ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಜೆಇಇ ಮುಖ್ಯ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಿದೆ. ಈಗಾಗಲೇ ಜೆಇಇ ಮುಖ್ಯ ಪರೀಕ್ಷೆಗೆ ರಿಜಿಸ್ಟ್ರೇಶನ್ ಮಾಡಿಕೊಂಡ ಅಭ್ಯರ್ಥಿಗಳು, ಪರೀಕ್ಷೆ ಬರೆಯಲು ಈ ಮುಂಚೆ ಆಯ್ಕೆ ಮಾಡಿಕೊಂಡಂತಹ ಪರೀಕ್ಷಾ ಕೇಂದ್ರವನ್ನು ಬದಲು ಮಾಡಿಕೊಳ್ಳುವುದಿದ್ದಲ್ಲಿ ನಾಳೆ ಸಂಜೆ 5 ಗಂಟೆಯೊಳಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ನ್ಯಾಷನಲ್ ಟೆಸ್ಟಿಂಟ್ ಏಜೆನ್ಸಿಯು ಏಪ್ರಿಲ್ 01,2020 ರಂದು, ಅಭ್ಯರ್ಥಿಗಳು ತಮ್ಮ ಮಾಹಿತಿಗಳನ್ನು ತಪ್ಪಾಗಿ ನೀಡಿದ್ದಲ್ಲಿ, ತಿದ್ದುಪಡಿಗೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿ ಅವಕಾಶ ನೀಡಲಾಗಿತ್ತು. ಕೊರೊನಾ ವೈರಸ್ ಸೊಂಕು ಹಿನ್ನೆಲೆಯಲ್ಲಿ ಮಾಹಿತಿ ಸರಿಪಡಿಸುವಿಕೆ ಸಮಸ್ಯೆ ಎದುರಿಸಿದ ಅಭ್ಯರ್ಥಿಗಳ ಮನವಿಗೆ ಸ್ಪಂದಿಸಿ ದಿನಾಂಕ ಮುಂದೂಡಲಾಗಿತ್ತು. ಇದೀಗ ಪರೀಕ್ಷೆ ಕೇಂದ್ರದ ಬದಲಾವಣೆಗೆ ಅವಕಾಶ ನೀಡಿರುತ್ತದೆ.
ಏಪ್ರಿಲ್ 14, 2020 ರ ನಂತರದಲ್ಲಿ ಪರೀಕ್ಷಾ ಕೇಂದ್ರ ಬದಲಾವಣೆಗೆ ಯಾವುದೇ ಅವಕಾಶ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪರೀಕ್ಷಾ ಕೇಂದ್ರ ಬದಲಾವಣೆಗೆ ಅಭ್ಯರ್ಥಿಗಳು ಜೆಇಇ ಮುಖ್ಯ ಪರೀಕ್ಷೆಗೆ ಸಂಬಂಧಿಸಿದ ಅಧಿಕೃತ ವೆಬ್‌ಸೈಟ್ https://jeemain.nta.nic.in/webinfo/public/home.aspx ಗೆ ಭೇಟಿ ನೀಡಬೇಕಿರುತ್ತದೆ.
ಈ ಬಗೆಗಿನ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











