
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಹೆಚ್ಚಳದಿಂದಾಗಿ ಸರ್ಕಾರವು ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಹಾಗಾದ್ರೆ ಏನದು ನಿರ್ಧಾರ ಹಾಗಾದ್ರೆ ಶಿಕ್ಷಣ ಇಲಾಖೆಗಳು, ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಪರೀಕ್ಷೆಗಳ ಕಥೆ ಏನು ಎಂಬ ಗೊಂದಲ ನಿಮ್ಮಲ್ಲೂ ಮೂಡಿದೆ. ಹಾಗಾದ್ರೆ ಶಾಲಾ, ಕಾಲೇಜುಗಳ ಪರೀಕ್ಷೆಗಳ ಕಥೆ ಏನು ಇಲ್ಲಿದೆ ಮಾಹಿತಿ.
ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಕಠಿಣ ಲಾಕ್‌ಡೌನ್ ಘೋಷಣೆ
ದೇಶದೆಲ್ಲೆಡೆ ಕಳೆದ ವರ್ಷ ಇದೇ ಸಮಯದಲ್ಲಿ ಕೊರೋನಾ ಎಂಬ ಮಹಾಮಾರಿ ಆವರಿಸಿ ಎಲ್ಲರನ್ನೂ ತಲ್ಲಣಗೊಳಿಸಿತ್ತು. ರಾಜ್ಯ ಸರ್ಕಾರವು ಲಾಕ್‌ಡೌನ್ ಅನ್ನು ಘೋಷಿಸಿ ಜನರನ್ನು ಎಚ್ಚೆತ್ತುಕೊಳ್ಳುವಂತೆ ಸಲಹೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಗಳನ್ನು ರದ್ದು ಮಾಡಿ ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗಿತ್ತು. ಇನ್ನೂ ಅನೇಕ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಆದರೆ ಬೋರ್ಡ್ ಪರೀಕ್ಷೆಗಳ ವಿಚಾರದಲ್ಲಿ ಹಾಗಾಗಲಿಲ್ಲ ಸರ್ಕಾರವು ತನ್ನದೇ ನಿಲುವನ್ನು ತೆಗೆದುಕೊಂಡಿತ್ತು.
ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಕಠಿಣ ಲಾಕ್‌ಡೌನ್ ಘೋಷಣೆ
ಕೋವಿಡ್19 ಕಾರಣದಿಂದಾಗಿ ಹಲವು ರಾಜ್ಯ ಸರ್ಕಾರಗಳು ಬೋರ್ಡ್ ಪರೀಕ್ಷೆಗಳನ್ನು ರದ್ದು ಮಾಡಿತ್ತು. ಇನ್ನೂ ಕೆಲವು ರಾಜ್ಯ ಸರ್ಕಾರಗಳು ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿತ್ತು. ತದನಂತರ ಕೋವಿಡ್ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬಂದಾಗ ಪರೀಕ್ಷೆಗಳನ್ನು ನಡೆಸಲಾಗಿದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರವು ಮಾತ್ರ ಕೋವಿಡ್ ಉಲ್ಬಣದ ನಡುವೆಯೂ ಹಲವು ಮುಂಜಾಗ್ರತಾ ಕ್ರಮಗಳೊಂದಿಗೆ ದ್ವಿತೀಯ ಪಿಯುಸಿ ಉಳಿದ ಪರೀಕ್ಷೆಯನ್ನು ಮತ್ತು ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಗಳನ್ನು ಜೂನ್ 25 ರಿಂದ ಜುಲೈ 4ರ ವರೆಗೆ ನಡೆಸಲಾಗಿತ್ತು.
ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಕಠಿಣ ಲಾಕ್‌ಡೌನ್ ಘೋಷಣೆ
2021ನೇ ಸಾಲಿನಲ್ಲಿ ಶಾಲಾ ಕಾಲೇಜುಗಳು ಹಂತ ಹಂತವಾಗಿ ಆರಂಭವಾಗುವ ಹೊಸ್ತಿಲಲ್ಲೇ ಕೋವಿಡ್ ಹರಡುವಿಕೆಯನ್ನು ಗಮನಿಸಿ ಆಫ್‌ಲೈನ್ ತರಗತಿಗಳನ್ನು ರದ್ದುಗೊಳಿಸಲಾಯಿತು. ಇತ್ತೀಚೆಗಷ್ಟೇ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದು ಮಾಡಿ ಏಪ್ರಿಲ್ 30,2021ರೊಳಗೆ ಮೌಲ್ಯಂಕನಗಳ ಮೂಲಕ ವಿಶೇಷ ಅಂಕಗಳನ್ನು ನೀಡಿ ಮುಂದಿನ ತರಗತಿಗೆ ಅರ್ಹತೆ ನೀಡಲು ಸರ್ಕಾರವು ನಿರ್ದೇಶನ ನೀಡಿದೆ.
ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಕಠಿಣ ಲಾಕ್‌ಡೌನ್ ಘೋಷಣೆ
ಪ್ರಸ್ತುತ ಸಾಲಿನ ಬೋರ್ಡ್ ಪರೀಕ್ಷೆಗಳ ದಿನಾಂಕಗಳನ್ನು ಈಗಾಗಲೇ ನಿಗದಿ ಮಾಡಲಾಗಿದೆ. ಆದರೆ ಏಪ್ರಿಲ್ 28 ರಿಂದ ಮೇ 4,2021ರವರಗೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ವಿಜ್ಞಾನ ಪ್ರಾಯೋಗಿಕ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದ್ದಾರೆ.
ಇನ್ನು ಮೇ 24, 2021 ರಿಂದ ಪ್ರಾರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಕೂಡ ಮುಂದೂಡಿರುವುದಾಗಿ ಸಚಿವರು ಇತ್ತೀಚೆಗೆ ಹೇಳಿದ್ದಾರೆ. ಇನ್ನು ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಯು ಜೂನ್ 21ರಿಂದ ಪ್ರಾರಂಭವಾಗಲಿದ್ದು, ಇದರ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.
ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಕಠಿಣ ಲಾಕ್‌ಡೌನ್ ಘೋಷಣೆ
ಕೊರೋನಾ ಜಾಸ್ತಿ ಆಗುತ್ತಿದೆ ಎಂಬ ಭಯದ ನಡೆವೆಯೇ ಕರ್ನಾಟಕ ರಾಜ್ಯ ಸರ್ಕಾರವು ಮೇ 10 ರಿಂದ ಮೇ 24,2021ರ ವರೆಗೆ 14 ದಿನಗಳ ಕಾಲ ಬೆಂಗಳೂರು ಸೇರಿ ಇಡೀ ರಾಜ್ಯದಾದ್ಯಂತ ಕಠಿಣ ಲಾಕ್‌ಡೌನ್ ಅನ್ನು ಘೋಷಿಸಿದೆ. ಹೀಗಾಗಿ ಎಲ್ಲಾ ಶಾಲಾ, ಕಾಲೇಜು, ಕೋಚಿಂಗ್ ಸೆಂಟರ್ ಗಳನ್ನು ಮತ್ತು ವಿಶ್ವವಿದ್ಯಾಲಯಗಳನ್ನು ಬಂದ್ ಮಾಡಲಾಗಿದೆ.
ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಕಠಿಣ ಲಾಕ್‌ಡೌನ್ ಘೋಷಣೆ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಶುಕ್ರವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮೇ 10 ರ ಬೆಳಗ್ಗೆ 6 ಗಂಟೆಯಿಂದ 24 ರ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯಾಾದ್ಯಂತ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗುವುದು ಎಂದರು. ಅದರ ಬೆನ್ನಲ್ಲೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ. ಇನ್ನು ಏನಿರತ್ತೆ ಏನಿರಲ್ಲ ಎಂಬ ಮಾಹಿತಿ ಇಲ್ಲಿದೆ.
ಏನಿರತ್ತೆ :
* ಆಹಾರ, ಹಾಲು, ಹಣ್ಣು ಮಾಂಸದ ಅಂಗಡಿ ಮಾರಾಟಕ್ಕೆ ಬೆಳಗ್ಗೆ 6 ರಿಂದ 10 ಗಂಟೆಯ ಅವಕಾಶ
* ಅಗತ್ಯ ವಸ್ತುಗಳ ಖರೀದಿಗೆ ವಾಹನದಲ್ಲಿ ಹೋಗುವ ಹಾಗಿಲ್ಲ, ಬದಲಾಗಿ ನಡೆದುಕೊಂಡೆ ಅಂಗಡಿಗಳಿಗೆ ಹೋಗಬೇಕು
* ತಳ್ಳುಗಾಡಿಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ತರಕಾರಿ ಮಾರಾಟಕ್ಕೆ ಅವಕಾಶ
* ಎಲ್ಲಾ ವೈದ್ಯಕೀಯ ಸೇವೆ ಮತ್ತು ತುರ್ತು ಚಿಕಿತ್ಸೆಗಳಿಗೆ ತೆರಳಲು ಅವಕಾಶ.
