ಐಎಎಫ್ ಏರ್‌ಮೆನ್ ಗ್ರೂಪ್ Xಮತ್ತು ಗ್ರೂಪ್ Y ಹುದ್ದೆಗಳ ಪರೀಕ್ಷಾ ಪ್ರವೇಶ ಪತ್ರ ರಿಲೀಸ್

ಭಾರತೀಯ ಏರ್‌ಫೋರ್ಸ್ ನ ಸೆಂಟ್ರಲ್ ಸೆಲೆಕ್ಷನ್ ಬೋರ್ಡ್ ಏರ್‌ಮೆನ್ ಹುದ್ದೆಗಳ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿಸ ಅಭ್ಯರ್ಥಿಗಳು ಇದೀಗ ಪ್ರವೇಶ ಪತ್ರವನ್ನು ಅಧಿಕೃತ ವೆಬ್‌ಸೈಟ್ https://airmenselection.cdac.in/CASB/ ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ

ಅಭ್ಯರ್ಥಿಗಳು ಗಮನಿಸಬೇಕಾದ ವಿಷಯವೆಂದರೆ ಐಎಎಫ್ ಏರ್‌ಮೆನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ರಿಜಿಸ್ಟರ್ಡ್ ಈ-ಮೇಲ್ ವಿಳಾಸಕ್ಕೆ ಪ್ರವೇಶ ಪತ್ರವನ್ನು ಕಳಹಿಸಲಾಗಿರುತ್ತದೆ. ಅಭ್ಯರ್ಥಿಗಳು ಗಮನದಲ್ಲಿಡಬೇಕಾದ ಇನ್ನೊಂದು ವಿಷಯ ಈ ಪರೀಕ್ಷೆಯನ್ನು ಯಾವುದೇ ಕಮಿಷನ್ಡ್ ಆಫೀಸರ್ಸ್ /ಪೈಲಟ್ಸ್ /ನ್ಯಾವಿಗೇಟರ್ಸ್ ಹುದ್ದೆಗಳಿಗೆ ಆಯೋಜಿಸಿಸುರುವುದಲ್ಲ.

ಐಎಎಫ್ ಏರ್‌ಮೆನ್ ಹುದ್ದೆಗಳ ಪ್ರವೇಶ ಪರೀಕ್ಷೆಯನ್ನು ನಾಲ್ಕು ದಿನಗಳ ಕಾಲ ನಡೆಸಲಿದ್ದು, ಮಾರ್ಚ್ 14,2019 ರಿಂದ ಮಾರ್ಚ್ 17,2019 ರ ವರೆಗೆ ಪರೀಕ್ಷೆಯನ್ನು ನಡೆಸಲಾಗುವುದು. ಗ್ರೂಪ್ ಮತ್ತು ಗ್ರೂಪ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಟ್ರೈನಿಂಗ್ ಪೀರಿಯಡ್ ಗೆ ಒಳಪಡಿಸಲಾಗುವುದು. ಅದಾದ ನಂತರ ಅಭ್ಯರ್ಥಿಗಳನ್ನು ಅವರಿಗೆ ನಿಗದಿ ಪಡಿಸಿರುವ ಟ್ರೇಡ್ ಗೆ ನೇಮಕ ಮಾಡಲಾಗುವುದು. ಒಂದು ವೇಳೆ ಅಭ್ಯರ್ಥಿಗಳು ನಿಗದಿ ಪಡಿಸಿರುವ ಟ್ರೇಡ್ ಗಳ ಬದಲಾವಣೆಗೆ ಮನವಿ ಮಾಡಿದ್ದಲ್ಲಿ ಅದನ್ನು ತಿರಸ್ಕರಿಸಲಾಗುವುದು ಯಾವುದೇ ಬದಲಾವಣೆ ಸಾಧ್ಯವಿರುವುದಿಲ್ಲ.

