ಮೊದಲ ಭಾರಿಗೆ ಭಾರತದಲ್ಲಿ ಎಲ್‌ಜಿಬಿಟಿಐ ಉದ್ಯೋಗ ಮೇಳ: ಇಂದು ಬೆಂಗಳೂರಿನಲ್ಲಿ

ಎಲ್‌ಜಿಬಿಟಿಐ ಸಮುದಾಯಕ್ಕೆ ಸೇರಿದ ವ್ಯಕ್ತಿಗಳಿಗೆ (ಲೆಸ್ಬಿಯನ್, ಸಲಿಂಗಕಾಮಿ, ದ್ವಿಲಿಂಗಿ, ಟ್ರಾನ್ಸ್ಜೆಂಡರ್ ಮತ್ತು ಇಂಟರ್ಸೆಕ್ಸ್) ಅವರು ಎದುರಿಸುತ್ತಿರುವ ವ್ಯಾಪಕ ತಾರತಮ್ಯದಿಂದಾಗಿ ಸಮಾಜದಲ್ಲಿ ಸಮಾನ ಸ್ಥಾನಮಾನವನ್ನು ಪಡೆಯುವುದು ಬಹಳ ಕಷ್ಟವಾಗಿದೆ. ಎಲ್‌ಜಿಬಿಟಿಐ ಅಭ್ಯರ್ಥಿಗಳು ಉದ್ಯೋಗವನ್ನು ಹುಡುಕುವಾಗ ಅವರಿಗೆ ಎಲ್ಲಿಯೂ ಅವಕಾಶ ನೀಡದಿರುವುದು ದುರದೃಷ್ಟ ಸಂಗತಿ. ಹಾಗಾಗಿ ಭಾರತದಲ್ಲಿ ಮೊದಲ ಭಾರಿಗೆ ಇಂದು ಬೆಂಗಳೂರಿನಲ್ಲಿ ಎಲ್‌ಜಿಬಿಟಿಐ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗಾಗಿ ಪ್ರೈಡ್ ಸರ್ಕಲ್ ಉದ್ಯೋಗ ಮೇಳವನ್ನು ಆಯೋಜಿಸಿದೆ.

ಮೊದಲ ಭಾರಿಗೆ ಭಾರತದಲ್ಲಿ ಎಲ್‌ಜಿಬಿಟಿಐ ಉದ್ಯೋಗ ಮೇಳ

 

ಪ್ರೈಡ್ ಸರ್ಕಲ್ ನಿರ್ದಿಷ್ಟವಾಗಿ ಎಲ್‌ಜಿಬಿಟಿಐ ಜನರಿಗೆ ಉದ್ಯೋಗ ಮೇಳವನ್ನು ಆಯೋಜಿಸುತ್ತಿದ್ದು, ಇದು ದೇಶಾದ್ಯಂತದ ಬಹುರಾಷ್ಟ್ರೀಯ ಕಂಪನಿಗಳಿಂದ (ಎಂಎನ್‌ಸಿ) ಕೆಲಸ ಮಾಡುವ ವ್ಯಕ್ತಿಗಳೊಂದಿಗೆ ಸಂವಹನ ನಡೆಸಲು ಒಂದು ವೇದಿಕೆಯನ್ನು ಒದಗಿಸುತ್ತದೆ.

ಭಾರತದ ಗಾರ್ಡನ್ ಸಿಟಿ, ಬೆಂಗಳೂರು ಇಲ್ಲಿ ಭಾರತದ ಮೊದಲ ಎಲ್‌ಜಿಬಿಟಿಐ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ರಿ-ಇಮೇಜಿಂಗ್ ಇನ್‌ಕ್ಲೂಷನ್ ಫಾರ್ ಸೋಷಿಯಲ್ ಇಕ್ವಿಟಿ (ಆರ್‍ಎಸ್‍ಇ) ಅನ್ನು ಜುಲೈ 12, 2019 ರಂದು ಬೆಂಗಳೂರಿನ ಲಲಿತ ಅಶೋಕ್ ಹೋಟೆಲ್‌ನಲ್ಲಿ ಆಯೋಜಿಸಿದೆ. ಈ ಮೇಳವು ನೀಲಿ ಮತ್ತು ಬಿಳಿ ಕಾಲರ್ ಉದ್ಯೋಗಗಳನ್ನು ಒಳಗೊಂಡಿರುತ್ತದೆ.

