ಅಮೆರಿಕ ಶಿಕ್ಷಣ ಮತ್ತು ಉದ್ಯೋಗ ಪಡೆಯುವುದು ಅಂದುಕೊಂಡಷ್ಟು ಸುಲಭವಿಲ್ಲ

ನೂತನ ವೀಸಾ ನೀತಿಯಂತೆ ಶಿಕ್ಷಣದಂತೆ ಉದ್ಯೋಗದ ಅವಕಾಶಗಳು ಕೂಡ ಕಡಿಮೆಯಾಗಲಿವೆ. ಎಚ್-1ಬಿ ವೀಸಾ ಹೊಂದಿರುವವರನ್ನು ಕಂಪನಿಗಳು ನೇಮಕ ಮಾಡಿಕೊಳ್ಳುವುದಿಲ್ಲ. ಹಾಗಾಗಿ ಎಚ್-1ಬಿ ವೀಸಾ ಭಾರತೀಯರಿಗೆ ಮಾರಕವಾಗಿ ಪರಿಣಮಿಸಿದೆ.

ಅಮೆರಿಕದಲ್ಲಿ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಬಯಸುವವರು ಸ್ವಲ್ಪ ಯೋಚಿಸುವುದು ಒಳ್ಳೆಯದು. ಏಕೆಂದರೆ ಅಲ್ಲಿಗೆ ಸಂಬಂಧಿಸಿದ ವೀಸಾ ವಿಚಾರವು ನೀವು ಅಂದುಕೊಂಡಷ್ಟು ಸುಲಭವಿಲ್ಲ.

ಎಚ್-1ಬಿ ವೀಸಾ ಗೊಂದಲ: ಐದು ಲಕ್ಷ ಭಾರತೀಯರಿಗೆ ಸಂಕಷ್ಟಎಚ್-1ಬಿ ವೀಸಾ ಗೊಂದಲ: ಐದು ಲಕ್ಷ ಭಾರತೀಯರಿಗೆ ಸಂಕಷ್ಟ

ಭಾರತದ ಬಹುತೇಕ ವಿದ್ಯಾರ್ಥಿಗಳು ಅಮೆರಿಕದಲ್ಲಿ ಶಿಕ್ಷಣ ಪಡೆಯುವ ಕನಸನ್ನು ಹೊಂದಿದ್ದಾರೆ. ಅಲ್ಲದೇ ಉದ್ಯೋಗ ಗಿಟ್ಟಿಸಿ ಅಲ್ಲಿನ ಸದಸ್ಯತ್ವ ಪಡೆದು ಖಾಯಂ ಆಗಿ ನೆಲೆಸುವವರ ಸಂಖ್ಯೆ ಕೂಡ ಬಹಳಷ್ಟಿದೆ.

ಎಜುಸ್ಯಾಟ್‌ ಯೋಜನೆಯಡಿ ಯು-ಟ್ಯೂಬ್ ಮೂಲಕ ಶಿಕ್ಷಣಎಜುಸ್ಯಾಟ್‌ ಯೋಜನೆಯಡಿ ಯು-ಟ್ಯೂಬ್ ಮೂಲಕ ಶಿಕ್ಷಣ

ಅಮೆರಿಕ ಬದುಕು ಅಂದುಕೊಂಡಂತಲ್ಲ

ಮಾಹಿತಿಯೊಂದರ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಅಮೆರಿಕದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕೆನ್ನುವ ಭಾರತೀಯರ ಸಂಖ್ಯೆ ಹೆಚ್ಚಿದೆ. 2014-15 ಮತ್ತು 2015-16 ಶೈಕ್ಷಣಿಕ ಸಾಲಿನಲ್ಲಿ ಅಮೆರಿಕದಲ್ಲಿ ಶಿಕ್ಷಣ ಪಡೆಯುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ರಲ್ಲಿ ಶೇ.25ರಷ್ಟು ಏರಿಕೆಯಾಗಿತ್ತು.

ಎಫ್-1 ವೀಸಾ ಮೂಲಕ ಅಮೆರಿಕದಲ್ಲಿ ಶಿಕ್ಷಣ ಪಡೆದು ಎಚ್-1ಬಿ ಮೂಲಕ ಉದ್ಯೋಗ ಗಿಟ್ಟಿಸುವುದು ಬಹುತೇಕರ ಕನಸು. ಆದರೆ ಈಗ ಅದು ಅಷ್ಟು ಸುಲಭವಿಲ್ಲ. ಏಕೆಂದರೆ ಕಳೆದ ಬಾರಿ ಅರ್ಜಿಸಲ್ಲಿಸಿದ್ದ 65000 ಮಂದಿಯಲ್ಲಿ ಶೇ.30 ಮಂದಿಗಷ್ಟೇ ಎಚ್-1ಬಿ ವೀಸಾ ನೀಡಲಾಗಿತ್ತು. ಇದರಿಂದ ಅನೇಕರು ಇಬಿ-5 ವೀಸಾ ಕಡೆಗೆ ವಾಲಿದ್ದು ಉಂಟು.

