Karnataka NEET PG 2022 Counselling : ಕರ್ನಾಟಕ ನೀಟ್ ಪಿಜಿ 2022 ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟ

ಕರ್ನಾಟಕ NEET PG ಕೌನ್ಸೆಲಿಂಗ್ 2022: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಸ್ನಾತಕೋತ್ತರ (NEET PG 2022) ಗಾಗಿ ಮೊದಲ ಸುತ್ತಿನ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. NEET PG 2022ರ ಒಂದು ಸುತ್ತಿನ ಕೌನ್ಸೆಲಿಂಗ್ ವೇಳಾಪಟ್ಟಿ ಅಧಿಕೃತ ವೆಬ್‌ಸೈಟ್-kea.kar.nic.in ನಲ್ಲಿ ಲಭ್ಯವಿದೆ. KEA ಪ್ರಕಾರ ವೆಬ್ ಆಯ್ಕೆಯ ಪ್ರವೇಶವು ಅಕ್ಟೋಬರ್ 9 ರಿಂದ ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 11ರ ವರೆಗೆ ಮುಂದುವರಿಯಲಿದೆ. NEET PG ಕೌನ್ಸೆಲಿಂಗ್ 2022 ಅಣಕು ಹಂಚಿಕೆ ಫಲಿತಾಂಶವನ್ನು ಅಕ್ಟೋಬರ್ 12 ರಂದು ಘೋಷಿಸಲಾಗುತ್ತದೆ.

ಕರ್ನಾಟಕ ನೀಟ್ ಪಿಜಿ 2022 ಕೌನ್ಸೆಲಿಂಗ್ ವೇಳಾಪಟ್ಟಿ ರಿಲೀಸ್

2022ರ ಪಿಜಿ ವೈದ್ಯಕೀಯ ಮತ್ತು ಪಿಜಿ ದಂತವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಸರ್ಕಾರವು ಅಕ್ಟೋಬರ್ 7 ರಂದು ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕ ರಚನೆಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಈ ಕುರಿತು ಕೆಇಎ ಅಧಿಕೃತ ವೆಬ್‌ಸೈಟ್ ನಲ್ಲಿ ವೀಕ್ಷಿಸಬಹುದು. ಅರ್ಹ ಅಭ್ಯರ್ಥಿಗಳು ಪಿಜಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಕೆಳಗೆ ತಿಳಿಸಿದ ಮೊದಲ ಸುತ್ತಿನ ವೇಳಾಪಟ್ಟಿಯ ಪ್ರಕಾರ ತಮ್ಮ ಆದ್ಯತೆಯ ಆಯ್ಕೆಗಳನ್ನು ಚಲಾಯಿಸಬಹುದು ಎಂದು ಕೆಇಎ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಅಭ್ಯರ್ಥಿಗಳು ಅಣಕು ಹಂಚಿಕೆ ಫಲಿತಾಂಶಗಳನ್ನು ಪರಿಶೀಲಿಸಿದ ನಂತರ ಅಕ್ಟೋಬರ್ 12 ರಿಂದ 14 ರವರೆಗೆ ಆಯ್ಕೆಗಳನ್ನು ಬದಲಾಯಿಸಬಹುದು. ಅಕ್ಟೋಬರ್ 15 ರಂದು KEA ಒಂದು ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಬಿಡುಗಡೆ ಮಾಡುತ್ತದೆ. ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಅಕ್ಟೋಬರ್ 18ರೊಳಗೆ ಸಲ್ಲಿಸಬಹುದು, ನಿಗದಿಪಡಿಸಿದ ಕಾಲೇಜಿನಲ್ಲಿ ಅಕ್ಟೋಬರ್ 19ರ 5:30ರೊಳಗೆ ವರದಿ ಮಾಡಿಕೊಳ್ಳಬೇಕಿರುತ್ತದೆ.

ಕರ್ನಾಟಕ ನೀಟ್ ಪಿಜಿ ಕೌನ್ಸೆಲಿಂಗ್ 2022: ಸೀಟು ಹಂಚಿಕೆ ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ ?

ಸ್ಟೆಪ್ 1 : ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್-cetonline.karnataka.gov.in/kea ನಲ್ಲಿ ಕೌನ್ಸೆಲಿಂಗ್ ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ
ಸ್ಟೆಪ್ 2 : ಅಭ್ಯರ್ಥಿಗಳು ನಿಮ್ಮ ರೋಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸ ನಮೂದಿಸಿ.
ಸ್ಟೆಪ್ 3 : ಕರ್ನಾಟಕ ನೀಟ್ ಪಿಜಿ 1ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ
ಸ್ಟೆಪ್ 4 : ಕರ್ನಾಟಕ ನೀಟ್ ಪಿಜಿ ಸೀಟು ಹಂಚಿಕೆ ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಹೆಚ್ಚಿನ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು NEET ಪಿಜಿ ಎರಡನೇ ಸುತ್ತಿನ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಅಭ್ಯರ್ಥಿಗಳು ಕೌನ್ಸೆಲಿಂಗ್ ಕುರಿತು ಹೆಚ್ಚಿನ ವಿವರಗಳನ್ನು ಅಧಿಕೃತ ವೆಬ್‌ಸೈಟ್-cetonline.karnataka.gov.in/kea ನಲ್ಲಿ ಪಡೆಯಬಹುದು.

More News  

For Quick Alerts
ALLOW NOTIFICATIONS  
For Daily Alerts

English summary
Karnataka NEET PG counselling 2022 schedule has been released. Here is how to check it.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+