Karnataka Schools Reopening : 1 ರಿಂದ 5ನೇ ತರಗತಿ ಶಾಲೆ ಆರಂಭದ ಕುರಿತು ಬಿ.ಸಿ ನಾಗೇಶ್ ಪ್ರತಿಕ್ರಿಯೆ

1 ರಿಂದ 5ನೇ ತರಗತಿ ಆರಂಭ ಕುರಿತು ಬಿ.ಸಿ ನಾಗೇಶ್ ಹೇಳಿದ್ದೇನು ?

ರಾಜ್ಯದಲ್ಲಿ ಈಗಾಗಲೇ 6 ರಿಂದ 9ನೇ ತರಗತಿ ವರೆಗಿನ ಶಾಲೆಗಳು ಪುನರಾರಂಭವಾಗಿವೆ. ವಿದ್ಯಾರ್ಥಿಗಳು ಕೂಡ ಯಾವುದೇ ತೊಂದರೆಗಳಿಲ್ಲದೆ ಶಾಲೆಗೆ ಆಗಮಿಸುತ್ತಿರುವುದು ಯಶಸ್ವಿ ನಡೆಯಾಗಿದೆ. ಈ ಸನ್ನಿವೇಶದಲ್ಲಿ 1 ರಿಂದ 5ನೇ ತರಗತಿವರೆಗಿನ ಶಾಲೆ ಆರಂಭ ಯಾವಾಗ ಎನ್ನುವ ಸುದ್ದಿಗಾರರ ಪ್ರಶ್ನೆಗಳ ಸುರಿಮಳೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಉತ್ತರಿಸಿದ್ದಾರೆ.

 

ಕೋವಿಡ್ ಸ್ಥಿತಿ ಪರಿಶೀಲಿಸಿ ನಿರ್ಧಾರ :

ಕೋವಿಡ್ ಸ್ಥಿತಿ ಪರಿಶೀಲಿಸಿ ನಿರ್ಧಾರ :

ರಾಜ್ಯದಲ್ಲೆಡೆ ಆವರಿಸಿರುವ ಕೋವಿಡ್-19 ಮಹಾಮಾರಿಯ ಮೂರನೇ ಅಲೆಯ ತೀವ್ರತೆ ಇಂದಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬಂದಿಲ್ಲ. ಆದರೂ ಈ ಕುರಿತು ಕೋವಿಡ್ ಟಾಸ್ಕ್‌ಫೋರ್ಸ್ ಗಂಭೀರವಾಗಿ ಅಧ್ಯಯನ ನಡೆಸುತ್ತಿದೆ. ಈಗಾಗಲೇ ಆರಂಭಗೊಂಡಿರುವ 6 ರಿಂದ 8ನೇ ತರಗತಿ ಮಕ್ಕಳ ವರ್ತನೆ, ಕೋವಿಡ್ ನಿಯಮಗಳ ಪಾಲನೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಈ ವಿಚಾರದ ಕುರಿತು ಕೆಲ‌ ದಿನಗಳ‌ ನಂತರ ಟಾಸ್ಕ್‌ಫೋರ್ಸ್ ಸಭೆ ನಡೆಸಿ ನಂತರ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಈಗಾಗಲೇ ಉನ್ನತ ಶಿಕ್ಷಣದವರೆಗೂ ತರಗತಿ ಆರಂಭ:

ಈಗಾಗಲೇ ಉನ್ನತ ಶಿಕ್ಷಣದವರೆಗೂ ತರಗತಿ ಆರಂಭ:

ರಾಜ್ಯದಲ್ಲಿ ಈಗಾಗಲೇ 6ನೇ ತರಗತಿಯಿಂದ ಮೇಲ್ಪಟ್ಟು ಉನ್ನತ ಶಿಕ್ಷಣದವರೆಗೆ ಎಲ್ಲಾ ತರಗತಿಗಳು ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಆರಂಭವಾಗಿವೆ. ಆದರೆ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಷ್ಟೇ ಶಾಲೆ ಮೆಟ್ಟಿಲು ಹತ್ತಲು ಅವಕಾಶ ನೀಡಲಾಗಿಲ್ಲ. ಈ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಮಾತ್ರವಲ್ಲದೇ, ಡೆಲ್ಟಾ, ಬ್ಲ್ಯಾಕ್‌ ಅಂಡ್‌ ವೈಟ್ ಫಂಗಸ್‌ ಹೀಗೆ ಹಲವು ರೋಗ / ವೈರಸ್‌ಗಳ ಭಯ ಪೋಷಕರಿಗೂ ಇದೆ. ಇದರ ಜೊತೆ ಜೊತೆಗೆ ಪೋಷಕರಿಗೆ ತಮ್ಮ ಮಕ್ಕಳ ಶಿಕ್ಷಣ ಭವಿಷ್ಯದ ಬಗ್ಗೆಯೂ ಚಿಂತೆ ಹೆಚ್ಚಾಗಿದೆ.

ಶಾಲೆ ಆರಂಭ ದಿನಾಂಕ ಫಿಕ್ಸ್:
 

ಶಾಲೆ ಆರಂಭ ದಿನಾಂಕ ಫಿಕ್ಸ್:

ಕೊರೋನಾ ನಡುವೆ ಅನೇಕ ಪರೀಕ್ಷೆಗಳು, ಫಲಿತಾಂಶಗಳು, ದಾಖಲಾತಿಗಳು ಹೀಗೆ ಹತ್ತು ಹಲವು ಶೈಕ್ಷಣಿಕ ಸಂಬಂಧಿತ ಚಟುವಟಿಕೆಗಳು ನಡೆದಿವೆ ಮತ್ತು ಯಶಸ್ವಿಯಾಗಿವೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ 1 ರಿಂದ 5ನೇ ತರಗತಿ ವರೆಗಿನ ಶಾಲೆ ಆರಂಭ ದಿನಾಂಕಗಳನ್ನು ಇನ್ನೆರಡು ವಾರದೊಳಗೆ ನಿರ್ಧರಿಸುವ ಸಾಧ್ಯತೆಗಳು ಹೆಚ್ಚಿವೆ.

For Quick Alerts
ALLOW NOTIFICATIONS  
For Daily Alerts

English summary
When schools will reopen for class 1 to 5 in karnataka and what b c nagesh says about it. Latest news here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X