ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಜೆಇಇ ಪರೀಕ್ಷಾ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ . ಜೆಇಇ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳಿಗೆ ಸೇರ ಬಯಸುವ ಅಭ್ಯರ್ಥಿಗಳಿಗೆ ನಡೆಸುವ ಪ್ರವೇಶ ಪರೀಕ್ಷೆಯಾಗಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಹೋಗಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.

ಜನವರಿ ತಿಂಗಳಲ್ಲಿ 9,29,198 ವಿದ್ಯಾರ್ಥಿಗಳು ಜೆಇಇ ಪರೀಕ್ಷೆಗೆ ರಿಜಿಸ್ಟರ್ ಮಾಡಿದ್ದರು ಹಾಗೆಯೇ ಏಪ್ರಿಲ್ ತಿಂಗಳಿನಲ್ಲಿ 9,35,741ವಿದ್ಯಾರ್ಥಿಗಳು ಪರೀಕ್ಷೆಗೆ ರಿಜಿಸ್ಟರ್ ಮಾಡಿದ್ದಾರೆ. 6,543ರಷ್ಟು ಹೆಚ್ಚಿನ ವಿದ್ಯಾರ್ಥಿಗಳು ಇಂಜಿನಿಯರ್ ಕೋರ್ಸ್‌ಗಳಿಗೆ ರಿಜಿಸ್ಟರ್ ಮಾಡಿರುತ್ತಾರೆ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳಿಗೆ ಜನವರಿಯಲ್ಲಿ 1,80,052 ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿದ್ದರು ಆದರೆ ಏಪ್ರಿಲ್ ತಿಂಗಳಿನಲ್ಲಿ 1,69,767ರಷ್ಟು ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿದ್ದು 10,285 ರಷ್ಟು ಇಳಿಕೆ ಕಂಡುಬಂದಿರುತ್ತದೆ.
ಜೆಇಇ ಮೇನ್ ಪರೀಕ್ಷೆ ಪೇಪರ್ 1 ರ ಫಲಿತಾಂಶ ಏಪ್ರಿಲ್ 29 ರಂದು ಮತ್ತು ಜೆಇಇ ಮೇನ್ ಪರೀಕ್ಷೆಯ ಪೇಪರ್ 2 ರ ಫಲಿತಾಂಶ ಮೇ 15 ರಂದು ಪ್ರಕಟವಾಗುವ ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸುತ್ತಿರತಕ್ಕದ್ದು.
ಜೆಇಇ ಪರೀಕ್ಷಾ 2019 ರ ಫಲಿತಾಂಶ ವೀಕ್ಷಿಸಲು ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ
ಸ್ಟೆಪ್ 1: ವಿದ್ಯಾರ್ಥಿಗಳು ಜೆಇಇ ಅಧಿಕೃತ ವೆಬ್‌ಸೈಟ್ https://jeemain.nic.in/webinfo/Public/Home.aspx ಗೆ ಹೋಗಿ
ಸ್ಟೆಪ್ 2: ಹೋಂ ಪೇಜ್‌ನಲ್ಲಿ ಕಾಣಿಸುವ "JEE (Main)April 2019 NTA Score" ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಹೊಸ ಪುಟ ತೆರೆಯುತ್ತದೆ ಅಲ್ಲಿ ಕೇಳಲಾಗಿರುವ ನಿಮ್ಮ ಅಪ್ಲಿಕೇಶನ್ ನಂಬರ್ ಮತ್ತು ಜನ್ಮ ದಿನಾಂಕ ನೀಡಿ
ಸ್ಟೆಪ್ 4: ನಂತರ ನಿಮ್ಮ ಫಲಿತಾಂಶವನ್ನು ವೀಕ್ಷಿಸಿ ಡೌನ್‌ಲೋಡ್ ಮಾಡಿಕೊಂಡು ಒಂದು ಪ್ರಿಂಟೌಟ್ ಅನ್ನು ತೆಗೆದಿಟ್ಟುಕೊಳ್ಳಿ
ವಿದ್ಯಾರ್ಥಿಗಳಿಗಾಗಿ ಜೆಇಇ ಪರೀಕ್ಷಾ ಕೀ-ಉತ್ತರ (ಪೇಪರ್ 1ರ ಸರಿ ಉತ್ತರ)ಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿರುತ್ತದೆ. ಅದನ್ನು ಕೂಡ ವಿದ್ಯಾರ್ಥಿಗಳು ಪರೀಕ್ಷಿಸಿಕೊಳ್ಳಬಹುದು.


Click it and Unblock the Notifications