ಉದ್ಯೋಗ ಮೇಳದಲ್ಲಿ 35 ಕ್ಕೂ ಹೆಚ್ಚು ಕಂಪನಿಗಳು ಮತ್ತು 100 ಕ್ಕೂ ಹೆಚ್ಚು ಉದ್ಯೋಗಾವಕಾಶಗಳಿವೆ.

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ (https://resume.thepridecircle.com/) ತಮ್ಮ ರೆಸ್ಯುಮೆಯನ್ನು ಅಪ್‌ಲೋಡ್ ಮಾಡಬಹುದು ಮತ್ತು ದೇಶಾದ್ಯಂತ ಎಲ್‌ಜಿಬಿಟಿಐ ಉದ್ಯೋಗದಾತರನ್ನು ಹುಡುಕಬಹುದು. ಉದ್ಯೋಗ ಮೇಳಕ್ಕಾಗಿ https://thepridecircle.com/ ನಲ್ಲಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.

ಎಲ್‌ಜಿಬಿಟಿಐ ಜಾಬ್ ಫೇರ್ - ಈವೆಂಟ್ ವಿವರ:

ಸಮ್ಮೇಳನ - ಬೆಳಿಗ್ಗೆ 9 ರಿಂದ ಸಂಜೆ 5:30 ರವರೆಗೆ

ಜಾಬ್ ಫೇರ್ - ಮಧ್ಯಾಹ್ನ 1:30 ರಿಂದ 5:30 ರವರೆಗೆ

ಎಲ್‌ಜಿಬಿಟಿಐ ಮಾರುಕಟ್ಟೆ - ಮಧ್ಯಾಹ್ನ 1:30 ರಿಂದ 5:30 ರವರೆಗೆ

ಸ್ಥಳ - ಲಲಿತ್ ಅಶೋಕ್, ಬೆಂಗಳೂರು

ಈ ಎಲ್‌ಜಿಬಿಟಿಐ ಮೇಳವು ಮೂರನೇ ಲಿಂಗ ಮತ್ತು ಇತರ ಲೈಂಗಿಕತೆಗಳೊಂದಿಗೆ ಗುರುತಿಸಿಕೊಳ್ಳುವ ಜನರಿಗೆ ಉದ್ಯೋಗ ಪಡೆಯಲು ಅವಕಾಶವನ್ನು ಒದಗಿಸುತ್ತದೆ. ಎಲ್‌ಜಿಬಿಟಿಐ ವ್ಯಕ್ತಿಗಳನ್ನು ನೇಮಿಸಿಕೊಳ್ಳುವ ಬಗ್ಗೆ ಉತ್ಸಾಹ ಹೊಂದಿರುವ ಉದ್ಯೋಗದಾತರಿಗೆ ವೇದಿಕೆ ಒದಗಿಸಲು ಪ್ರೈಡ್ ಸರ್ಕಲ್ ದಿಟ್ಟ ಕ್ರಮವನ್ನು ಕೈಗೊಂಡಿದೆ. ಪ್ರೈಡ್ ಸರ್ಕಲ್ ಅನ್ನು ಸಹ ಸಂಸ್ಥಾಪಕರಾದ ಶ್ರೀನಿ ರಾಮಸ್ವಾಮಿ ಮತ್ತು ರಾಮಕೃಷ್ಣ ಸಿನ್ಹಾ ಅವರು 2017 ರಲ್ಲಿ ಸ್ಥಾಪಿಸಿದರು.

For Quick Alerts
ALLOW NOTIFICATIONS  
For Daily Alerts

English summary
Check out the more information about India’s first LGBTI job fair that is going to be held in bengaluru.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X