ಇಂಡಿಯನ್ ನೇವಿ 2019 ಎಸ್‌ಎಸ್‌ಆರ್, ಎಎ & ಎಂಆರ್ ಹುದ್ದೆಗಳ ನೇಮಕಾತಿಯ ಪ್ರವೇಶ ಪತ್ರ ಬಿಡುಗಡೆ

ಇಂಡಿಯನ್ ನೇವಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿತ್ತು. ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷಾ ಮೂಲಕ ಆಯ್ಕೆ ಮಾಡುತ್ತಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಇದೀಗ ಪರೀಕ್ಷೆಯನ್ನು ಎದುರಿಸಲು ಪ್ರವೇಶ ಪತ್ರವನ್ನು ಇಂಡಿಯನ್ ನೇವಿಯ ಅಧಿಕೃತ ವೆಬ್‌ಸೈಟ್ ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪ್ರವೇಶ ಪತ್ರ ಬಿಡುಗಡೆ

ಇಂಡಿಯನ್ ನೇವಿ ಸೀನಿಯರ್ ಸೆಕೆಂಡರಿ ನೇಮಕಾತಿ (SSR), ಮೆಟ್ರಿಕ್ ನೇಮಕಾತಿ (MR) ಮತ್ತು ಮ್ಯೂಸಿಶಿಯನ್ (MUS), ಸ್ಪೋರ್ಟ್ಸ್ ಎಂಟ್ರಿ ಮತ್ತು ಆರ್ಟಿಫಿಸರ್ ಅಪ್ರೆಂಟಿಸ್ (AA) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿತ್ತು. ಈ ಹುದ್ದೆಗಳಿಗೆ ಪರೀಕ್ಷೆಯನ್ನು ಬರೆಯರಿಲಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಹೋಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿ ಪರೀಕ್ಷೆಯನ್ನು ಬರೆಯಬಹುದು.

ಅಭ್ಯರ್ಥಿಗಳು ಇಂಡಿಯನ್ ನೇವಿಯಅಧಿಕೃತ ವೆಬ್‌ಸೈಟ್ https://www.joinindiannavy.gov.in/ ಗೆ ಹೋಗಿ
ನಂತರ ಅಭ್ಯರ್ಥಿಗಳು ನಿಮ್ಮ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನೀಡಿ ಲಾಗಿನ್ ಆಗಿ. ನಂತರ ಇಂಡಿಯನ್ ನೇವಿ ಸೇಯ್ಲರ್ ಪರೀಕ್ಷೆಯ ಪ್ರವೇಶ ಪತ್ರ/ಹಾಲ್ ಟಿಕೆಟ್ ಸ್ಕ್ರೀನ್ ಮೇಲೆ ಕಾಣುತ್ತದೆ. ಅದನ್ನು ಡೌನ್‌ಲೋಡ್ ಮಾಡಿ ಒಂದು ಪ್ರಿಂಟೌಟ್ ಅನ್ನು ತೆಗೆದುಕೊಳ್ಳಿ.ಡೌನ್‌ಲೋಡ್ ಮಾಡಿದ ಪ್ರವೇಶ ಪತ್ರವನ್ನು ಪರೀಕ್ಷಾ ಸಮಯಕ್ಕೆ ಒಯ್ಯುವುದು ಕಡ್ಡಾಯವಾಗಿದ್ದು ಅಭ್ಯರ್ಥಿಗಳು ಪ್ರವೇಶ ಪತ್ರದ ಪ್ರಿಂಟೌಟ್ ಅನ್ನು ತೆಗೆದುಕೊಳ್ಳಬೇಕು.

ಪರೀಕ್ಷಾ ವಿವರ:

ಇಂಡಿಯನ್ ನೇವಿಯು ಅಗಸ್ಟ್ 2019 ರ ಬ್ಯಾಚ್ ಗಳಿಗೆ ನೇಮಕಾತಿಯನ್ನು ಮಾಡುತ್ತಿದ್ದು, ಇಂಡಿಯನ್ ನೇವಿ SSR ಆಗಸ್ಟ್ ಬ್ಯಾಚ್ ಗಳ ನೇಮಕಾತಿಗೆ ಆನ್‌ಲೈನ್ ಪರೀಕ್ಷೆಯನ್ನು ಫೆಬ್ರವರಿ 23 ರಿಂದ ಫೆಬ್ರವರಿ 28,2019ರವರೆಗೆ ನಡೆಸಲಾಗುತ್ತದೆ.

ಅಭ್ಯರ್ಥಿಗಳು ಪ್ರವೇಶ ಪತ್ರದ ಬಗೆಗೆ ಮಾಹಿತಿಯನ್ನು ಪಡೆಯಲು ಇಚ್ಚಿಸಿದ್ದಲ್ಲಿ1800-419-2929 ನಂಬರ್ ಗೆ ಕರೆ ಮಾಡಿ ಅಥವಾ [email protected] ಗೆ ಮೇಲ್ ಮಾಡಿ. ಸಹಾಯವಾಣಿ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ತೆರೆದಿರುತ್ತದೆ (ಭಾನುವಾರ ಹೊರತುಪಡಿಸಿ)

ಇಂಡಿಯನ್ ನೇವಿ SSR ಆಗಸ್ಟ್ 2019 ಆಯ್ಕೆ ಪ್ರಕ್ರಿಯೆ:

* ಮೊದಲು ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನೀಡಲಾಗುವುದು
* ನಂತರ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಕಿರುಪಟ್ಟಿಯನ್ನು ತಯಾರಿಸಿ ಫಿಸಿಕಲ್ ಫಿಡ್‌ನೆಸ್ ಪರೀಕ್ಷೆಗೆ ಒಳಪಡಿಸಲಾಗುವುದು
* ನಂತರ ಇಂಡಿಯನ್ ನೇವಿ SSR ಆಗಸ್ಟ್ 2019 ರ ಬ್ಯಾಚ್ ಗಳಿಗೆ ಅಭ್ಯರ್ಥಿಗಳ ಮೆಡಿಕಲ್ ಸ್ಟ್ಯಾಂಡರ್ಡ್ ಅನ್ನು ಪರಿಶೀಲಿಸುವುದರೊಂದಿಗೆ ನೇಮಕಾತಿ ಮಾಡಲಾಗುವುದು.

ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Indian Navy is going to release admit card for the Indian Navy 2019 examination. Candidates can download their admit cards from the official website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+