ದ್ವಿತೀಯ ಪಿಯುಸಿ 2019 ರ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟ

ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದೆ. ಶಿಕ್ಷಣ ಇಲಾಖೆಯು ಏಪ್ರಿಲ್ 15 ರಂದು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟ ಮಾಡಲಾಗಿತ್ತು. ಇದೀಗ ಪೂರಕ ಪರೀಕ್ಷಾ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಲಾಗಿದೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ಫಲಿತಾಂಶ ಪ್ರಕಟ

ಜೂನ್‌ 11ರಿಂದ 20ರವರೆಗೆ 302 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ನಡೆದಿತ್ತು. ಈ ಬಾರಿ 2,30,165 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.ಅದರಲ್ಲಿ 69,148 ಮಂದಿ (ಶೇ 30.4) ಪಾಸಾಗಿರುತ್ತಾರೆ. ಪರೀಕ್ಷೆ ಬರೆದ 1,35,535 ಬಾಲಕರಲ್ಲಿ 37,798 ಮಂದಿ ಪಾಸಾಗಿದ್ದು, ಶೇ 27.89 ರಷ್ಟು ಫಲಿತಾಂಶ ಬಂದಿರುತ್ತದೆ. ಅದರಂತೆಯೇ, 94,630 ಬಾಲಕಿಯರಲ್ಲಿ 31,350 ಮಂದಿ ಉತ್ತೀರ್ಣರಾಗಿದ್ದು, ಶೇ 33.13ರಷ್ಟು ಫಲಿತಾಂಶ ಬಂದಿದೆ.

ನಗರ ಪ್ರದೇಶದಲ್ಲಿ ಪರೀಕ್ಷೆ ಬರೆದ 1,84,873 ವಿದ್ಯಾರ್ಥಿಗಳಲ್ಲಿ 55,942 (ಶೇ 30.25) ವಿದ್ಯಾರ್ಥಿಗಳು ಹಾಗೂ ಗ್ರಾಮಾಂತರ ವಿಭಾಗದಲ್ಲಿ ಪರೀಕ್ಷೆ ಬರೆದ 45,258 ವಿದ್ಯಾರ್ಥಿಗಳಲ್ಲಿ 13,192 (ಶೇ 29.14) ಮಂದಿ ಉತ್ತೀರ್ಣರಾಗಿದ್ದಾರೆ.

ಪೂರಕ ಪರೀಕ್ಷೆಯನ್ನು ಬರೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಇದೀಗ ಪರೀಕ್ಷಾ ಫಲಿತಾಂಶವನ್ನು ವೀಕ್ಷಿಸಬಹುದಾಗಿದ್ದು, ಫಲಿತಾಂಶವನ್ನು ವೀಕ್ಷಿಸಲು ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ:

ಸ್ಟೆಪ್ 1: ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ http://pue.kar.nic.in/ ಗೆ ಹೋಗಿ
ಸ್ಟೆಪ್ 2: ನಂತರ ಹೋಂ ಪೇಜ್‌ನಲ್ಲಿರುವ "Results" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: "ಪಿಯುಸಿ 2019 ಫಲಿತಾಂಶ" ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ವಿದ್ಯಾರ್ಥಿಗಳು ನಿಮ್ಮ ರಿಜಿಸ್ಟ್ರೇಶನ್ ನಂಬರ್ ನೀಡಿ ಸಬ್‌ಮಿಟ್ ಮಾಡಿ
ಸ್ಟೆಪ್ 5: ನಿಮ್ಮ ಫಲಿತಾಂಶವು ಸ್ಕ್ರೀನ್ ಮೇಲೆ ಕಾಣುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಂಡ ಪರೀಕ್ಷಾ ಫಲಿತಾಂಶದ ಪ್ರಿಂಟೌಟ್‌ ತೆಗೆದಿಟ್ಟುಕೊಳ್ಳಬಹುದು. ಅಧಿಕೃತ ಅಂಕಪಟ್ಟಿಗಳು ಲಭ್ಯವಾಗುವ ವರೆಗೂ ಶೈಕ್ಷಣಿಕ ಕೋರ್ಸುಗಳಿಗೆ ಅರ್ಜಿ ಸಲ್ಲಿಸಲು ಪ್ರತಿಗಳು ಸಹಾಯಕವಾಗುತ್ತವೆ.

More News  

For Quick Alerts
ALLOW NOTIFICATIONS  
For Daily Alerts

English summary
karnataka 2nd PUC 2019 supplementary results announced today.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+