* ಕೋವಿಡ್ ನಿಯಮಾವಳಿಯಂತೆ ಶೇ 50ರಷ್ಟು ಹಾಜರಾತಿಯೊಂದಿಗೆ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಲಿವೆ. ರಸ್ತೆ ಕಾಮಗಾರಿ, ಕಟ್ಟಡ ಕಾಮಗಾರಿ ಯಾವುದೇ ರೀತಿಯ ಅಡ್ಡಿಯಿಲ್ಲ.
* ವಿವಾಹ/ಶುಭ ಕಾರ್ಯಕ್ರಮದಲ್ಲಿ 50 ಜನ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
ಏನಿರಲ್ಲ:
* ಮದ್ಯ ಅಂಗಡಿಗಳಲ್ಲಿ ಪಾರ್ಸೆಲ್ ವ್ಯವಸ್ಥೆಗೆ ಬೆಳಗ್ಗೆ ೬ ರಿಂದ ೧೦ರ ವರೆಗೆ ಮಾತ್ರ ಅನುಮತಿ
* ಅಂಗಡಿ ಮುಂಗ್ಗಟ್ಟು, ಮಾರುಕಟ್ಟೆ, ಶಾಪಿಂಗ್ ಮಾಲ್, ಸಿನಿಮಾ ಮಂದಿರ, ಹೊಟೆಲ್, ರೆಸಾರ್ಟ್, ಕೈಗಾರಿಕಾ ಚಟುವಟಿಕೆ ನಿಬಂಧಿಸಲಾಗಿದೆ. ಬಸ್ ಸಂಚಾರ ಇಲ್ಲ:
* ಕೆಎಸ್ಸಾರ್ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ ಸೇರಿದಂತೆ ಸಾರಿಗೆ ಸಂಚಾರ 14 ದಿನಗಳ ಕಾಲ ಸಂಪೂರ್ಣ ಬಂದ್ ಆಗಲಿದೆ. ಅಂತಾರಾಜ್ಯ ಬಸ್ ಸಂಚಾರವೂ ಸ್ಥಗಿತ. ಖಾಸಗಿ ವಾಹನಗಳಲ್ಲಿ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ.
* ಸಿನಿಮಾ ಹಾಲ್, ಗ್ರಂಥಾಲಯ, ರಂಗಮಂದಿರ, ಜಿಮ್, ಕ್ರೀಡಾಂಗಣ, ಆಡಿಟೋರಿಯಂ, ಈಜುಕೊಳ ಎಲ್ಲವೂ ಬಂದ್.
* ಹೋಟೆಲ್, ರೆಸ್ಟೋರೆಂಟ್ ಬಂದ್ ಆಗಿರಲಿದ್ದು, ಪಾರ್ಸೆಲ್ ವ್ಯವಸ್ಥೆಗೆ ಅನುಮತಿ ಇರಲಿದೆ.
ಶಾಲಾ ಕಾಲೇಜು ಮತ್ತು ಪರೀಕ್ಷೆಗಳ ಕಥೆ ಏನು? :
ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರ್ಕಾರ ಘೋಷಿಸಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅನೇಕ ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ವಿವಿಧ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇದೀಗ ಮೇ 24ರ ವರೆಗೆ 14 ದಿನಗಳ ಕಾಲ ಕಠಿಣ ಲಾಕ್‌ಡೌನ್ ಇರುವ ಕಾರಣದಿಂದಾಗಿ ಮೇ 24ರ ವರೆಗೆ ಯಾವುದೇ ಶಾಲಾ, ಕಾಲೇಜು ಮತ್ತು ಪರೀಕ್ಷೆಗಳು ನಡೆಯುವುದಿಲ್ಲ. ಇನ್ನು ಆನ್‌ಲೈನ್ ತರಗತಿಗಳಿಗೆ ಯಾವುದೇ ಅಡ್ಡಿಯಿಲ್ಲ.
ಮೇ 24ರ ನಂತರವೇ ಶಾಲಾ, ಕಾಲೇಜು ತರಗತಿ ಮತ್ತು ಪರೀಕ್ಷೆಗಳ ಮಾಹಿತಿಯು ಹೊರಬೀಳಲಿದೆ. ಅಲ್ಲಿಯವರೆಗೂ ವಿದ್ಯಾರ್ಥಿಗಳು ಆತಂಕ ಪಡದೆ ಪರೀಕ್ಷೆಗೆ ಸಿದ್ಧತೆಯನ್ನು ನಡೆಸಬಹುದು.


Click it and Unblock the Notifications











