Karnataka School Academic Calender 2022-23 : ಪ್ರಸಕ್ತ ಸಾಲಿನ ದಸರಾ ಮತ್ತು ಬೇಸಿಗೆ ರಜೆಗಳ ದಿನಾಂಕ ಘೋಷಣೆ

ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಬರುವ ದಸರಾ ರಜೆ ಮತ್ತು ಬೇಸಿಗೆ ರಜೆಗಳ ದಿನಾಂಕಗಳನ್ನು ಘೋಷಿಸಿದೆ.

2022-23ನೇ ಸಾಲಿನ ಕರ್ನಾಟಕ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಶೈಕ್ಷಣಿಕ ಚಟುವಟಿಕೆಗಳನ್ನು ಅವಲೋಕಿಸಿದಂತೆ, ಈ ಹಿಂದೆ ಕೋವಿಡ್ ಕಾರಣದಿಂದಾಗಿ ಶಾಲೆಗಳಿಗೆ ಅನಿವಾರ್ಯವಾಗಿ ಫೆಬ್ರವರಿ 2020-21 ರಿಂದ ರಜೆ ನೀಡುವ ಸಂದರ್ಭ ಒದಗಿ ಬಂದಿದ್ದು, ಮಕ್ಕಳಾ ಕಲಿಕಾ ನಿರಂತರತೆಗೆ 2019-20, 2020-21 ಮತ್ತು 2021-22 ಈ ಮೂರು ಶೈಕ್ಷಣಿಕ ಸಾಲುಗಳಲ್ಲಿ ಆಗಿಂದಾಗ್ಗೆ ರಾಜ್ಯದ ಶಾಲೆಗಳನ್ನು ಸ್ಥಗಿತಗೊಳಿಸಿರುವುದರಿಂದಾಗಿ ಶೇಕಡಾ 50 ರಿಂದ 60 ರಷ್ಟು ದಿನಗಳಲ್ಲಿ ಮಾತ್ರ ಭೌತಿಕವಾಗಿ ಶಾಲೆಗಳನ್ನು ನಿರ್ವಹಣೆ ಮಾಡಲಾಗಿದೆ. ಇದರಿಂದಾಗಿ ರಾಜ್ಯದ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನೆಡೆ ಉಂಟಾಗಿರುತ್ತದೆ. ಈ ಕಲಿಕಾ ಹಿನ್ನೆಡೆಯನ್ನು ಸರಿದೂಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಶೈಕ್ಷಣಿಕ ವರ್ಷದ ಪೂರ್ವಾಧಿಯಲ್ಲಿ ಪ್ರಸ್ತುತ ಸಾಲಿನ ಪಠ್ಯ ವಸ್ತುವಿನ ಬೋಧನೆಗೆ ಹಿನ್ನೆಡೆಯಾಗದಂತೆ/ಸಹಕಾರಿಯಾಗುವಂತೆ ಆಯೋಜಿಸಲಾಗಿದೆ ಮತ್ತು ಈ ಸಂಬಂಧ ಶೈಕ್ಷಣಿಕ ವರ್ಷವನ್ನು ಮೇ 16,2022 ರಿಂದಲೇ ಪ್ರಾರಂಭಿಸಿ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವುದರ ಮೂಲಕ ಕಲಿಕಾ ಚೇತರಿಕೆ ವರ್ಷವೆಂದು ಕಾರ್ಯಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸಲು ಅನುವಾಗವಂತೆ ಶೈಕ್ಷಣಿಕ ವರ್ಷದ ಪ್ರಾರಂಭ ಮತ್ತು ಕಲಿಕಾ ಪೂರಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸೂಚಿಸಿದೆ. ಮುಂದಿನ ಶೈಕ್ಷಣಿಕ ಸಾಲಿನ ಚಟುವಟಿಕೆಗಳನ್ನು ಸಮಗ್ರ ನಿರ್ವಹಣೆಗೆ ಸಹಕಾರಿಯಾಗುವಂತೆ ವಾರ್ಷಿಕ ಕಾರ್ಯಸೂಚಿಯನ್ನು ಸಿದ್ಧಪಡಿಸಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಲು ಸೂಚಿಸಿದೆ.

2022-23ನೇ ಸಾಲಿನ ಕರ್ನಾಟಕ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

ಶಾಲಾ ಕರ್ತವ್ಯದ ದಿನಗಳು :

ಪ್ರಸಕ್ತ ಸಾಲಿಗೆ ರಾಜ್ಯಾದ್ಯಂತ ಮೇ 16 ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ. ಟರ್ಮ್ 1ರ ಅವಧಿಯು ಮೇ 16 ರಿಂದ ಅಕ್ಟೋಬರ್ 2ರ ವರೆಗೆ ಮತ್ತು ಟರ್ಮ್ 2ರ ಅವಧಿಯು ಅಕ್ಟೋಬರ್ 17,2022 ರಿಂದ ಏಪ್ರಿಲ್ 10,2022ರ ವರೆಗೆ ಶಾಲಾ ಕರ್ತವ್ಯದ ದಿನಗಳಿವೆ.

ಶಾಲಾ ರಜಾ ದಿನಗಳು :

ವೇಳಾಪಟ್ಟಿಯ ಅನುಸಾರ ಈ ಭಾರಿ ಅಕ್ಟೋಬರ್ 3 ರಿಂದ ಅಕ್ಟೋಬರ್ 16,2022ರ ವರೆಗೆ ದಸರಾ ರಜೆ ಮತ್ತು ಏಪ್ರಿಲ್ 11 ರಿಂದ ಮೇ 28,2023ರ ವರೆಗೆ ಬೇಸಿಗೆ ರಜೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಶೈಕ್ಷಣಿಕ ಸಾಲಿನಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ 256 ಕರ್ತವ್ಯ ದಿನಗಳು ಲಭ್ಯವಾಗಲಿದೆ. ಮಕ್ಕಳ ಶಾಲಾ ದಾಖಲಾತಿಯನ್ನು ಮೇ 16 ರಿಂದ ಪ್ರಾರಂಭಿಸಿ ಜುಲೈ 31ರೊಳಗಾಗಿ ಮುಕ್ತಾಯಗೊಳಿಸುವಂತೆ ಸೂಚಿಸಲಾಗಿದೆ.

More News  

For Quick Alerts
ALLOW NOTIFICATIONS  
For Daily Alerts

English summary
Karnataka government released academic calender for 2022-23. Here is the dates of dasara and summer holidays.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+