ಆಯ್ಕೆಯಾದ ಅಭ್ಯರ್ಥಿಗಳನ್ನು ಆರಂಭ ಹಂತದಲ್ಲಿ 20 ವರ್ಷಗಳ ಕಾಲ ಎನ್‌ರೋಲ್ಮೆಂಟ್ ಮಾಡಲಾಗುವುದು ತದನಂತರ ಅವಧಿಯನ್ನು 57ವರ್ಷಗಳ ವರೆಗೆ ವಿಸ್ತರಿಸಲಾಗುವುದು ಮತ್ತು ಆರಂಭ ಹಂತದಲ್ಲಿ ಅಭ್ಯರ್ಥಿಗಳನ್ನು ಜಾಯಿಂಟ್ ಬೇಸಿಕ್ ಫೇಸ್ ಟ್ರೈನಿಂಗ್ (ಜೆಬಿಪಿಟಿ) ಗಾಗಿ ಬೇಸಿಕ್ ಟ್ರೈನಿಂಗ್ ಇನ್‌ಸ್ಟಿಟ್ಯೂಟಟ್, ಬೆಳಗಾವಿ(ಕರ್ನಾಟಕ)ಗೆ ಕಳುಹಿಸಲಾಗುವುದು.

ಜಾಯಿಂಟ್ ಬೇಸಿಕ್ ಫೇಸ್ ಟ್ರೈನಿಂಗ್ ಅನ್ನು ಪೂರ್ಣಗೊಳಿಸಿದ ನಂತರ ಅಭ್ಯರ್ಥಿಗಳನ್ನು ನಿಗದಿತ ಟ್ರೇಡ್ ಗೆ ಸಂಬಂಧಪಟ್ಟಂತೆ ನಿಗಧಿತ ಸಮಯದವರೆಗೆ ಟ್ರೈನಿಂಗ್ ನೀಡಲಾಗುವುದು. ಒಂದು ವೇಳೆ ಟ್ರೈನಿಂಗ್ ಪೀರಿಯಡ್‌ ನಲ್ಲಿ ಅಭ್ಯರ್ಥಿಯು ಅಗತ್ಯವಿರುವ ಮಾನದಂಡಗಳನ್ನು ಸಾಧಿಸಲು ವಿಫಲವಾದಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಅಭ್ಯರ್ಥಿಯನ್ನು ಹೊರಹಾಕಬಹುದು.ಅಭ್ಯರ್ಥಿಗಳಿಗೆ ಈ ಟ್ರೈನಿಂಗ್ ಪೀರಿಯಡ್ ನಲ್ಲಿ ತಿಂಗಳಿಗೆ 14,600/-ರೂ ಸ್ಟೈಫೆಂಡ್ ಅನ್ನು ನೀಡಲಾಗುವುದು.

ಭಾರತೀಯ ಏರ್‌ ಫೋರ್ಸ್ ಏರ್‌ಮೆನ್ ಹುದ್ದೆಗಳ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1: ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://airmenselection.cdac.in/CASB/ ಗೆ ಲಾಗಿನ್ ಆಗಿ
ಸ್ಟೆಪ್ 2: ನಂತರ "IAF Airmen Recruitment Admit Card" ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಪೆಟ್ 3: ನಂತರ ಸ್ಕ್ರೀನ್ ಮೇಲೆ ಹೊಸ ಪೇಜ್ ತೆರೆಯುತ್ತದೆ.
ಸ್ಟೆಪ್ 4: ನಂತರ ನಿಮ್ಮ ರೋಲ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನೀಡಿ ಲಾಗಿನ್ ಆಗಿ
ಸ್ಟೆಪ್ 5: ಅಭ್ಯರ್ಥಿಗಳು Submit Button ಮೇಲೆ ಕ್ಲಿಕ್ ಮಾಡಿದ ಬಳಿಕ ಪ್ರವೇಶ ಪತ್ರ ಸ್ಕ್ರೀನ್ ಮೇಲೆ ಕಾಣಿಸುವುದು
ಸ್ಟೆಪ್ 6: ಅಭ್ಯರ್ಥಿಗಳು ಪರಿಶೀಲಿಸಿಕೊಂಡು ನಂತರ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಸ್ಪೆಪ್ 7: ಪ್ರಮುಖವಾದ ಅಂಶವೆಂದರೆ ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿದ ಪ್ರವೇಶ ಪತ್ರದ ಪ್ರಿಂಟೌಟ್ ಅನ್ನು ತೆಗೆದುಕೊಂಡು ಪರೀಕ್ಷಾ ಸಮಯದಲ್ಲಿ ಒಯ್ಯಬೇಕು.

ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
IAF Recruitment 2019 released the admit card for Group X and Group Y trade’s exams,
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+