ಜೆಇಇ ಅಡ್ವಾನ್ಸ್ಡ್ 2022 ಕೀ ಉತ್ತರ : ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್ 2022ರ ಕೀ ಉತ್ತರಗಳನ್ನು ಸೆಪ್ಟೆಂಬರ್ 3 ರಂದು, ಅಂದರೆ ನಾಳೆ ಬಿಡುಗಡೆ ಮಾಡಲಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಕೀ ಉತ್ತರಗಳು ಪ್ರಕಟವಾದ ಬಳಿಕ ವೀಕ್ಷಿಸಬಹುದು.
ಜೆಇಇ ಅಡ್ವಾನ್ಸ್ಡ್ 2022ರ ಕೀ ಉತ್ತರಗಳು ಅಧಿಕೃತ ವೆಬ್‌ಸೈಟ್ jeeadv.ac .in, ನಲ್ಲಿ ಲಭ್ಯವಿರುತ್ತದೆ. ಅಭ್ಯರ್ಥಿಗಳು ಸೆಪ್ಟೆಂಬರ್ 4 ರವರೆಗೆ ಉತ್ತರದ ಕೀಯ ಮೇಲೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಜೆಇಇ ಅಡ್ವಾನ್ಸ್ಡ್ ಅಂತಿಮ ಉತ್ತರ ಕೀ ಮತ್ತು ಫಲಿತಾಂಶವು ಸೆಪ್ಟೆಂಬರ್ 11 ರಂದು ಹೊರಬೀಳುತ್ತದೆ.
ಜೆಇಇ ಅಡ್ವಾನ್ಸ್ಡ್ 2022 ರ ಪ್ರತಿಕ್ರಿಯೆ ಹಾಳೆಯನ್ನು ಈ ಹಿಂದೆ ಸೆಪ್ಟೆಂಬರ್ 1 ರಂದು ಮತ್ತು ಪ್ರಶ್ನೆ ಪತ್ರಿಕೆಗಳನ್ನು ಆಗಸ್ಟ್ 29 ರಂದು ಬಿಡುಗಡೆ ಮಾಡಲಾಗಿತ್ತು. ಎಂಜಿನಿಯರಿಂಗ್ ಪ್ರವೇಶವನ್ನು ಆಗಸ್ಟ್ 28 ರ ಭಾನುವಾರದಂದು ನಡೆಸಲಾಯಿತು.

JEE ಅಡ್ವಾನ್ಸ್ಡ್ 2022 : ಕೀ ಉತ್ತರ ಡೌನ್‌ಲೋಡ್ ಮಾಡುವುದು ಹೇಗೆ ? :
ಸ್ಟೆಪ್ 1 : ಅಧಿಕೃತ ವೆಬ್‌ಸೈಟ್ jeeadv.ac.in ಗೆ ಭೇಟಿ ನೀಡಿ
ಸ್ಟೆಪ್ 2 : JEE ಅಡ್ವಾನ್ಸ್ಡ್ 2022 ಉತ್ತರ ಕೀ ಲಿಂಕ್ ಅನ್ನು ಕ್ಲಿಕ್ ಮಾಡಿ
ಸ್ಟೆಪ್ 3 : ನಿಮ್ಮ ಅಪ್ಲಿಕೇಶನ್ ಸಂಖ್ಯೆ, ಪಾಸ್‌ವರ್ಡ್ ನಮೂದಿಸಿ
ಸ್ಟೆಪ್ 4 : JEE ಅಡ್ವಾನ್ಸ್ಡ್ 2022 ಕೀ ಉತ್ತರ ಪರದೆಯ ಮೇಲೆ ಕಾಣಿಸುತ್ತದೆ
ಸ್ಟೆಪ್ 5 : ಹೆಚ್ಚಿನ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಯಶಸ್ವಿ ಅಭ್ಯರ್ಥಿಗಳು ಸೆಪ್ಟೆಂಬರ್ 12 ರಂದು ಪ್ರಾರಂಭವಾಗುವ ಜಂಟಿ ಸೀಟ್ ಹಂಚಿಕೆ (JoSAA) ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. JoSAA ಕೌನ್ಸಿಲಿಂಗ್ ಪ್ರಕ್ರಿಯೆಯ ವಿವರಗಳಿಗಾಗಿ ದಯವಿಟ್ಟು ಅಧಿಕೃತ ವೆಬ್‌ಸೈಟ್ josaa.nic.in ಗೆ ಭೇಟಿ ನೀಡಿ.


Click it and Unblock the Notifications











