PUC Mid Term Exam : ರಾಜ್ಯದಲ್ಲಿ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ

ರಾಜ್ಯದಲ್ಲಿ 2021-22ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಮಧ್ಯ-ವಾರ್ಷಿಕ ಪರೀಕ್ಷೆಗಳು ಇಂದಿನಿಂದ ಪ್ರಾರಂಭವಾಗಿದೆ. ಡಿಸೆಂಬರ್ 9 ರಿಂದ ಡಿಸೆಂಬರ್ 23ರ ವರೆಗೆ ಪಿಯುಸಿ ಪರೀಕ್ಷೆಗಳು ಏಕಕಾಲದಲ್ಲಿ ನಡೆಯುತ್ತಿವೆ.

ರಾಜ್ಯದಲ್ಲಿ ಇಂದಿನಿಂದ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆ ಆರಂಭ

ದ್ವಿತೀಯ ಪಿಯುಸಿ ಮಧ್ಯಾವಧಿ ಪರೀಕ್ಷೆಯು ಎರಡು ಪಾಳಿಗಳಲ್ಲಿ ನಡೆಯಲಿದ್ದು, ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12:45ರ ವರೆಗೆ ಮತ್ತು ಮಧ್ಯಾಹ್ನ 2:00 ರಿಂದ 5:15 ರವರೆಗೆ ನಡೆಯಲಿದೆ. ಈ ಮೊದಲು ಪರೀಕ್ಷೆಯ ಬೆಳಗಿನ ಅವಧಿಯು 9:00 ರಿಂದ 12:15 ರವರೆಗೆ ನಡೆಸುವುದಾಗಿ ತಿಳಿಸಲಾಗಿತ್ತು.

ಈ ಹಿಂದೆ ನವೆಂಬರ್ 29 ಮತ್ತು ಡಿಸೆಂಬರ್ 10 ರ ನಡುವೆ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಪರೀಕ್ಷೆಯ ಮಾದರಿಯಲ್ಲಿ ಬದಲಾವಣೆಯಿಂದಾಗಿ ಅದನ್ನು ಮುಂದೂಡಲಾಯಿತು. ಪರೀಕ್ಷಾ ಮಾದರಿ ಮತ್ತು ಪರೀಕ್ಷಾ ವಿಧಾನದಲ್ಲಿ ಬದಲಾವಣೆಯನ್ನು ಜಾರಿಗೆ ತರಲು ಶಾಲೆಗಳಿಗೆ ಹೆಚ್ಚಿನ ಸಮಯವನ್ನು ನೀಡಲು ಮಂಡಳಿಯು ಪರೀಕ್ಷೆಯನ್ನು ಮುಂದೂಡಿದೆ ಎಂದು ವರದಿಯಾಗಿದೆ.

ಪರೀಕ್ಷಾ ವೇಳಾಪಟ್ಟಿ ವಿವರ :

* ಡಿಸೆಂಬರ್ 9 - ಇತಿಹಾಸ ಮತ್ತು ಭೌತಶಾಸ್ತ್ರ
* ಡಿಸೆಂಬರ್ 10 - ಬೆಳಗಿನ ಅವಧಿಯಲ್ಲಿ ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆದರೆ, ಮಧ್ಯಾಹ್ನದ ಅವಧಿಯಲ್ಲಿ ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್ ಮತ್ತು ಪ್ರೆಂಚ್ ಭಾಷೆಯ ಪರೀಕ್ಷೆ ನಡೆಯಲಿದೆ.
* ಡಿಸೆಂಬರ್ 11 - ಅರ್ಥಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ.
* ಡಿಸೆಂಬರ್ 15- ಸ್ಟ್ತಾಟಿಸ್ಟಿಕ್ಸ್
* ಡಿಸೆಂಬರ್ 16 - ಸಮಾಜಶಾಸ್ತ್ರ ಮತ್ತು ಗಣಿತ ಪರೀಕ್ಷೆ ನಡೆಯಲಿದೆ
* ಡಿಸೆಂಬರ್ 17 - ಬೆಳಗಿನ ಅವಧಿಯಲ್ಲಿ ಹಿಂದಿ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಉರ್ದು, ಸಂಸ್ಕೃತ ಪರೀಕ್ಷೆ ನಡೆಯಲಿದೆ.
* ಡಿಸೆಂಬರ್ 18 - ಇಂಗ್ಲೀಷ್
* ಡಿಸೆಂಬರ್ 20 - ಬೆಳಗಿನ ಅವಧಿಯಲ್ಲಿ ರಾಜ್ಯಶಾಸ್ತ್ರ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್‍, ಕಂಪ್ಯೂಟರ್ ವಿಜ್ಞಾನ ಮತ್ತು ಭೂವಿಜ್ಞಾನ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನದ ಅವಧಿಯಲ್ಲಿ ಹಿಂದೂಸ್ತಾನಿ ಸಂಗೀತ, ಅಂಕಿ ಅಂಶಗಳು ಪರೀಕ್ಷೆ ನಡೆಯಲಿದೆ.
* ಡಿಸೆಂಬರ್ 21 -ಅಕೌಂಟೆನ್ಸಿ, ಶಿಕ್ಷಣ ಮತ್ತು ಮನೆ ವಿಜ್ಞಾನ ಪರೀಕ್ಷೆ ನಡೆಯಲಿದೆ.
* ಡಿಸೆಂಬರ್ 22- ಬೆಳಗಿನ ಅವಧಿಯಲ್ಲಿ ವ್ಯವಹಾರ ಅಧ್ಯಯನ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಐಚ್ಛಿಕ ಕನ್ನಡ ಪರೀಕ್ಷೆ ನಡೆಯಲಿದೆ.
* ಡಿಸೆಂಬರ್ 23 - ಭೂಗೋಳಶಾಸ್ತ್ರ, ಮನಃಶಾಸ್ತ್ರ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, ಆರೋಗ್ಯ ಸಲಹೆ ಪರೀಕ್ಷೆ ನಡೆಯಲಿದೆ.

More News  

For Quick Alerts
ALLOW NOTIFICATIONS  
For Daily Alerts

English summary
Karnataka puc mid term examination begins from today.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+