ಇಂಡಿಯನ್ ಬ್ಯಾಂಕ್: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳ ಆನ್‌ಲೈನ್ ಪರೀಕ್ಷೆಯ ಪ್ರವೇಶ ಪತ್ರ ರಿಲೀಸ್

ಇಂಡಿಯನ್ ಬ್ಯಾಂಕ್ ನೇಮಕಾತಿಯ ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳ ಆನ್‌ಲೈನ್ ಪರೀಕ್ಷೆಯ ಪ್ರವೇಶ ಪತ್ರವನ್ನು ಪ್ರಕಟ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇಂಡಿಯನ್ ಬ್ಯಾಂಕ್ ನೇಮಕಾತಿಯ ಎಸ್‌ಓ ಹುದ್ದೆಗಳ ಪ್ರವೇಶ ಪತ್ರ ಪ್ರಕಟ

 

ಇಂಡಿಯನ್ ಬ್ಯಾಂಕ್ ಎಸ್‌ಓ ಹುದ್ದೆಗಳಿಗೆ ಮಾರ್ಚ್ 8,2020ರಂದು ಆನ್‌ಲೈನ್ ಪರೀಕ್ಷೆಯನ್ನು ನಡೆಸುತ್ತಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಿರುತ್ತದೆ. ಪ್ರವೇಶಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಇಂಡಿಯನ್ ಬ್ಯಾಂಕ್ ಎಸ್‌ಓ ಹುದ್ದೆಗಳ ಆನ್‌ಲೈನ್ ಪರೀಕ್ಷಾ ಪ್ರವೇಶ ಪತ್ರ ಪಡೆಯಲು ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ :

ಸ್ಟೆಪ್ 1: ಅಭ್ಯರ್ಥಿಗಳು ಇಂಡಿಯನ್‌ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ https://www.indianbank.in/ ಗೆ ಹೋಗಿ

ಸ್ಟೆಪ್ 2: ಹೋಂ ಪೇಜ್‌ನಲ್ಲಿ ಲಭ್ಯವಿರುವ Careers ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3: ಹೊಸ ಪುಟಕ್ಕೆ ಹೋಗುವಿರಿ ಅಲ್ಲಿ Recruitment of Specialist Officer 2019-2020 ಮೇಲೆ ಕ್ಲಿಕ್ ಮಾಡಿ ನಂತರ Indian Bank Specialist -Call Letters ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4: ಇನ್ನೊಂದು ಪುಟಕ್ಕೆ ಹೋಗುವಿರಿ ಅಲ್ಲಿ ನಿಮ್ಮ ರಿಜಿಸ್ಟ್ರೇಷನ್ ನಂಬರ್ / ರೋಲ್ ನಂಬರ್ ಮತ್ತು ಪಾಸ್‌ವರ್ಡ್ / ಜನ್ಮ ದಿನಾಂಕ ನೀಡಿ ಲಾಗಿನ್ ಆಗಿ

ಸ್ಟೆಪ್ 5: ಪ್ರವೇಶ ಪತ್ರವು ಸ್ಕ್ರೀನ್ ಮೇಲೆ ಕಾಣಿಸುತ್ತದೆ ಅದನ್ನು ಸೇವ್ ಮಾಡಿ ಡೌನ್‌ಲೋಡ್ ಮಾಡಿಕೊಂಡು ಪ್ರಿಂಟೌಟ್‌ ತೆಗೆದಿಟ್ಟುಕೊಳ್ಳಿ.

ಒಮ್ಮೆ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿದ ನಂತರ ಅರ್ಜಿದಾರರು ಒಂದು ಪ್ರಿಂಟೌಟ್ ಅನ್ನು ತೆಗೆದಿಟ್ಟುಕೊಳ್ಳಿ ಮತ್ತು ಅದನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಬೇಕಿರುತ್ತದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವು ನೀಡಿರುವ ತಮ್ಮ ಗುರುತಿನ ಚೀಟಿಯನ್ನು ತರತಕ್ಕದ್ದು. ಈ ಪರೀಕ್ಷೆಗಳ ಬಗೆಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಅನ್ನು ವೀಕ್ಷಿಸಿ.

 

ಅಭ್ಯರ್ಥಿಗಳು ನೇರವಾಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Indian Bank 2020 released admit card for specialist officer posts in official website. Candidates can download their admit card now.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X