PGCET And DCET 2021 Application Correction : ಪಿಜಿಸಿಇಟಿ ಮತ್ತು ಡಿಸಿಇಟಿ ಆನ್‌ಲೈನ್ ಅರ್ಜಿ ತಿದ್ದುಪಡಿಗೆ ಅವಕಾಶ

ಪಿಜಿಸಿಇಟಿ ಮತ್ತು ಡಿಸಿಇಟಿ 2021 ಆನ್‌ಲೈನ್ ಅರ್ಜಿ ತಿದ್ದುಪಡಿಗೆ ಅವಕಾಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2021ನೇ ಸಾಲಿನ ಪಿಜಿಸಿಇಟಿ ಮತ್ತು ಡಿಸಿಇಟಿ ಪರೀಕ್ಷೆಗಳ ಆನ್‌ಲೈನ್‌ ಅರ್ಜಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.

 

ಈಗಾಗಲೇ ಈ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಪ್ಪು ಮಾಹಿತಿಗಳನ್ನು ಭರ್ತಿ ಮಾಡಿದ್ದಲ್ಲಿ ಇದೀಗ ಅರ್ಜಿಯನ್ನು ತಿದ್ದುಪಡಿ ಮಾಡಬಹುದು.

ಆನ್‌ಲೈನ್ ಅರ್ಜಿ ತಿದ್ದುಪಡಿಗೆ ಅಕ್ಟೋಬರ್ 21,2021ರ ಸಂಜೆ 6:30 ರಿಂದ ಅಕ್ಟೋಬರ್ 25,2021ರ ಸಂಜೆ 6 ಗಂಟೆಯವರೆಗೆ ಅವಕಾಶ ನೀಡಲಾಗಿರುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯದ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಎಂಬಿಎ, ಎಂಸಿಎ ಮತ್ತು ಎಂಇ/ಎಂಟೆಕ್/ಎಂಆರ್ಕಿ ಕೋರ್ಸ್‌ಗಳು ಸೇರಿದಂತೆ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಪಿಜಿಸಿಇಟಿ 2021 ಪರೀಕ್ಷೆಯನ್ನು ಪ್ರತಿ ವರ್ಷ ನಡೆಸುತ್ತದೆ.

ಎಂಇ/ಎಂಟೆಕ್/ಎಂಆರ್ಕ್ ಕೋರ್ಸ್ ಗಳಿಗೆ ಪಿಜಿಸಿಇಟಿ 2021 ಅನ್ನು ಟೈಪ್ A ಮತ್ತು ಟೈಪ್ B ಪರೀಕ್ಷೆಗಳಾಗಿ ನವೆಂಬರ್ 11 ರಂದು ನಡೆಸಲಾಗುತ್ತದೆ. ಟೈಪ್ ಎ ಪರೀಕ್ಷೆಯು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ ಮತ್ತು ಟೈಪ್ ಬಿ ಪರೀಕ್ಷೆಯು ಮಧ್ಯಾಹ್ನ 2:30 ರಿಂದ 4:30 ರವರೆಗೆ ನಡೆಯಲಿದೆ.

ಎಂಬಿಎ/ಎಂಸಿಎ ಗಾಗಿ ಪಿಜಿಸಿಇಟಿ 2021 ಅನ್ನು ನವೆಂಬರ್ 14 ರಂದು ನಡೆಸಲಾಗುವುದು. ಎಂಸಿಎ ಪರೀಕ್ಷೆಯು ಬೆಳಿಗ್ಗೆ 10:30 ರಿಂದ 12:30 ರವರೆಗೆ ಮತ್ತು ಎಂಬಿಎ ಪರೀಕ್ಷೆಯು ಮಧ್ಯಾಹ್ನ 2:30 ರಿಂದ 4:30 ರವರೆಗೆ ನಡೆಯಲಿದೆ.

ಪಿಜಿಸಿಇಟಿ ಮತ್ತು ಡಿಸಿಇಟಿ 2021 ಅರ್ಜಿ ತಿದ್ದುಪಡಿ ಮಾಡುವುದು ಹೇಗೆ:

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ಅರ್ಜಿ ತಿದ್ದುಪಡಿ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿ
ಸ್ಟೆಪ್ 4: ಅಭ್ಯರ್ಥಿಗಳು ಈಗ ಅರ್ಜಿಯಲ್ಲಿನ ಮಾಹಿತಿ ತಿದ್ದುಪಡಿ ಮಾಡಿ
ಸ್ಟೆಪ್ 5: ತಿದ್ದುಪಡಿ ನಂತರ ಅಭ್ಯರ್ಥಿಗಳು "Declare Button" ಮೇಲೆ ಕ್ಲಿಕ್ ಮಾಡಿ ನಂತರ "ಸಬ್‌ಮಿಟ್" ಬಟನ್ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 6: ಅಭ್ಯರ್ಥಿಗಳು ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ.

For Quick Alerts
ALLOW NOTIFICATIONS  
For Daily Alerts

English summary
Karnataka PGCET And DCET 2021 : Students can edit online application for PGCET and DCET 2021 in kea website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X