Indian Navy Admit Card 2022 : ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ ?

ಭಾರತೀಯ ನೌಕಾಪಡೆ ನೇಮಕಾತಿಯ ಆರ್ಟಿಫಿಸರ್ ಅಪ್ರೆಂಟಿಸ್, ಸೀನಿಯರ್ ಸೆಕೆಂಡರಿ ರಿಕ್ರೂಟ್ ಮತ್ತು ಆರ್ಟಿಫಿಶಿಯಲ್ ಅಪ್ರೆಂಟಿಸ್ ನಲ್ಲಿನ ಸೇಲರ್ ಹುದ್ದೆಗಳ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಧಿಕೃತ
ವೆಬ್‌ಸೈಟ್ ಗೆ ಭೇಟಿ ನೀಡಿ ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಭಾರತೀಯ ನೌಕಾಪಡೆ ನೇಮಕಾತಿಯ ಪರೀಕ್ಷೆಗಳ ಪ್ರವೇಶ ಪತ್ರ ರಿಲೀಸ್

ಭಾರತೀಯ ನೌಕಾಪಡೆಯು ಸೇಲರ್ ಹುದ್ದೆಗಳ ಲಿಖಿತ ಪರೀಕ್ಷೆ ಮತ್ತು ದೈಹಿಕ ದಕ್ಷತೆ ಪರೀಕ್ಷೆ ಎರಡಕ್ಕೂ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. MR ಏಪ್ರಿಲ್ 2022 ಬ್ಯಾಚ್ ಮತ್ತು AA & SSR ಫೆಬ್ರವರಿ 2022 ಬ್ಯಾಚ್‌ಗಾಗಿ ಹಾಲ್ ಟಿಕೆಟ್ ಅನ್ನು ಬಿಡುಗಡೆ ಮಾಡಲಾಗಿದೆ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು. ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಭಾರತೀಯ ನೌಕಾಪಡೆ ನೇಮಕಾತಿಯ ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಕೆಳಗಿನ ಸ್ಟೆಪ್ಸ್ ಅನುಸರಿಸಿ :

ಸ್ಟೆಪ್ 1: ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್ https://www.joinindiannavy.gov.in/ ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್ ನಲ್ಲಿ ಅಭ್ಯರ್ಥಿ ಲಾಗಿನ್ ವಿಭಾಗದ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 3: ಹೊಸ ವಿಂಡೋ ತೆರೆಯುತ್ತದೆ ಅಲ್ಲಿ ನಿಮ್ಮ ಆಯ್ಕೆಯ ರಾಜ್ಯ ಮತ್ತು ಕ್ಯಾಪ್ಚಾ ನೀಡಿ
ಸ್ಟೆಪ್ 4: ಇನ್ನೊಂದು ಪುಟ ತೆರೆಯಲಿದೆ
ಸ್ಟೆಪ್ 5: ಅಭ್ಯರ್ಥಿಗಳು ಅಲ್ಲಿ ಕೇಳಲಾಗಿರುವ ನಿಮ್ಮ ಇ-ಮೇಲ್ ಮತ್ತು ಇತರೆ ಮಾಹಿತಿಯನ್ನು ಭರ್ತಿ ಮಾಡಿ
ಸ್ಟೆಪ್ 6: ಪರದೆಯ ಮೇಲೆ ಪ್ರವೇಶ ಪತ್ರವು ಮೂಡುತ್ತದೆ ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಿರಬೇಕಿರುತ್ತದೆ. ಪರೀಕ್ಷೆಯನ್ನು COVID-19 ಸಂಬಂಧಿತ ನಿಯಮಾವಳಿಗಳೊಂದಿಗೆ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳು ಮುಖವಾಡಗಳನ್ನು ಧರಿಸುವುದು, ದೈಹಿಕ ದೂರವನ್ನು ಅನುಸರಿಸುವುದು, ಅಗತ್ಯವಿದ್ದಾಗ ಮತ್ತು ಕೈ ಸ್ಯಾನಿಟೈಜರ್‌ಗಳನ್ನು ಬಳಸುವುದನ್ನು ಪಾಲಿಸಬೇಕು.

ಭಾರತೀಯ ನೌಕಾಪಡೆಯಲ್ಲಿ ನಾವಿಕ, AA ಮತ್ತು SSR ನ ಒಟ್ಟು 2500 ಮತ್ತು ನಾವಿಕ, MR ನಲ್ಲಿ ಒಟ್ಟು 300 ಹುದ್ದೆಗಳನ್ನು ಭರ್ತಿ ಮಾಡಲು ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

ನಾವಿಕ, MR ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯು ಅಕ್ಟೋಬರ್ 29, 2021 ರಂದು ಪ್ರಾರಂಭವಾಯಿತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 2, 2021 ಕೊನೆಯ ದಿನವಾಗಿತ್ತು. ಅದೇ ರೀತಿ ಸೇಲರ್, AA, SSR ಹುದ್ದೆಯ ನೇಮಕಾತಿ ಪ್ರಕ್ರಿಯೆಯು ಅಕ್ಟೋಬರ್ 16,2021 ರಂದು ಪ್ರಾರಂಭವಾಯಿತು ಮತ್ತು ಅಕ್ಟೋಬರ್ 25,2021 ರಂದು ಕೊನೆಗೊಂಡಿತು.

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೇರವಾಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
Indian navy released written exam and PET admit card 2022 for sailor under MR, AA, SSR.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X