ಏಕೆಂದರೆ ಎಚ್-1ಬಿ ಗೆ ಹೋಲಿಸಿದರೆ ಇಬಿ-5 ವೀಸಾ ದಲ್ಲಿ ಬೇಗ ಸದಸ್ಯತ್ವ ಸಿಗಲಿದೆ. ಎಚ್-1ಬಿ ವೀಸಾ ಮೂಲಕ ಅಮೆರಿಕ ಸದಸ್ಯತ್ವ ಪಡೆಯಬೇಕೆಂದರೆ ಹದಿನೈದರಿಂದ ಹದಿನೆಂಟು ವರ್ಷ ಕಾಯಬೇಕಾಗುತ್ತದೆ.

ಏನಿದು ಇಬಿ-5 ವೀಸಾ

ಇಬಿ-5 ವೀಸಾ ಬಂಡವಾಳ ಹೂಡುವ ಮೂಲಕ ಪಡೆಯುವ ವೀಸಾ ಆಗಿದೆ. ಈ ಮೂಲಕ ಅಮೆರಿಕದಲ್ಲಿ ಐದು ಲಕ್ಷ ಯುಎಸ್ ಡಾಲರ್ ಗಳವರೆಗು ಬಂಡವಾಳ ಹೂಡಿ ಕೇವಲ 18-24 ತಿಂಗಳಲ್ಲಿ ಅಲ್ಲಿನ ಕಾಯಂ ಸದಸ್ಯತ್ವವನ್ನು ಪಡೆಯಬಹುದು.

ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾತಿ ಕಡಿತ

ಬಹುತೇಕ ಅಮೆರಿಕ ವಿವಿಗಳು ವಿದೇಶಿ ವಿದ್ಯಾರ್ಥಿಗಳ ಪ್ರವೇಶಾತಿ ಮಿತಿಯನ್ನು ಕಡಿಮೆ ಮಾಡಿವೆ. ಶೇ.20 ರಷ್ಟು ವಿದ್ಯಾರ್ಥಿಗಳು ಮಾತ್ರ ಅಮೆರಿಕ ವಿವಿಯಲ್ಲಿ ಶಿಕ್ಷಣ ಪಡೆಯುತ್ತಿದ್ದು, ಅಮೆರಿಕದ ಪ್ರತಿಷ್ಟಿತ ನಂಬರ್ ಒನ್ ವಿವಿ ಮಸಾಚುಯೆಟ್ಸ್ ನಲ್ಲಿ ಇದರ ಸಂಖ್ಯೆ ಶೇ 0.03 ರಷ್ಟಿದೆ ಮತ್ತು ಸ್ಟಾನ್ಫೋರ್ಡ್ ವಿವಿಯಲ್ಲಿ ಶೇ.1 ರಷ್ಟಿದೆ. ಇನ್ನು ವಿದೇಶಿ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಕೂಡ ಕಡಿಮೆ ಇದ್ದು, ಅದರಲ್ಲಿ ಗ್ರೀನ್ ಕಾರ್ಡ್ ಹೊಂದಿರುವವರಿಗೆ ಮತ್ತು ಇಬಿ-5 ವೀಸಾ ಹೊಂದಿದವರಿಗೆ ಆದ್ಯತೆ ನೀಡಲಾಗುತ್ತದೆ.

ಉದ್ಯೋಗ ಅವಕಾಶ ಕಡಿಮೆ

ನೂತನ ವೀಸಾ ನೀತಿಯಂತೆ ಶಿಕ್ಷಣದಂತೆ ಉದ್ಯೋಗದ ಅವಕಾಶಗಳು ಕೂಡ ಕಡಿಮೆಯಾಗಲಿವೆ. ಎಚ್-1ಬಿ ವೀಸಾ ಹೊಂದಿರುವವರನ್ನು ಕಂಪನಿಗಳು ನೇಮಕ ಮಾಡಿಕೊಳ್ಳುವುದಿಲ್ಲ. ಹಾಗಾಗಿ ಎಚ್-1ಬಿ ವೀಸಾ ಭಾರತೀಯರಿಗೆ ಮಾರಕವಾಗಿ ಪರಿಣಮಿಸಿದೆ.

For Quick Alerts
ALLOW NOTIFICATIONS  
For Daily Alerts

English summary
As a new visa policy, employment opportunities will also decrease as education. Companies do not hire H-1B visa holders. Hence, the H-1B visa has become fatal for Indians.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X