ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ 2022 ಅನ್ನು ಘೋಷಿಸಲಾಗಿದೆ. ಶೇ 37.08ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಇದೀಗ ಫಲಿತಾಂಶವನ್ನು ವೀಕ್ಷಿಸಬಹುದು.

ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶದ ಲಿಂಕ್ ಅನ್ನು ಈ ಹಿಂದೆ ಅಧಿಕೃತ ವೆಬ್‌ಸೈಟ್- karresults.nic.in ನಲ್ಲಿ ಸಕ್ರಿಯಗೊಳಿಸಲಾಗಿತ್ತು, ಆದರೆ ನಂತರ ತೆಗೆದುಹಾಕಲಾಗಿದೆ. ಪಿಯುಸಿ ಪೂರಕ ಅಂಕಪಟ್ಟಿ ಡೌನ್‌ಲೋಡ್ ಮಾಡಲು ಅಭ್ಯರ್ಥಿಗಳು ನೋಂದಣಿ ಸಂಖ್ಯೆ ಮತ್ತು ವಿಷಯ ಸಂಯೋಜನೆಯನ್ನು ಬಳಸಬೇಕಾಗುತ್ತದೆ.
ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಜೂನ್ 18 ರಿಂದ ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಒಟ್ಟು 61.88 ಶೇಕಡಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪೂರಕ ಪರೀಕ್ಷೆಯನ್ನು ಆಗಸ್ಟ್ 12 ರಿಂದ ಆಗಸ್ಟ್ 25, 2022 ರವರೆಗೆ ಎರಡು ಅವಧಿಗಳಲ್ಲಿ ನಡೆಸಲಾಯಿತು. ಬೆಳಗಿನ ಅಧಿವೇಶನವು 10:15 ರಿಂದ 1:30 ರ ನಡುವೆ ಮತ್ತು ಮಧ್ಯಾಹ್ನದ ಅಧಿವೇಶನವು 2:15 ರಿಂದ 5:30 ರ ನಡುವೆ ನಡೆಸಲಾಯಿತು.
ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ಆಗಸ್ಟ್ 12 ರಿಂದ ಆಗಸ್ಟ್ 25, 2022 ರವರೆಗೆ 307 ಪರೀಕ್ಷಾ ಕೇಂದ್ರಗಳಲ್ಲಿ ಎರಡು ಅವಧಿಗಳಲ್ಲಿ ನಡೆಸಲಾಯಿತು. ಬೆಳಗಿನ ಅಧಿವೇಶನವು 10:15 ರಿಂದ 1:30 ರ ನಡುವೆ ಮತ್ತು ಮಧ್ಯಾಹ್ನದ ಅಧಿವೇಶನವು 2:15 ರಿಂದ 5:30 ರ ನಡುವೆ ನಡೆಸಲಾಯಿತು.
ಪರೀಕ್ಷೆಗೆ ನೊಂದಾಯಿಸಿದ, ಹಾಜರಾದ, ಗೈರು ಹಾಜರಾದ ಹಾಗೂ ಉತ್ತೀರ್ಣರಾದವರ ಸಂಖ್ಯೆ :
ನೋದಾಯಿಸಿದವರು : 185415
ಹಾಜರಾದವರು : 175905
ಉತ್ತೀರ್ಣರಾದವರು: 65233
ಗೈರು ಹಾಜರಾದವರು : 9510
ಶೇಕಡವಾರು ಫಲಿತಾಂಶ: 37.08%
ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಫಲಿತಾಂಶ ವೀಕ್ಷಿಸಲು ವೆಬ್‌ಸೈಟ್‌ಗಳ ಪಟ್ಟಿ :
pue.karnataka.gov.in,
pue.kar.nic.in,
karresults.nic.in
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ವೀಕ್ಷಿಸುವುದು ಹೇಗೆ ?:
ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ http://karresults.nic.in/ ಗೆ ಭೇಟಿ ನೀಡಿ
ಸ್ಟೆಪ್ 2 : ಸ್ಕ್ರೀನ್ ಮೇಲೆ ಫಲಿತಾಂಶ ಲಿಂಕ್ ಕಾಣಿಸಿಕೊಳ್ಳುತ್ತದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3 : ವಿದ್ಯಾರ್ಥಿಗಳು ನಿಮ್ಮ ರಿಜಿಸ್ಟರ್ ಸಂಖ್ಯಹೆ ಮತ್ತು ಅಲ್ಲಿ ಕೇಳಲಾಗಿರುವ ಇತರೆ ಮಾಹಿತಿಯನ್ನು ತುಂಬಿ ಲಾಗಿನ್ ಮಾಡಿ
ಸ್ಟೆಪ್ 4 : ಸ್ಕ್ರೀನ್ ಮೇಲೆ ನಿಮ್ಮ ಫಲಿತಾಂಶ ಮೂಡುವುದು ಅದನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ.
ಫಲಿತಾಂಶವನ್ನು ನೇರವಾಗಿ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











