ಇಸ್ರೋ ರಸಪ್ರಶ್ನೆ ಸ್ಪರ್ಧೆಯ ಅವಧಿ ವಿಸ್ತರಣೆ : ವಿಜೇತರಿಗೆ ಮೋದಿಯ ಜೊತೆ ಕುಳಿತು ಚಂದ್ರಯಾನ-2 ಲೈವ್ ವೀಕ್ಷಣೆಯ ಅವಕಾಶ

ಇಸ್ರೋ ರಸಪ್ರಶ್ನೆ ಸ್ಪರ್ಧೆಯ ಅವಧಿಯನ್ನು ಆಗಸ್ಟ್ 25,2019ರ ವರೆಗೆ ವಿಸ್ತರಿಸಿದೆ. ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಕುಳಿತು ಚಂದ್ರಯಾನ-2 ನೌಕೆಯು ಚಂದ್ರನ ಮೇಲೆ ಇಳಿಯುವ ಲೈವ್‌ ದೃಶ್ಯಗಳನ್ನು ನೋಡುವ ಅವಕಾಶ ಸಿಗಲಿದೆ ಎಂದು ಇಸ್ರೋ ಪ್ರಕಟಿಸಿದೆ.

ಇಸ್ರೋ ಕ್ವಿಜ್ ನಲ್ಲಿ ಪಾಲ್ಗೊಳ್ಳಿ : ಪ್ರಧಾನಿ ನರೇಂದ್ರ ಮೋದಿ ಜೊತೆ ಚಂದ್ರಯಾನ-2 ಲೈವ್ ವೀಕ್ಷಣೆಗೆ ಅವಕಾಶ ಪಡೆಯಿರಿ

ರಸಪ್ರಶ್ನೆಯಲ್ಲಿ ಭಾಗವಹಿಸಿ ಪ್ರಧಾನಿ ಮೋದಿಯೊಂದಿಗೆ ಕುಳಿತು ಚಂದ್ರಯಾನ-2 ಲೈವ್ ವೀಕ್ಷಿಸಿ

 

ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂಬ ಸದುದ್ಧೇಶದಿಂದ ಸ್ಪರ್ಧೆಯ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳು ಸೆಪ್ಟೆಂಬರ್ 7 ರಂದು ಚಂದ್ರಯಾನ-2 ನೌಕೆಯು ಚಂದ್ರನ ಮೇಲೆ ಇಳಿಯುವ ಲೈವ್ ದ್ಯಶ್ಯಗಳನ್ನು ನೋಡುವ ಅವಕಾಶವನ್ನು ಪಡೆಯಬಹುದು.

ಚಂದ್ರಯಾನ -2:

ಚಂದ್ರಯಾನ -2:

ಜುಲೈ 22 ರಂದು ಉಡಾವಣೆಗೊಂಡ ಚಂದ್ರಯಾನ -2 ನೌಕೆಯು ಆಗಸ್ಟ್ 14 ರಂದು ಚಂದ್ರನತ್ತ ತನ್ನ ಪ್ರಯಾಣವನ್ನು ಪ್ರಾರಂಭಿಸಿತು. ಏಕೆಂದರೆ ಅದು ಭೂಮಿಯನ್ನು ಕಕ್ಷೆಯಲ್ಲಿ ಸುತ್ತುತ್ತದೆ.

ಚಂದ್ರನ ಕಕ್ಷೆ :

ಚಂದ್ರನ ಕಕ್ಷೆ :

ಚಂದ್ರನ ಕಕ್ಷೆಯನ್ನು ಅನುಸರಿಸಿ, ಬಾಹ್ಯಾಕಾಶ ನೌಕೆಯು ಆಗಸ್ಟ್ 20 ರಂದು ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಪ್ರವೇಶಿಸಿತು. ಬಾಹ್ಯಾಕಾಶ ನೌಕೆಯು ಈಗ ಚಂದ್ರನ ಮೇಲ್ಮೈಯಿಂದ ಕನಿಷ್ಠ 118 ಕಿ.ಮೀ ದೂರದಲ್ಲಿದೆ.

