ದೇಶದ ಮೊದಲ ದೃಶ್ಯಕಲೆ ಸಂಜೆ ಕಾಲೇಜು ಆರಂಭಿಸಲು ಚಿತ್ರ ಕಲಾ ಪರಿಷತ್ತು ಚಿಂತನೆ

Posted By:

ದೇಶದ ಮೊದಲ ದೃಶ್ಯಕಲೆ ಸಂಜೆ ಕಾಲೇಜು ಆರಂಭಿಸಲು ಕರ್ನಾಟಕ ಚಿತ್ರ ಕಲಾ ಪರಿಷತ್ತು ಮುಂದಾಗಿದೆ.

ಪಿಯು ಶಿಕ್ಷಕರ ನೇಮಕಾತಿ: ಫೆಬ್ರವರಿ ತಿಂಗಳಲ್ಲಿ ಪರೀಕ್ಷೆ

ಕಲೆಯ ವಿವಿಧ ಪ್ರಕಾರಗಳಲ್ಲಿ ತರಬೇತಿ ನೀಡುವ ಮೂಲಕ ಯುವ ಕಲಾವಿದರನ್ನು ಕಲಾ ಪ್ರಪಂಚಕ್ಕೆ ಪರಿಚಯಿಸುತ್ತಿರುವ ಕರ್ನಾಟಕ ಚಿತ್ರ ಕಲಾ ಪರಿಷತ್ತು ಸಂಜೆ ಕಾಲೇಜು ಆರಂಭಿಸುವುದರ ಬಗ್ಗೆ ಮಾಹಿತಿ ನೀಡಿದೆ.

ಎಚ್-1ಬಿ ವೀಸಾ ಗೊಂದಲ: ಐದು ಲಕ್ಷ ಭಾರತೀಯರಿಗೆ ಸಂಕಷ್ಟ

ದೇಶದ ಮೊದಲ ದೃಶ್ಯಕಲೆ ಸಂಜೆ ಕಾಲೇಜು

ಸದ್ಯ ಪರಿಷತ್ ಆವರಣದಲ್ಲಿರುವ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ರಾಜ್ಯ, ದೇಶ, ವಿದೇಶಗಳ ಅಭ್ಯರ್ಥಿಗಳಿಗೆ ನಿಯಮಿತವಾಗಿ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ , ಅನಿಮೇಶನ್ ಸೇರಿ ವಿವಿಧ ವಿಷಯದಲ್ಲಿ ಕ್ರಮಬದ್ಧವಾಗಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಶಿಕ್ಷಣ ನೀಡಲಾಗುತ್ತಿದೆ.

ಆರ್ಥಿಕ ಸಮಸ್ತೆ ಹಾಗೂ ವಿವಿಧ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಕಲಾ ಕಾಲೇಜಿನಲ್ಲಿ ಅಭ್ಯಸಿಸಲು ರೆಗ್ಯುಲರ್ ಶಿಕ್ಷಣ ಪಡೆಯಲು ತೊಂದರೆಯಾಗುತ್ತಿದ್ದು, ಇದರಿಂದಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಸಂಜೆ ಕಾಲೇಜು ಆರಂಭಿಸಲು ಚಿತ್ರಕಲಾ ಪರಿಷತ್ತು ಸಿದ್ಧತೆ ನಡೆಸುತ್ತಿದೆ.

ಸಂಜೆ ಕಾಲೇಜು ಆರಂಭಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ರಾಜ್ಯ ಸರ್ಕಾರ ಸಹಕಾರ ನೀಡಿವೆ ಎಂದು ಪರಿಷತ್ತು ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ತಿಳಿಸಿದ್ದಾರೆ.

ಐದು ವಿಷಯ ಬೋಧನೆ: ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳು ಸಂಜೆ 4 ರಿಂದ ರಾತ್ರಿ9 ರವರೆಗೆ ನಡೆಯಲಿವೆ. ಚಿತ್ರಕಲೆ , ದೃಶ್ಯಕಲೆ, ಗ್ರಾಫಿಕ್ಸ್, ಆರ್ಟಿಸ್ಟ್ರಿ, ಅನಿಮೇಶನ್, ಅಪ್ಲೈಡ್ ಮತ್ತು ಸೆರಾಮಿಕ್ಸ್ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯಬಹುದು. ಪ್ರತಿ ಬ್ಯಾಚ್ ಗೆ ತಲಾ30 ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶವಿರುತ್ತದೆ.

ಆರ್.ಆರ್. ನಗರಕ್ಕೆ ಸ್ಥಳಾಂತರ: ಪಸ್ತುತ ಚಿತ್ರಕಲಾ ಪರಿಷತ್ತಿನಲ್ಲಿರುವ ಫೈನ್ ಆರ್ಟ್ಸ್ ಕಾಲೇಜು ರಾಜರಾಜೇಶ್ವರಿ ನಗರಕ್ಕೆ ವರ್ಗಾವಣೆಯಾಗಲಿದೆ. ಈಗಾಗಲೇ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಒಟ್ಟು 17 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಚಿತ್ರಕಲಾ ಪರಿಷತ್ತು ಆವರಣದಲ್ಲಿರುವ ಫೈನ್ ಆರ್ಟ್ಸ್ ಕಾಲೇಜಿನ ಕಟ್ಟಡವನ್ನು ಸಂಜೆ ಕಾಲೇಜಿಗಾಗಿ ಮಾರ್ಪಡಿಸಲಾಗುತ್ತಿದೆ.

English summary
Karnataka Chitrakala parishat will start evening college with courses like visual art and this is the first in country in its kind.
Please Wait while comments are loading...

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia