ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ನಡುವೆಯೂ ಸೆಪ್ಟೆಂಬರ್ 1 ರಿಂದ 6ರ ನಡುವೆ ಜೆಇಇ ಪ್ರಮುಖ ಪರೀಕ್ಷೆ ನಡೆಯಲಿದೆ. ನೀಟ್ ಪರೀಕ್ಷೆ ಸೆಪ್ಟೆಂಬರ್ 13 ರಂದು ದೇಶದಾದ್ಯಂತ ನಡೆಯಲಿದ್ದು, 15 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಕೊರೋನಾ ನಡುವೆ ಜೆಇಇ ನೀಟ್ ಪರೀಕ್ಷೆ ನಡೆಸಲಾಗುತ್ತಿದ್ದು, ಎನ್ಟಿಎ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಅವುಗಳ ಮಾಹಿತಿ ಇಲ್ಲಿದೆ.
ಜೆಇಇ ಮತ್ತು ನೀಟ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಾರ್ಗಸೂಚಿಗಳು:
* ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ವಿದ್ಯಾರ್ಥಿಗಳು ಥರ್ಮಲ್ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದು ಮುಖ್ಯವಾಗಿದೆ. 99.4 ಡಿಗ್ರಿ ಫ್ಯಾರನ್ ಹೀಟ್ ಗಿಂತ ಅಧಿಕವಾಗಿರುವ ಅಭ್ಯರ್ಥಿಗಳು ಐಸೋಲೇಶನ್ ಕೊಠಡಿಯಲ್ಲಿ ಪರೀಕ್ಷೆ ಬರೆಯಬೇಕಿರುತ್ತದೆ.
* ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಮಾಸ್ಕ್ ಮತ್ತು ಕೈಗವಸನ್ನು ಧರಿಸುವುದು ಕಡ್ಡಾಯವಾಗಿರುತ್ತದೆ.
* ಪರೀಕ್ಷಾ ಕೇಂದ್ರಕ್ಕೆ ಬರುವ ಅಭ್ಯರ್ಥಿಗಳು ತಮಗೆ ಅಗತ್ಯವಿರುವ ನೀರು ಮತ್ತು ಸ್ಯಾನಿಟೈಸರ್ ಅನ್ನು ತಾವೇ ತರಬೇಕಿರುತ್ತದೆ.
* ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಸಾಮಾಜಿಕ ಅಂತಕ ಕಾಯ್ದುಕೊಳ್ಳಬೇಕಿದೆ.
* ಕೊರೋನಾ ರೋಗ ಲಕ್ಷಣಗಳಿರುವ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಲು ಎನ್ಟಿಎ ನಿಯಮಗಳನ್ನು ರೂಪಿಸಿದೆ.
* ಕಂಟೈನ್ಮೆಂಟ್ ವಲಯದಲ್ಲಿರುವ ರೋಗಲಕ್ಷಣಗಳಿಲ್ಲದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವ ಬಗ್ಗೆ ಮಾರ್ಗಸೂಚಿಯಲ್ಲಿ ಸ್ಪಷ್ಟನೆ ಇಲ್ಲ.
* ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕೊರೋನಾ ಸೋಂಕಿನ ಲಕ್ಷಣಗಳಿಲ್ಲ ಅಥವಾ ನರಳುತ್ತಿಲ್ಲ ಅಥವಾ ಕೊರೋನಾ ಪಾಸಿಟಿವ್ ಇರುವವ ಸಂಪರ್ಕವಿಲ್ಲದ ಸ್ವಯಂಘೋಷಣೆ ಮಾಡಬೇಕಿದೆ.