ನೌಕೆ :
 

ನೌಕೆ :

ಅಂತಿಮವಾಗಿ ಚಂದ್ರನ ಮೇಲ್ಮೈಯಿಂದ 100 ಕಿ.ಮೀ ತಲುಪುವವರೆಗೆ ಅಂದರೆ ಸೆಪ್ಟೆಂಬರ್ 1 ರವರೆಗೆ ಬಾಹ್ಯಾಕಾಶ ನೌಕೆಯು ವೃತ್ತಾಕಾರದ ಕಕ್ಷೆಯ ಗಾತ್ರವನ್ನು 2 ಪಟ್ಟು ಕಡಿಮೆ ಮಾಡುತ್ತದೆ. ನೌಕೆಯು ದೂರದ ಕಕ್ಷೀಯ ಹಾದಿಯಲ್ಲಿ ನಿಲ್ಲುತ್ತದೆ.

 ಲ್ಯಾಂಡರ್ ಲ್ಯಾಂಡಿಂಗ್ :

ಲ್ಯಾಂಡರ್ ಲ್ಯಾಂಡಿಂಗ್ :

ಲ್ಯಾಂಡರ್ ವ್ಯವಸ್ಥೆಯನ್ನು ಸೆಪ್ಟೆಂಬರ್ 2 ರಂದು ಆರ್ಬಿಟ್‌ರ್ನಿಂದ ಬೇರ್ಪಡಿಸಲಾಗುತ್ತದೆ. ಈ ಪ್ರತ್ಯೇಕತೆಯ ನಂತರ, ಕಕ್ಷೆಯನ್ನು ಇನ್ನೂ 2 ಬಾರಿ ಇಳಿಸಲಾಗುತ್ತದೆ ಮತ್ತು ಸೆಪ್ಟೆಂಬರ್ 7ರಂದು ಬೆಳಿಗ್ಗೆ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲು ನಿರ್ಧರಿಸಲಾಗುತ್ತದೆ.

ಪ್ರಧಾನಿ ಮೋದಿಯೊಂದಿಗೆ ಲೈವ್ ವೀಕ್ಷಣೆ :

ಪ್ರಧಾನಿ ಮೋದಿಯೊಂದಿಗೆ ಲೈವ್ ವೀಕ್ಷಣೆ :

ಸೆಪ್ಟೆಂಬರ್ 7ರಂದು ಬೆಂಗಳೂರಿನಲ್ಲಿರುವ ಇಸ್ರೋ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಲೈವ್ ವೀಕ್ಷಿಸಲಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರವು ರಸಪ್ರಶ್ನೆ ಸ್ಪರ್ಧೆಯನ್ನು ಘೋಷಿಸಿದ್ದು, ಸಾರ್ವಜನಿಕರು ಪ್ರಧಾನ ಮಂತ್ರಿಯೊಂದಿಗೆ ಚಂದ್ರಯಾನ -2 ಲೈವ್ ವೀಕ್ಷಿಸಲು ಅವಕಾಶ ನೀಡುತ್ತಿದೆ.

ರಸಪ್ರಶ್ನೆ ಸ್ಪರ್ಧೆ :

ರಸಪ್ರಶ್ನೆ ಸ್ಪರ್ಧೆ :

ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ https://quiz.mygov.in ಗೆ ಭೇಟಿ ನೀಡಿ ಆಗಸ್ಟ್ 25ರ ವರೆಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿದ್ಯಾರ್ಥಿಯು ಈ ಸ್ಪರ್ಧೆಯಲ್ಲಿ 20 ಪ್ರಶ್ನೆಗಳಿಗೆ 5 ನಿಮಿಷಗಳಲ್ಲಿ ಉತ್ತರಿಸಬೇಕಿರುತ್ತದೆ. ವಿಜೇತರು ಚಂದ್ರಯಾನ್ -2 ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಇಳಿಯುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೀಕ್ಷಿಸುವ ಅದೃಷ್ಟ ಕ್ಷಣಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

For Quick Alerts
ALLOW NOTIFICATIONS  
For Daily Alerts

English summary
ISRO quiz competition 2019 extended last date to 25th august. Interested candidates can participate.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X