Karnataka PGCET Admit Card 2022 : ಕರ್ನಾಟಕ ಪಿಜಿಸಿಇಟಿ ಪ್ರವೇಶ ಪತ್ರ ಇಂದು ಪ್ರಕಟ ಸಾಧ್ಯತೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪೋಸ್ಟ್ ಗ್ರಾಜುಯೇಟ್ ಸಿಇಟಿ (ಪಿಜಿಸಿಇಟಿ) 2022ರ ಪರೀಕ್ಷೆಯ ಪ್ರವೇಶ ಪತ್ರವನ್ನು ಇಂದು ಪ್ರಕಟ ಮಾಡುವ ನಿರೀಕ್ಷೆಯಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕರ್ನಾಟಕ ಪಿಜಿಸಿಇಟಿ  ಪ್ರವೇಶ ಪತ್ರ ಇಂದು ಪ್ರಕಟ ನಿರೀಕ್ಷೆ

ಕರ್ನಾಟಕ ಪಿಜಿಸಿಇಟಿ ಪರೀಕ್ಷೆಯನ್ನು ಎಂಬಿಎ/ಎಂಸಿಎ/ಎಂಇ/ಎಂ.ಟೆಕ್/ಎಂ.ಆರ್ಕ್ ಕೋರ್ಸ್ ಗಳಿಗೆ ಅಂಗಸಂಸ್ಥೆಗಳಲ್ಲಿ ಪೂರ್ಣ ಸಮಯದ ಆಧಾರದ ಮೇಲೆ ಪ್ರವೇಶ ಪಡೆಯಲು ನಡೆಸಲಾಗುತ್ತದೆ. ಪಿಜಿಸಿಇಟಿ ಪರೀಕ್ಷೆಯನ್ನು ನವೆಂಬರ್ 19 ಮತ್ತು ನವೆಂಬರ್ 20,2022ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ. ಈ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಆಧರಿಸಿ ಅರ್ಹತೆ ಅಥವಾ ಶ್ರೇಣಿ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ ತದನಂತರ ಅಧಿಕೃತ ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಎಂಟೆಕ್ ಕೋರ್ಸ್ ಗಳಿಗೆ PGCET 2022 ಪರೀಕ್ಷೆಯನ್ನು ನವೆಂಬರ್ 19 ರಂದು ಮತ್ತು ಎಂಬಿಎ ಹಾಗೂ ಎಂಸಿಎ ಕೋರ್ಸ್ ಗಳಿಗೆ PGCET 2022 ಪರೀಕ್ಷೆಯನ್ನು ನವೆಂಬರ್ 20,2022ರಂದು ನಡೆಯಲಿದೆ.

ಪಿಜಿಸಿಇಟಿ 2022 ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ ? :

ಸ್ಟೆಪ್ 1: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
ಸ್ಟೆಪ್ 2: ನಂತರ ಪಿಜಿಸಿಇಟಿ 2022ರ ಪ್ರವೇಶ ಪತ್ರದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ
ಸ್ಟೆಪ್ 4: ನಂತರ ಸ್ಕ್ರೀನ್ ಮೇಲೆ ನಿಮ್ಮ ಪ್ರವೇಶ ಪತ್ರ ಲಭ್ಯವಾಗುವುದು
ಸ್ಟೆಪ್ 5: ಪ್ರವೇಶ ಪತ್ರ ಸೇವ್ ಮಾಡಿಕೊಂಡು ಪ್ರಿಂಟೌಟ್ ತೆಗೆದುಕೊಳ್ಳಬೇಕಿರುತ್ತದೆ.

ಒಮ್ಮೆ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿದ ನಂತರ ಅರ್ಜಿದಾರರು ಒಂದು ಪ್ರಿಂಟೌಟ್ ಅನ್ನು ತೆಗೆದಿಟ್ಟುಕೊಳ್ಳಿ ಮತ್ತು ಅದನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಬೇಕಿರುತ್ತದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವು ನೀಡಿರುವ ತಮ್ಮ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಬೇಕಿರುತ್ತದೆ. ಈ ಪರೀಕ್ಷೆಗಳ ಬಗೆಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಅನ್ನು ವೀಕ್ಷಿಸಿ.

For Quick Alerts
ALLOW NOTIFICATIONS  
For Daily Alerts

English summary
Karnataka PGCET admit card 2022 to be release today. Read here how to download it.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X