ಜೆಇಇ 2019 ಪರೀಕ್ಷಾ ಫಲಿತಾಂಶ ಏಪ್ರಿಲ್ 30 ರೊಳಗೆ ಪ್ರಕಟವಾಗುವ ಸಾಧ್ಯತೆ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಜೆಇಇ ಪರೀಕ್ಷಾ ಫಲಿತಾಂಶವನ್ನು ಏಪ್ರಿಲ್ ತಿಂಗಳ 30ನೇ ತಾರೀಖಿನೊಳಗೆ ಪ್ರಕಟ ಮಾಡುವ ಸಾಧ್ಯತೆ ಇದೆ. ಜೆಇಇ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳಿಗೆ ಸೇರ ಬಯಸುವ ಅಭ್ಯರ್ಥಿಗಳಿಗೆ ನಡೆಸುವ ಪ್ರವೇಶ ಪರೀಕ್ಷೆಯಾಗಿದೆ. ಪರೀಕ್ಷಾ ಫಲಿತಾಂಶ ಪ್ರಕಟವಾದ ಕೂಡಲೇ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಗೆ ಹೋಗಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.

ಜೆಇಇ ಪರೀಕ್ಷಾ ಫಲಿತಾಂಶ

ಜನವರಿ ತಿಂಗಳಲ್ಲಿ 9,29,198 ವಿದ್ಯಾರ್ಥಿಗಳು ಜೆಇಇ ಪರೀಕ್ಷೆಗೆ ರಿಜಿಸ್ಟರ್ ಮಾಡಿದ್ದರು ಹಾಗೆಯೇ ಏಪ್ರಿಲ್ ತಿಂಗಳಿನಲ್ಲಿ 9,35,741ವಿದ್ಯಾರ್ಥಿಗಳು ಪರೀಕ್ಷೆಗೆ ರಿಜಿಸ್ಟರ್ ಮಾಡಿದ್ದಾರೆ. 6,543ರಷ್ಟು ಹೆಚ್ಚಿನ ವಿದ್ಯಾರ್ಥಿಗಳು ಇಂಜಿನಿಯರ್ ಕೋರ್ಸ್‌ಗಳಿಗೆ ರಿಜಿಸ್ಟರ್ ಮಾಡಿರುತ್ತಾರೆ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳಿಗೆ ಜನವರಿಯಲ್ಲಿ 1,80,052 ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿದ್ದರು ಆದರೆ ಏಪ್ರಿಲ್ ತಿಂಗಳಿನಲ್ಲಿ 1,69,767ರಷ್ಟು ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿದ್ದು 10,285 ರಷ್ಟು ಇಳಿಕೆ ಕಂಡುಬಂದಿರುತ್ತದೆ.

ಜೆಇಇ ಮೇನ್ ಪರೀಕ್ಷೆ ಪೇಪರ್ 1 ರ ಫಲಿತಾಂಶ ಏಪ್ರಿಲ್ 30 ರಂದು ಮತ್ತು ಜೆಇಇ ಮೇನ್ ಪರೀಕ್ಷೆಯ ಪೇಪರ್ 2 ರ ಫಲಿತಾಂಶ ಮೇ 15 ರಂದು ಪ್ರಕಟವಾಗುವ ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಅಧಿಕೃತ ವೆಬ್‌ಸೈಟ್‌ ಅನ್ನು ಪರಿಶೀಲಿಸುತ್ತಿರತಕ್ಕದ್ದು.

ಜೆಇಇ:

ಜೆ ಇ ಇ ಪರೀಕ್ಷೆಗಳು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ ಮತ್ತು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿ ಬಿ ಎಸ್ ಇ ), ನವದೆಹಲಿ, ಸಹಯೋಗದೊಂದಿಗೆ ಆಯೋಜಿಸುವ ಜಂಟಿ ಪ್ರವೇಶ ಪರೀಕ್ಷೆ. ವೃತ್ತಿಪರ ಕೋರ್ಸುಗಳಿಗೆ ಸೇರುವ ವಿದ್ಯಾರ್ಥಿಗಳಲ್ಲಿ ಒತ್ತಡ ಕಡಿಮೆಮಾಡಲು ಹಾಗು ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಬಯಸುವವರಿಗೆ ಜೆ ಇ ಇ ಪರೀಕ್ಷೆಗಳು ಸಹಕಾರಿಯಾಗಿವೆ. ಜೆ.ಇ.ಇ. ಪರೀಕ್ಷೆಗಳು ರಾಷ್ಟ್ರ ಮಟ್ಟದ ತಾಂತ್ರಿಕ ವಿದ್ಯಾಸಂಸ್ಥೆಗಳಿಗೆ ಪ್ರವೇಶವನ್ನು ಪಡೆಯಲು ತೆಗೆದುಕೊಳ್ಳಬೇಕಾದಂಥವು. ಐ.ಐ.ಟಿ., ಎನ್.ಐ.ಟಿ., ಐ.ಎಸ್.ಇ.ಆರ್., ಮುಂತಾದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಶುದ್ಧ ವಿಜ್ಞಾನವನ್ನೋ ಅಥವಾ ಅನ್ವಯ ವಿಜ್ಞಾನವನ್ನೋ ಅಧ್ಯಯನ ಮಾಡಲು ಜೆ.ಇ.ಇ. ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆಯಬೇಕು. ಜೆ.ಇ.ಇ. ಆಯ್ಕೆ ಪರೀಕ್ಷೆಗಳು ತಮ್ಮದೇ ಆದ ಪಠ್ಯವನ್ನು ಆಧರಿಸಿರುತ್ತವೆ.

More News  

For Quick Alerts
ALLOW NOTIFICATIONS  
For Daily Alerts

English summary
JEE main exam results 2019 will be declare before 30th april in official website
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+