ಟಿಟ್ಯೂಡ್ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಅವರ ಸಾಧನೆಯ ಆಧಾರದ ಮೇಲೆ ಮಾಡಲಾಗುತ್ತದೆ.

ಆಪ್ಟಿಟ್ಯೂಡ್ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಮೊದಲ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ. ನಂತರ ಈ ವಿದ್ಯಾರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಆಯ್ಕೆ ಪ್ರಕ್ರಿಯೆಯನ್ನು ಗುಂಪುಗಳು ಅಥವಾ ಐಐಎಸ್‌ಸಿಯಲ್ಲಿ ರಚಿಸಲಾದ ಸಮಿತಿಯು ಪ್ರದರ್ಶಿಸುತ್ತದೆ.

ಆಪ್ಟಿಟ್ಯೂಡ್ ಪರೀಕ್ಷೆ ಮತ್ತು ಸಂದರ್ಶನದ ಫಲಿತಾಂಶಗಳ ಆಧಾರದ ಮೇಲೆ ಅಂತಿಮ ಅರ್ಹತೆಯ ಪಟ್ಟಿಯನ್ನು ತಯಾರಿಸಲಾಗುತ್ತದೆ. ಕೆವಿಪಿವೈ ಫೆಲೋಶಿಪ್‌ಗೆ ಆಯ್ಕೆಯಾದವರಿಗೆ ಪಿಎಚ್‌ಡಿ ಪೂರ್ವ ಹಂತದವರೆಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

ಅಭ್ಯರ್ಥಿಗಳು ನೇರವಾಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
Indian Institute of Science (IISc) Bangalore has released admit cards for the Kishor Vigyanik Protsahan Yojana (KVPY) exam 2021.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+