ದೇಶವಿದೇಶಗಳಲ್ಲಿ ಕಳೆದ ಎರಡು ವರ್ಷಗಳಿಂದ ಕೋವಿಡ್ ಸೋಂಕು ಹಬ್ಬಿರುವುದು ಬೇಸರ ಸಂಗತಿ. ಈ ನಡುವೆಯೇ ಇದೀಗ ಕರ್ನಾಟಕದಲ್ಲಿ ಕೊರೋನಾ ಹೊಸ ರೂಪಾಂತರಿ ಒಮ್ರಿಕಾನ್ ಇನ್ನಷ್ಟು ಭಯದ ವಾತಾವರಣವನ್ನು ಸೃಷ್ಟಿಸುತ್ತಿದೆ. ಇದರ ಬೆನ್ನಲ್ಲೇ ಶಾಲಾ ಕಾಲೇಜುಗಳಲ್ಲಿ ಅದರಲ್ಲೂ ವಸತಿ ನಿಲಯಗಳಲ್ಲಿ ಮತ್ತು ನವೋದಯ ಶಾಲೆಗಳ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗಿ ಕಂಡುಬರುತ್ತಿದೆ.

ಪ್ರಸ್ತುತ ಸಂದರ್ಭದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ. ಕೋವಿಡ್ ಪರಿಸ್ಥಿತಿ ಬಗ್ಗೆ ನಿಗಾ ವಹಿಸಿದ್ದೇವೆ. ಮಕ್ಕಳ ಆರೋಗ್ಯದ ಬಗ್ಗೆ ಚಿಂತಿಸುವುದು ಬೇಡ. ಅಗತ್ಯಬಿದ್ದರೆ ಪರೀಕ್ಷೆಗಳನ್ನು ನಡೆಸುವುದರಿಂದ ಹಿಂದೆ ಸರಿದುಕೊಳ್ಳಲಾಗುತ್ತದೆ ಮತ್ತು ಶಾಲೆಗಳನ್ನು ಕೂಡ ಬಂದ್ ಮಾಡಲು ಸಿದ್ದರಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ನಿನ್ನೆ ಸುದ್ದಿಗಾರರೊಂದಿಗೆ ತಿಳಿಸಿದ್ದರು.
ಹಲವು ಶಾಲೆಗಳಲ್ಲಿ ಸರ್ಕಾರದ ಮಾರ್ಗಸೂಚಿ ಪಾಲನೆ ಆಗುತ್ತಿಲ್ಲ. ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು ಮಾರ್ಗಸೂಚಿಯನ್ನ ಸರಿಯಾಗಿ ಪಾಲಿಸುತ್ತಿಲ್ಲ. ಕೋಚಿಂಗ್ ಸೆಂಟರ್‌ಗಳು, ಟ್ಯುಟೋರಿಯಲ್ ಸೆಂಟರ್‌ಗಳಲ್ಲಿ ಕೂಡ ನಿಯಮಗಳು ಸರಿಯಾಗಿ ಪಾಲನೆಯಾಗಬೇಕು. ಹೀಗಾಗಿ ನಮಗೆ ಪ್ರತ್ಯೇಕ ಕೊರೊನಾ ಮಾರ್ಗಸೂಚಿ ಪ್ರಕಟಿಸುವಂತೆ ಖಾಸಗಿ ಶಾಲೆಗಳ ಒಕ್ಕೂಟ ಒತ್ತಾಯಿಸಿತ್ತು ಎಂದು ಹೇಳಿದ್ದಾರೆ. ಹಾಗಾಗಿ ಇದೀಗ ಶಾಲಾ ಕಾಲೇಜುಗಳಿಗೆ ಹೊಸ ಗೈಡ್‌ಲೈನ್ಸ್‌ಅನ್ನು ಬಿಡುಗಡೆ ಮಾಡಲಾಗಿದೆ.
- ಶೈಕ್ಷಣಿಕ ಸಂಸ್ಥೆಗಳಲ್ಲಿ ಸಭೆ ಮತ್ತು ಸಮಾರಂಭವನ್ನು ಜನವರಿ 15, 2022 ರವರೆಗೆ ಮುಂದೂಡಬೇಕು.
- ಪ್ರತಿದಿನ ಬೆಳಗಿನ ಅವಧಿಯಲ್ಲಿ ಭೌತಿಕ ತರಗತಿಗೆ ಅವಕಾಶ ನೀಡಲಾಗಿದೆ.
- ವಿದ್ಯಾರ್ಥಿಗಳಿಗೆ ಭೌತಿಕ ಹಾಜರಾತಿ ಕಡ್ಡಾಯವಿರುವುದಿಲ್ಲ.
- ಭೌತಿಕ ಹಾಜರಾತಿ ಬದಲು ಆನ್‌ಲೈನ್/ಪರ್ಯಾಯ ವಿಧಾನದಲ್ಲಿ ವಿದ್ಯಾರ್ಥಿಗಳು ಹಾಜರಾಗಬಹುದು.
- ಶಾಲೆಗಳಲ್ಲಿ ಶೇ.೫೦ರಷ್ಟ ಹಾಜರಾತಿಗೆ ಅವಕಾಶವಿದೆ.
- ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರವೇ ಶಾಲೆಗಳು ಓಪನ್ ಆಗಿರುತ್ತವೆ.
- ಮಕ್ಕಳಿಗೆ ಒಂದು ದಿನ ತರಗತಿ, ಒಂದು ದಿನ ರಜೆ ಇರಲಿದೆ.
- ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.
- 15 ರಿಂದ 20 ಮಕ್ಕಳ ತಂಡ ರಚಿಸಿಕೊಂಡು ಪಾಠ ಮಾಡಬೇಕು.
- ಕೋವಿಡ್ ಎರಡು ಡೋಸ್ ಲಸಿಕೆ ಪಡೆದ ಶಿಕ್ಷಕರಿಗೆ ಮಾತ್ರ ಪಾಠ ಮಾಡಲು ಅವಕಾಶ.
- ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಸಾಮಾಜಿಕ ಅಂತರ ಇರಲೇಬೇಕು.
- ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವುದು. ದಿನನಿತ್ಯ ದೇಹದ ಟೆಂಪರೇಚರ್ ಚೆಕ್ ಮಾಡಿಸಿ ಶಾಲೆ ಒಳಗೆ ಪ್ರವೇಶಿಸುವುದು.


Click it and Unblock the Notifications











