ದ್ವಿತೀಯ ಪಿಯುಸಿ ಪರೀಕ್ಷೆ: ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು ರಾಜ್ಯದಲ್ಲಿ ಈ ಬಾರಿ ಶೇ.61.73%ರಷ್ಟು ಫಲಿತಾಂಶ ಕಂಡುಬಂದಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ Scanned ಪ್ರತಿ ಪಡೆಯಲು, ಮರುಮಣಿಕೆ ಹಾಗೂ ಮರುಮೌಲ್ಯಮಾಪನಕ್ಕಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಈ ಸಂಬಂಧ ಮಾರ್ಚ್ 2019 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಮಾತ್ರ ತಮ್ಮ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ದ್ವಿತೀಯ ಪಿಯುಸಿ ಫಲಿತಾಂಶ ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಹಾಕಿ

 

ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ:

* ವಿದ್ಯಾರ್ಥಿಗಳು ಉತ್ತರಪತ್ರಿಕೆಯ Scanned Copy ಗೆ ಅರ್ಜಿ ಸಲ್ಲಿಸಿದ / ಪಡೆದ ವಿಷಯಗಳಿಗೆ ಮಾತ್ರ ನಂತರದಲ್ಲಿ Revaluation /Re-totalling ಗಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಹಾಗೂ ಅರ್ಜಿ ಸಲ್ಲಿಸಲಿರುವ ವಿಷಯಗಳಿಗೆ Re-totalling ಗೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

* ಅಂಚೆ,ಕೊರಿಯರ್,ಮುದ್ದಾಂ ಮತ್ತು ಇತರ ಯಾವುದೇ ವಿಧದಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.

* ನಿಗದಿಪಡಿಸಲಾಗಿರುವ ಶುಲ್ಕವನ್ನು Onlineಮೂಲಕ BENGALURU-ONE,KARNATAKA-ONE , CORPORATION BANK ಹಾಗೂ SYNDICATE BANK ಗಳ ಯಾವುದೇ ಶಾಖೆಯ ಮೂಲಕ ಪಾವತಿ ಮಾಡಲು ಮಾತ್ರ ಅವಕಾಶವಿರುತ್ತದೆ.

ಶುಲ್ಕಗಳ ವಿವರ:

ವಿದ್ಯಾರ್ಥಿಗಳು ಪ್ರತಿ ವಿಷಯಕ್ಕೆ Scanned Copy ಗಾಗಿ ಅರ್ಜಿ ಸಲ್ಲಿಸಲು 530/-ರೂ ಶುಲ್ಕ ಮತ್ತು ಪ್ರತಿ ವಿಷಯಕ್ಕೆ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು 1670/-ರೂ ಪಾವತಿಸಬೇಕಿರುತ್ತದೆ. ಅಂಕಗಳ ಮರು ಎಣಿಕೆಗಾಗಿ ಯಾವುದೇ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ.

ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಸಮಯ /ದಿನಾಂಕ:

ವಿದ್ಯಾರ್ಥಿಗಳು Scanned Copy ಗಾಗಿ 17/4/2019 ರಿಂದ 29/4/2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ನಂತರ Scanned Copy ಡೌನ್‌ಲೋಡ್ ಮಾಡಿಕೊಳ್ಳಲು 27/4/2019 ರಿಂದ 6/5/2019 ರ ವರೆಗೆ ಅವಕಾಶ ನೀಡಲಾಗಿರುತ್ತದೆ. ಮರುಮೌಲ್ಯಮಾಪನಕ್ಕಾಗಿ ಹಾಗೂ ಮರುಎಣಿಕೆಗಾಗಿ ( ಪ್ರತಿ ತೆಗೆದುಕೊಂಡವರಿಗೆ ಮಾತ್ರ ಅವಕಾಶವಿರುತ್ತದೆ) ವಿದ್ಯಾರ್ಥಿಗಳು 29/4/2019 ರಿಂದ 8/5/2019 ರೊಳಗೆ ಅರ್ಜಿ ಸಲ್ಲಿಸಬಹುದು.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ 2019 ವೇಳಾಪಟ್ಟಿ ಪ್ರಕಟ

ಪ್ರತಿ ಪಡೆಯಲು ವಿದ್ಯಾರ್ಥಿಗಳು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1: ವಿದ್ಯಾರ್ಥಿಗಳು ಇಲಾಖೆಯ ವೆಬ್‌ಸೈಟ್‌ http://pue.kar.nic.in/ ಗೆ ಹೋಗಿ

 

ಸ್ಟೆಪ್ 2: ಹೋಮ್ ಪೇಜ್‌ನಲ್ಲಿ "Application For Scanned Copies, Re-valuation, Re-totalling March 2019" ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3: ನಂತರ Calender of Events ಪುಟ ತೆರೆಯುತ್ತದೆ ಇದರಲ್ಲಿ "How to Apply" ಇದನ್ನು ಕಡ್ಡಾಯವಾಗಿ ಪೂರ್ಣವಾಗಿ ಗಮನಿಸಬೇಕು.

ಸ್ಟೆಪ್ 4: ತದನಂತರ ವಿದ್ಯಾರ್ಥಿಗಳು "Online Application" ಬಟನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5: ಈಗ "Application for scan copy" ಬಟನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 6: ಇದರಲ್ಲಿ ದ್ವಿತೀಯ ಪಿಯುಸಿ ಮಾರ್ಚ್-2019ರ ವಾರ್ಷಿಕ ಪರೀಕ್ಷೆಯ ನೊಂದಣಿ ಸಂಖ್ಯೆಯನ್ನು ಪ್ರವೇಶ ಪತ್ರದಲ್ಲಿರುವಂತೆ ನಮೂದಿಸಬೇಕು. ತಕ್ಷಣವೇ ವಿದ್ಯಾರ್ಥಿಗಳ ಮಾಹಿತಿ Display ಆಗುತ್ತದೆ.

