2019 ರ ಮಾರ್ಚ್ ತಿಂಗಳಿನಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಸ್ತಾವಿತ ವೇಳಾಪಟ್ಟಿ ಇದೀಗ ಪ್ರಕಟಗೊಂಡಿದ್ದು, 2019 ರಂದು ಮಾರ್ಚ್ ನಲ್ಲಿ ಈ ವಾರ್ಷಿಕ ಪರೀಕ್ಷೆ ನಡೆಯಲಿದೆ ಎಂದು ಇದೀಗ ಕರ್ನಾಟಕ ಸರ್ಕಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ.

ಇನ್ನು ಈ ಬಗ್ಗೆ ಶಿಕ್ಷಕರಲ್ಲಿ, ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಏನಾದ್ರೂ ಆಕ್ಷೇಪಣೆಗಳು ಇದ್ದಲ್ಲಿ ನವಂಬರ್ 28 ರೊಳಗೆ ಜಂಟಿ ನಿರ್ದೇಶಕರು(ಪರೀಕ್ಷೆ), ಪದವಿ ಪೂರ್ವ ಶಿಕ್ಷಣ ಇಲಾಕೆ, ಸಂಪಿಗೆ ರಸ್ತೆ, 18ನೇ ಅಡ್ಡ ರಸ್ತೆ, ಮಲ್ಲೇಶ್ವರಂ ಬೆಂಗಳೂರು - 560012 ಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಆಕ್ಷೇಪಣೆ ಪರಿಶೀಲಿಸಿದ ಬಳಿಕ ಅಂತಿಮ ವೇಳಾ ಪಟ್ಟಿ ಪ್ರಕಟಿಸಲಾಗುವುದು ಎಂದು ಆಫೀಶಿಯಲ್ ಮೂಲಗಳಿಂದ ತಿಳಿದುಬಂದಿದೆ.
ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯು ಶುಕ್ರವಾರ ಮಾರ್ಚ್ 1 ,2019 ರಿಂದ ಇತಿಹಾಸ, ಬೌತಶಾಸ್ತ್ರ ಹಾಗೂ ಗಣಿತ ಸಬ್‌ಜೆಕ್ಟ್ ನಿಂದ ಪ್ರಾರಂಭವಾಗಲಿದೆ. ಪರೀಕ್ಷೆಯು ಬೆಳಗಿನ ಸೆಶನ್ಸ್ ನಲ್ಲಿ 10.15 ರಿಂದ 01.30 ರವರೆಗೆ ನಡೆಯಲಿದೆ. ಮಾರ್ಚ್ 18, ಸೋಮವಾರ ಇಂಗ್ಲೀಷ್ ಸಬ್‌ಜೆಕ್ಟ್ ನೊಂದಿಗೆ ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆ ಮುಕ್ತಾಯಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ನು ಪರೀಕ್ಷೆ ವೇಳಾಪಟ್ಟಿಯನ್ನ ಅಭ್ಯರ್ಥಿಗಳು ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ ಚೆಕ್ ಮಾಡಿಕೊಳ್ಳಬಹುದಾಗಿದೆ. ವೇಳಾಪಟ್ಟಿ ಗಾಗಿ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ.


Click it and Unblock the Notifications











