JEE Main 2021 Admit Card : ಜೆಇಇ ಮುಖ್ಯ 4ನೇ ಸೆಶನ್ ಪರೀಕ್ಷೆಯ ಪ್ರವೇಶ ಪತ್ರ ಡೌನ್‌ಲೋಡ್ ಹೇಗೆ ?

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಜೆಇಇ ಮುಖ್ಯ ಪರೀಕ್ಷೆ 2021ರ 4ನೇ ಸೆಶನ್ ನ ಪ್ರವೇಶ ಪತ್ರವನ್ನು ಪ್ರಕಟ ಮಾಡಿದೆ. ಜೆಇಇ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಇದೀಗ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಭಾರತದೆಲ್ಲೆಡೆ ಜೆಇಇ ಪ್ರಮುಖ 4ನೇ ಸೆಶನ್ ಪರೀಕ್ಷೆಯು ಆಗಸ್ಟ್ 26,27,31 ಮತ್ತು ಸೆಪ್ಟೆಂಬರ್ 1, 2,2021ರ ವರೆಗೆ ನಡೆಯಲಿದೆ. ಅಭ್ಯರ್ಥಿಗಳು ಪರೀಕ್ಷೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬಹುದು.

ಜೆಇಇ ಮುಖ್ಯ 4ನೇ ಸೆಶನ್ ಪರೀಕ್ಷೆಯ ಪ್ರವೇಶ ಪತ್ರ ಔಟ್

ಜೆಇಇ ಪರೀಕ್ಷೆ:

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಆಯೋಜಿಸುವ ಜೆಇಇ ಪರೀಕ್ಷೆಯು ವೃತ್ತಿಪರ ಕೋರ್ಸುಗಳಿಗೆ ಸೇರುವ ವಿದ್ಯಾರ್ಥಿಗಳಲ್ಲಿ ಒತ್ತಡ ಕಡಿಮೆಮಾಡಲು ಹಾಗು ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಬಯಸುವವರಿಗೆ ಈ ಪರೀಕ್ಷೆಗಳು ಸಹಕಾರಿಯಾಗಿವೆ. ಜೆ.ಇ.ಇ. ಪರೀಕ್ಷೆಗಳು ರಾಷ್ಟ್ರ ಮಟ್ಟದ ತಾಂತ್ರಿಕ ವಿದ್ಯಾಸಂಸ್ಥೆಗಳಿಗೆ ಪ್ರವೇಶವನ್ನು ಪಡೆಯಲು ತೆಗೆದುಕೊಳ್ಳಬೇಕಾದಂಥವು. ಐ.ಐ.ಟಿ., ಎನ್.ಐ.ಟಿ., ಐ.ಎಸ್.ಇ.ಆರ್., ಮುಂತಾದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಶುದ್ಧ ವಿಜ್ಞಾನವನ್ನೋ ಅಥವಾ ಅನ್ವಯ ವಿಜ್ಞಾನವನ್ನೋ ಅಧ್ಯಯನ ಮಾಡಲು ಜೆ.ಇ.ಇ. ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆಯಬೇಕು. ಜೆ.ಇ.ಇ. ಆಯ್ಕೆ ಪರೀಕ್ಷೆಗಳು ತಮ್ಮದೇ ಆದ ಪಠ್ಯವನ್ನು ಆಧರಿಸಿರುತ್ತವೆ.

ಜೆಇಇ ಮುಖ್ಯ 4ನೇ ಸೆಶನ್ ಪರೀಕ್ಷೆಯ ಪ್ರವೇಶ ಪತ್ರ ಔಟ್

ಜೆಇಇ ಪ್ರವೇಶ ಪತ್ರ ಡೌನ್ಲೋಡ್ ಮಾಡುವ ವಿಧಾನ:

ಸ್ಟೆಪ್ 1: ಜೆಇಇ ಅಧಿಕೃತ ವೆಬ್-ಸೈಟ್ https://jeemain.nta.nic.in/ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್‌ನಲ್ಲಿ ಲಭ್ಯವಿರುವ "Download Admit Card of JEE (Main)- August (Session 4), 2021" ಬಟನ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಅಲ್ಲಿ ಅರ್ಜಿ ಸಂಖ್ಯೆ, ಜನ್ಮ ದಿನಾಂಕ, ಸೆಕ್ಯುರಿಟಿ ಪಿನ್ ಅನ್ನು ಸಂಪೂರ್ಣವಾಗಿ ತಪ್ಪಿಲ್ಲದಂತೆ ಭರ್ತಿ ಮಾಡಿ
ಸ್ಟೆಪ್ 4: ನಂತರ "SUBMIT" ಬಟನ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5: ಪ್ರವೇಶ ಪತ್ರವು ಸ್ಕ್ರೀನ್ ಮೇಲೆ ಲಭ್ಯವಾಗುವುದು ಅದನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಲಭ್ಯವಿರುವ ಲಿಂಕ್‌ಗಳು :

ಲಿಂಕ್ 1
ಲಿಂಕ್ 2
ಲಿಂಕ್ 3

ಜೆಇಇ ಮುಖ್ಯ ಪರೀಕ್ಷೆ 2021ರ ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಎನ್‌ಟಿಎ ಮೂರು ಲಿಂಕ್‌ಗಳನ್ನು ಸಕ್ರಿಯಗೊಳಿಸಿದೆ. ತಾಂತ್ರಿಕ ದೋಷದಿಂದಾಗಿ ಒಂದು ಲಿಂಕ್ ಕಾರ್ಯನಿರ್ವಹಿಸದಿದ್ದಲ್ಲಿ, ಅಭ್ಯರ್ಥಿಗಳು ತಮ್ಮ ಹಾಲ್ ಟಿಕೆಟ್ ಅನ್ನು ಅಧಿಕೃತ ಸೈಟ್‌ನಲ್ಲಿ ಒದಗಿಸಿರುವ ಇತರ ಎರಡು ಪರ್ಯಾಯ ಲಿಂಕ್‌ಗಳಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡ ಬಳಿಕ ಅದರಲ್ಲಿ ಪ್ರಕಟವಾಗಿರುವ ಎಲ್ಲಾ ವಿವರಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಏನಾದರೂ ದೋಷ ಕಂಡುಬಂದರೆ ತಕ್ಷಣವೇ ಅಧಿಕಾರಿಗಳನ್ನು ಸಂಪರ್ಕಿಸಬೇಕು.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಜೆಇಇ ಮುಖ್ಯ ಪರೀಕ್ಷೆ 2021ರ ಪ್ರವೇಶ ಪತ್ರದ ಹಾರ್ಡ್ ಕಾಪಿ ಜೊತೆಗೆ ಮಾನ್ಯತೆ ಪಡೆದ ಫೋಟೊ ಐಡಿ ಪ್ರೂಫ್ ಅನ್ನು ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯುವುದು ಕಡ್ಡಾಯವಾಗಿದೆ.

More News  

For Quick Alerts
ALLOW NOTIFICATIONS  
For Daily Alerts

English summary
NTA released JEE Main 2021 Admit Card for 4th Session. Here is how and where to download.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+