
2021ರ ಜಾಯಿಂಟ್ ಎಂಟ್ರೇಂಸ್ ಎಕ್ಸಾಮಿನೇಶನ್ (ಜೆಇಇ) ಮುಖ್ಯ ಪರೀಕ್ಷೆ ೪ನೇ ಸೆಶನ್ ಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 12,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಜೆಇಇ ಮುಖ್ಯ ಪರೀಕ್ಷೆಯನ್ನು ದೇಶದ ಟಾಪ್ ಕಾಲೇಜುಗಳಲ್ಲಿ ಮತ್ತು ಐಐಟಿಗಳಲ್ಲಿ ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆಯಲು ನಡೆಸಲಾಗತ್ತದೆ. ಜೆಇಇ ಮುಖ್ಯ 4ನೇ ಸೆಶನ್ ಪರೀಕ್ಷೆಯು ಜುಲೈ 27 ರಿಂದ ಆಗಸ್ಟ್ 2, 2021 ರವರೆಗೆ ನಡೆಯಲಿದೆ.
ಏಪ್ರಿಲ್ ಅಥವಾ ಮೇ ಸೆಶನ್ ಗೆ ಈ ಮೊದಲೇ ಅರ್ಜಿ ಸಲ್ಲಿಸಿದವರು ತಮ್ಮ ಅರ್ಜಿಯನ್ನು ಎಡಿಟ್ ಮಾಡಿಕೊಳ್ಳಬಹುದು. COVID-19 ಸಾಂಕ್ರಾಮಿಕ ರೋಗದ ನಡುವೆ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಪಾಳಿಯಲ್ಲಿ 660 ರಿಂದ 828ರ ವರೆಗೆ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು.
ಜೆಇಇ ಪ್ರಮುಖ ಪರೀಕ್ಷೆಗೆ ರಿಜಿಸ್ಟ್ರೇಶನ್ ಮಾಡುವುದು ಹೇಗೆ:
ಸ್ಟೆಪ್ 1: ಜೆಇಇ ಅಧಿಕೃತ ವೆಬ್‌ಸೈಟ್ https://jeemain.nta.nic.in/webinfo2021/Page/Page?PageId=1&LangId=P ಗೆ ವಿಸಿಟ್ ಮಾಡಿ
ಸ್ಟೆಪ್ 2: ಎನ್‌ಟಿಎ ಎಕ್ಸಾಮ್ಸ್ ಅಡಿಯಲ್ಲಿ ಬರುವ ಜಾಯಿಂಟ್ ಎಂಟ್ರೇಂಸ್ ಎಕ್ಸಾಮಿನೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಜೆಇಇ ಪ್ರಮುಖ ಅರ್ಜಿ ಭರ್ತಿ ಪ್ರಕ್ರಿಯೆ ಪ್ರಾರಂಭಿಸಲು ರಿಜಿಸ್ಟ್ರೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಫಿಲ್ ಅಪ್ಲಿಕೇಶನ್ ಫಾರ್ಮ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5: ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 6: ಫೋಟೋಗ್ರಾಫ್ ಮತ್ತು ಸಹಿಯನ್ನ ಅಪ್‌ಲೋಡ್ ಮಾಡಿ
ಸ್ಟೆಪ್ 7: ಅರ್ಜಿ ಶುಲ್ಕ ಪಾವತಿಸಿ
ಸ್ಟೆಪ್ 8: ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 9: ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ


Click it and Unblock the Notifications