ಸ್ಟೆಪ್ 7: Answer paper scanned copy ಪಡೆಯಲು ಇಚ್ಚಿಸಿದ ವಿಷಯ / ವಿಷಯಗಳನ್ನು ಒಂದೇ ಬಾರಿಗೆ ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಯ / ಪೋಷಕರ ನಿಖರವಾದ ಮೊಬೈಲ್ ಸಂಖ್ಯೆ, ತಮ್ಮ ಖಾಸಗಿ ಇ-ಮೇಲ್ ಐಡಿ ಹಾಗೂ ಸ್ವವಿಳಾಸಗಳನ್ನು ಮಾತ್ರ ನಮೂದಿಸಬೇಕು. ನಂತರ Submit ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ಚಲನ್ ಸಂಖ್ಯೆಯು

Auto Generate ಆಗುತ್ತದೆ.

ಸ್ಟೆಪ್ 8: "Make Payment" ಬಟನ್ ಮೇಲೆ ಕ್ಲಿಕ್ ಮಾಡಿ, ಇಲ್ಲಿ "Cash Payment" ಅಥವಾ "Online Payment" ಆಯ್ಕೆ ಮಾಡಿ

* Cash Payment ಆಯ್ಕೆ ಮಾಡಿಕೊಂಡಿದ್ದಲ್ಲಿ CORPORATION BANK / SYNDICATE BANK ಹಾಗೂ BENGALURU-ONE / KARNATAKA-ONE ಆಯ್ಕೆಮಾಡಿಕೊಳ್ಳಿ, ನಂತರ Generate Challan ಮೇಲೆ ಕ್ಲಿಕ್ ಮಾಡಿ ನಂತರ ಚಲನ್ ಪ್ರಿಂಟ್ ತೆಗೆದುಕೊಂಡು ಹಣ ಸಂದಾಯ ಮಾಡಬಹುದು.

* Online Payment ಆಯ್ಕೆ ಮಾಡಿಕೊಂಡಿದ್ದಲ್ಲಿ Karnataka-one ಮೇಲೆ ಕ್ಲಿಕ್ ಮಾಡಿ, ನಂತರ "Pay Now" ಮೇಲೆ ಕ್ಲಿಕ್ ಮಾಡಿ, ನಂತರ "Continue for payment" ಎಂದು ಕ್ಲಿಕ್ ಮಾಡಿ ನಂತರ ವಿದ್ಯಾರ್ಥಿಗಳು Pay now ಮೇಲೆ ಕ್ಲಿಕ್ ಮಾಡಿ ಹಣ ಸಂದಾಯವನ್ನು ಮಾಬಹುದು.

ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಇಲಾಖಾ ವೆಬ್‌ಸೈಟ್‌ನಲ್ಲಿ ಉತ್ತರ ಪತ್ರಿಕೆಯು ಅಪ್‌ಲೋಡ್ ಮಾಡಿದ ಕೂಡಲೇ ಸಂದೇಶ ಬರುತ್ತದೆ ನಂತರ ವಿದ್ಯಾರ್ಥಿಗಳು ಚಲನ್ ಸಂಖ್ಯೆಯನ್ನು ಬಳಸಿ ಆನ್ಸರ್ ಪೇಪರ್ ನ Scanned Copyಯನ್ನು ನಿಗದಿ ಪಡಿಸಲಾದ ದಿನಾಂಕದೊಳಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸೂಚನೆ :

ಮರುಮೌಲ್ಯಮಾಪನದಲ್ಲಿ ನಿಗದಿಪಡಿಸಿರುವ ಅಂಕಗಳಿಗಿಂತ ಹೆಚ್ಚಿನ ಅಂಕಗಳು ಅಥವಾ ಕಡಿಮೆ ಅಂಕಗಳು ಬಂದಲ್ಲಿ ಅಂಕಗಳೊಂದಿಗೆ ಫಲಿತಾಂಶವನ್ನು ಪರಿಷ್ಕರಿಸಿ ಪ್ರಕಟಿಸಲಾಗುವುದು. ಹಾಗೂ ಮೊದಲು ಪಡೆದ ಅಂಕಗಳನ್ನು ಮರು ಸ್ಥಾಪಿಸಲು ಅವಕಾಶವಿರುವುದಿಲ್ಲ. ಉತ್ತೀರ್ಣರಾದ ಅಭ್ಯರ್ಥಿಗಳು ಮುಂದಿನ ವ್ಯಾಸಂಗಕ್ಕೆ ಹಾಗೂ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮರುಮೌಲ್ಯಮಾಪನದ ಫಲಿತಾಂಶಕ್ಕಾಗಿ ಕಾಯಬಾರದು. ಮರುಮೌಲ್ಯಮಾಪನದ ಫಲಿತಾಂಶವನ್ನು ಇಲಾಖೆ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.

ವಿದ್ಯಾರ್ಥಿಗಳು ಮರುಮೌಲ್ಯಮಾಪನ ಮತ್ತ ಮರುಎಣಿಕೆಗಾಗಿ ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Karnatak 2nd PUC results has been released now students can apply for revaluations and retotalling
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more