ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಇದೀಗ ಜೆಇಇ ಪ್ರಮುಖ ಪರೀಕ್ಷೆಯ ದಿನಾಂಕ ಹಾಗೂ ಶಿಫ್ಟ್ ಬಗ್ಗೆ ಪ್ರಕಟಣೆ ಹೊರಡಿಸಿದೆ. ಆಫೀಶಿಯಲ್ ನೋಟಿಫಿಕೇಶನ್ ಪ್ರಕಾರ, 2ನೇ ಪೇಪರ್ ಜೆಇಇ ಪ್ರಮುಖ ಪರೀಕ್ಷೆಯು ಜನವರಿ 8, 2019 ರಂದು ನಡೆಯಲಿದೆ. ಯಾರೆಲ್ಲಾ ಜೆಇಇ ಪ್ರಮುಖ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದಾರೋ ಅವರೆಲ್ಲ ಆಫೀಶಿಯಲ್ ವೆಬ್ಸೈಟ್ ವಿಸಿಟ್ nta.ac.in ಮಾಡಿ ಚೆಕ್ ಮಾಡಿಕೊಳ್ಳಬಹುದಾಗಿದೆ.
ಹಲವಾರು ಶಿಫ್ಟ್ ಗಳಲ್ಲಿ ನಡೆಯುವ ಜೆಇಇ ಪ್ರಮುಖ ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಜನವರಿ 6 ರಿಂದ 20, 2019 ವರೆಗೆ ನಡೆಯಲಿದ್ದು, ಜೆಇಇ ಪ್ರಮುಖ ಪರೀಕ್ಷೆಯ ಎರಡನೇ ಪತ್ರಿಕೆ ಜನವರಿ 8, 2019 ರಂದು ನಡೆಯಲಿದೆ. ಡಿಸಂಬರ್ 17, 2018 ರಂದು ಅಡ್ಮಿಟ್ ಕಾರ್ಡ್ ಲಭ್ಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Most Read: ವೈದ್ಯಕೀಯ ಪ್ರವೇಶ ಪರೀಕ್ಷೆ 2019: ದಿನಾಂಕಗಳು ಹೀಗಿವೆ!
ಜೆಇಇ ಪ್ರಮುಖ 2019: ಹಲವಾರು ದಿನಾಂಕ:
ಹಲವಾರು ದಿನಗಳಲ್ಲಿ ಈ ಪರೀಕ್ಷೆ ನಡೆಯುದರಿಂದ ವಿದ್ಯಾರ್ಥಿಗಳು ತಮಗೆ ಅನುಕೂಲಕರವಾಗುವಂತಹ ಪರೀಕ್ಷೆ ದಿನಾಂಕವನ್ನ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ ವಿದ್ಯಾರ್ಥಿಗಳು ಜೆಇಇ (ಪ್ರಮುಖ) ಹಾಗೂ ನೀಟ್ ಪರೀಕ್ಷೆಯನ್ನ ಎರಡನೇ ಭಾರಿ ಬರೆಯುವುದಾದಲ್ಲಿ, ಈ ಎರಡೂ ಪರೀಕ್ಷೆಯ ಅಂಕಗಳು ಅವರ ಅಕೌಂಟ್ ಗೆ ಬಂದು ಸೇರುತ್ತದೆ.
ಜೆಇಇ 2019 ಪರೀಕ್ಷೆಯ ಪ್ರಮುಖ ದಿನಾಂಕಗಳು:
Most Read: ಡಿಸಂಬರ್ನಲ್ಲಿ ನಡೆಯಲಿರುವ ಈ ವರ್ಷದ ಕೊನೆಯ ಯುಜಿಸಿ ನೆಟ್ ಪರೀಕ್ಷೆಯ ಪ್ರಮುಖ ಮಾಹಿತಿ!
- ಅರ್ಜಿ ಸಲ್ಲಿಕೆ ದಿನಾಂಕ: ಸೆಪ್ಟಂಬರ್ 1 ರಿಂದ ಸೆಪ್ಟಂಬರ್ 30, 2018
- ಅಡ್ಮಿಟ್ ಕಾರ್ಡ್ ಡೌನ್ಲೋಡ್ : ಡಿಸಂಬರ್ 17, 2018
- ಪರೀಕ್ಷೆ ದಿನಾಂಕ : ಜನವರಿ 6 ರಿಂದ ಜನವರಿ 20, 2019
- ಫಲಿತಾಂಶ ದಿನಾಂಕ: ಜನವರಿ 31, 2019