ಇನ್ನು ಮುಂದಕ್ಕೆ ವರ್ಷಕ್ಕೆ ಎರಡು ಬಾರಿ ಜೆಇಇ, ಎನ್‌ಇಇಟಿ ಪರೀಕ್ಷೆ !

ದೇಶದ ಎರಡು ಫೇಮಸ್ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ (ಪ್ರಮುಖ) ಮತ್ತು ಎನ್‌ಇಇಟಿ ಪರೀಕ್ಷೆಯು ಇನ್ನು ಮುಂದೆ ವರ್ಷಕ್ಕೆ ಎರಡು ಬಾರಿ ನಡೆಯಲಿದೆ. ಇನ್ನು ಈ ಪರೀಕ್ಷೆಯನ್ನ ನ್ಯೂಲಿ ಫಾರ್ಮಡ್ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಆಯೋಜಿಸಲಿದೆ ಎಂದು ಸಚಿವ ಪ್ರಕಾಶ ಜಾವೆಡ್ಕರ್ ತಿಳಿಸಿದ್ದಾರೆ.

ಇನ್ನು ಮುಂದಕ್ಕೆ ವರ್ಷಕ್ಕೆ ಎರಡು ಬಾರಿ ಜೆಇಇ, ಎನ್‌ಇಇಟಿ ಪರೀಕ್ಷೆ !

 

ಈ ಮೊದಲು ಸಿಬಿಎಸ್ಇ ಯು ಆಯೋಜಿಸುತ್ತಿದ್ದ ನ್ಯಾಷನಲ್ ಎಲಿಜಬಿಲಿಟಿ ಪರೀಕ್ಷೆಯನ್ನ ಕೂಡಾ ಇನ್ನು ಮುಂದೆ ಎನ್‌ಟಿಎ ಕಂಡೆಕ್ಟ್ ಮಾಡಲಿದೆ ಎಂದು ತಿಳಿಸಿದ ಅವರು, ವಿವಿಧ ಇಂಜಿನೀಯರ್ ಕಾಲೇಜುಗಳ ಸೀಟುಗಾಗಿ ಜನವರಿ ಮತ್ತು ಎಪ್ರಿಲ್ ತಿಂಗಳಿನಲ್ಲಿ ಈ ಜಾಯಿಂಟ್ ಎಂಟ್ರೇಸ್ ಎಕ್ಸಾಮಿನೇಶನ್ (ಪ್ರಮುಖ) ನಡೆಸಲಾಗುತ್ತದೆ. ಹಾಗೂ ಮೆಡಿಕಲ್ ಮತ್ತು ಡೆಂಟಲ್ ಕೋರ್ಸ್ ಗಳ ಸೀಟಿಗಾಗಿ ನ್ಯಾಷನಲ್ ಎಲಿಜಬಿಲಿಟಿ ಮತ್ತು ಎಂಟ್ರೇಸ್ ಟೆಸ್ಟ್ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆ ಫೆಬ್ರವರಿ ಹಾಗೂ ಮೇ ತಿಂಗಳಿನಲ್ಲಿ ನಡೆದಿದ್ದು, ಸದ್ಯ ಈ ಎರಡು ಪರೀಕ್ಷೆಗಳು ವರ್ಷಕ್ಕೆ ಒಂದು ಬಾರಿ ನಡೆಯುತ್ತಿವೆ ಎಂದು ತಿಳಿಸಿದರು.

ವರ್ಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳು ಒಂದು ವೇಳೆ ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ರೆ ಅವರ ಆ ಒಂದು ವರ್ಷ ವ್ಯರ್ಥವಾಗುವುದಿಲ್ಲ. ಹಾಗೆಯೇ ಈ ಕೋರ್ಸ್ ಅಡ್ಮಿಶನ್ ಮೊದಲೇ ಎರಡು ಬಾರಿ ಪರೀಕ್ಷೆಗಳು ನಡೆಯಲಿವೆ ಎಂದು ಜಾವೆಡ್ಕರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಎಲ್ಲಾ ಪರೀಕ್ಷೆಯು ಕಂಪ್ಯೂಟರ್ ಬೇಸ್ಡ್ ಪರೀಕ್ಷೆಯಾಗಿದೆ. ಎನ್‌ಟಿಎ ವೆಬ್‌ಸೈಟ್ ನಲ್ಲಿ ವಿದ್ಯಾರ್ಥಿಗಳಿಗೆ ಪ್ರ್ಯಾಕ್ಟೀಸ್ ಮಾಡುಲಸ್ ಲಭ್ಯವಿದೆ. ಮುಂದಿನ ವರ್ಷ ಆಗಸ್ಟ್ ತಿಂಗಳಿನಲ್ಲಿ ಪರೀಕ್ಷೆ ನಡೆಯಲಿದೆ. ಹತ್ತಿರದ ಇಂಜಿನೀಯರಿಂಗ್ ಕಾಲೇಜುಗಳಿಗೆ ಹಾಗೂ ಸಿಬಿಎಸ್ ಇ ಕೆವಿ ಶಾಲೆಗಳಿಗೆ ತೆರಳಿಗೆ ಪ್ರಾಕ್ಟೀಸ್ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ

ಕಳೆದ ವರ್ಷ 2017 ರಲ್ಲಿ ಇಂಜಿನೀಯರ್ ಸೀಟುಗಾಗಿ 11 ಲಕ್ಷ ವಿದ್ಯಾರ್ಥಿಗಳು ಜೆಇಇ (ಪ್ರಮುಖ) ಪರೀಕ್ಷೆಗೆ ಹಾಜರಾಗಿದ್ದರು.

For Quick Alerts
ALLOW NOTIFICATIONS  
For Daily Alerts

English summary
Two of India’s most popular competitive exams, the JEE (Main) and NEET, will now be held twice a year, and will be conducted by the newly formed National Testing Agency (NTA), HRD Minister Prakash Javadekar announced on Saturday. The NTA will also conduct the National Eligibility Test (NET). All these tests were earlier organised by the CBSE.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X