Karnataka Second PUC Online Class Time Table : ದ್ವಿತೀಯ ಪಿಯುಸಿ ಆನ್‌ಲೈನ್ ತರಗತಿಗಳ ಸಂಪೂರ್ಣ ವೇಳಾಪಟ್ಟಿ

ಕೊರೊನಾ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳನ್ನು ತೆರೆಯಲು ಸರ್ಕಾರ ಇನ್ನು ಅನುಮತಿ ನೀಡಿಲ್ಲ. ಹೀಗಾಗಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಅನ್​ಲೈನ್ ತರಗತಿಗಳನ್ನು ಆರಂಭಿಸುವಂತೆ ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಬುಧವಾರದಂದು ಒಂದು ಸುತ್ತೋಲೆಯನ್ನು ತಲುಪಿಸಿದೆ.

ದ್ವಿತೀಯ ಪಿಯುಸಿ ಆನ್‌ಲೈನ್ ತರಗತಿಗಳ ವೇಳಾಪಟ್ಟಿ ಇಲ್ಲಿದೆ

ಪ್ರಸಕ್ತ ಶೈಕ್ಷಣಿಕ ವರ್ಷವು ಜುಲೈ 15ರಿಂದ ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಭೌತಿಕವಾಗಿ ತರಗತಿಗಳನ್ನು ಆರಂಭಿಸಲಾಗದ ಕಾರಣ ಅನ್​ಲೈನ್ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲೇಬೇಕಾಗಿದೆ ಎಂದು ಸುತ್ತೋಲೆಯಲ್ಲಿ ಪ್ರಕಟಿಸಲಾಗಿದೆ.

2020-21ನೇ ಸಾಲಿನಲ್ಲಿ ಆನ್‌ಲೈನ್ ತರಗತಿಗಳನ್ನು ವಿಭಿನ್ನವಾಗಿ ನಡೆಸುತ್ತಿದ್ದು, ಯಾವುದೇ ರೀತಿಯ ಪ್ರೀ-ರೆಕಾರ್ಡೆಡ್​ ಯೂಟ್ಯೂಬ್ ಲಿಂಕ್​ಗಳನ್ನು ಕಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡುವಂತಿಲ್ಲ. ಬದಲಿಗೆ ಉಪನ್ಯಾಸಕರು ತಾವು ಸೇವೆ ನಿರ್ವಹಿಸುತ್ತಿರುವ ಕಾಲೇಜುಗಳಿಂದಲೇ ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ಎಮ್ ಎಸ್ ಟೀಮ್, ಗೂಗಲ್ ಮೀಟ್, ಜೂಮ್ ಅಥವಾ ಜಿಯೋ ಮೀಟ್​ಗಳನ್ನು ಉಪಯೋಗಿಸಿಕೊಂಡು ಪಾಠ ಮಾಡಲಿದ್ದಾರೆ. ಇದಕ್ಕೆ ಸಂಬಂದಿಸಿದಂತೆ ಪದವಿ ಪೂರ್ವ ಕಾಲೆಜಿನ ಪ್ರಾಂಶುಪಾಲರು ಸಾಮಾನ್ಯ ವರ್ಷಗಳಂತೆ ಎಲ್ಲಾ ತರಗತಿಗಳಿಗೆ ಅನ್ವಯವಾಗುವಂತೆ ವೇಳಾ ಪಟ್ಟಿಯನ್ನು ತಯಾರಿಸಿದ್ದು, ವೇಳಾಪಟ್ಟಿಯ ವಿವರ ಇಲ್ಲಿದೆ.

ದ್ವಿತೀಯ ಪಿಯುಸಿ ಆನ್‌ಲೈನ್ ತರಗತಿಗಳ ವೇಳಾಪಟ್ಟಿ :

ಬೆಳಗ್ಗೆ 10.00 ರಿಂದ 11 ಗಂಟೆ ವರೆಗೆ- ಮೊದಲ ಪೀರಿಯಡ್
ಬೆಳಗ್ಗೆ 11.00 ರಿಂದ 12 ಗಂಟೆ ವರೆಗೆ- ಎರಡನೇ ಪೀರಿಯಡ್
ಮಧ್ಯಾಹ್ನ 12.00 ರಿಂದ 12.30ರ ವರಗೆ- ವಿರಾಮ
ಮಧ್ಯಾಹ್ನ 12.30 ರಿಂದ 1.30ರ ವರೆಗೆ-ಮೂರನೇ ಪೀರಿಯಡ್
ಮಧ್ಯಾಹ್ನ 1.30 ರಿಂದ 2.30ರ ವರೆಗೆ ನಾಲ್ಕನೇ ಪೀರಿಯಡ್

For Quick Alerts
ALLOW NOTIFICATIONS  
For Daily Alerts

English summary
Karnataka pre-university department released time table for online classes of second puc. Here is the time table.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X