ಕೊರೊನಾ ಮಹಾಮಾರಿ ದೇಶದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ನಡುವೆಯೇ ರಾಜ್ಯದಲ್ಲಿ ಜುಲೈ 1ರಿಂದ ಹಂತ ಹಂತವಾಗಿ ಶಾಲೆಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಜೂನ್ 8ರಿಂದ ದಾಖಲಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ನೀಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಜೂನ್ 10 ರಿಂದ ಜೂನ್ 15ರೊಳಗೆ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಿ ಇಲಾಖೆಗೆ ಮಾಹಿತಿ ಕೊಡಲು ಶಿಕ್ಷಣ ಇಲಾಖೆ ಸೂಚಿಸಿದೆ. ಈ ಸಮಾಲೋಚನಾ ಸಭೆ ನಡೆಸಿ, ವ್ಯಕ್ತವಾಗುವ ಅಭಿಪ್ರಾಯಗಳ ಆಧಾರದ ಮೇಲೆ ಶಾಲೆಗಳ ಪ್ರಾರಂಭದ ದಿನಾಂಕ ನಿರ್ಧರಿಸಲು ತೀರ್ಮಾನಿಸಿದೆ.
ಸರ್ಕಾರವು ಶಾಲೆಗಳ ಕಚೇರಿ ಪ್ರಾರಂಭ ಮಾಡಲು ಸೂಚನೆ ನೀಡಿದ್ದು, ಜೂನ್ 5ರಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಕಚೇರಿ ಪ್ರಾರಂಭ ಮಾಡಲು ತಿಳಿಸಿದೆ. ಜೂನ್ 8ರಿಂದ ದಾಖಲಾತಿ ಪ್ರಕ್ರಿಯೆಗೆ ಸಿದ್ಧತೆ ಆರಂಭವಾಗಲಿದ್ದು, ಜೂನ್ 8ರಿಂದ ಖಾಸಗಿ ಶಾಲೆಗಳ ಕಚೇರಿ ಪ್ರಾರಂಭಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ನೀಡಿದೆ.
ಶಾಲೆಗಳು ಓಪನ್ ಆಗುವ ದಿನಾಂಕಗಳು ಹೀಗಿವೆ:
4-7ನೇ ತರಗತಿ - ಜುಲೈ 1
1-3ನೇ ತರಗತಿ - ಜುಲೈ 15
8-10ನೇ ತರಗತಿ - ಜುಲೈ 15
ಪ್ರೀ ಸ್ಕೂಲ್ - ಜುಲೈ 20
ಈ ಪ್ರಮುಖ ಮಾದರಿಗಳೊಂದಿಗೆ ಶಾಲೆಗಳನ್ನು ಆರಂಭಿಸಲಾಗುವುದು:
1. ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ತರಗತಿಗಳನ್ನು ನಡೆಸುವುದು.
2. ಎರಡು ಪಾಳಿಗಳಲ್ಲಿ ಶಾಲೆಗಳನ್ನು ನಡೆಸುವುದು.
3. ದಿನ ಬಿಟ್ಟು ದಿನ ಶಾಲೆಯನ್ನು ನಡೆಸುವುದು.


Click it and Unblock the Notifications











