ಕರ್ನಾಟಕ ಸೆಕಂಡರಿ ಎಜ್ಯುಕೇಶನ್ ಎಕ್ಸಾಮಿನೇಶನ್ ಬೋರ್ಡ್ ಈ ವಾರದಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ. ಜುಲೈ 20ರಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆಗಸ್ಟ್ ಮೊದಲ ವಾರದಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಿಕೆ ನೀಡಿದ್ದರು.
ಈ ಬಾರಿ ಕೊರೋನಾ ಸೋಂಕಿನಿಂದಾಗಿ ಮುಂದೂಡಲಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಜೂನ್ 25 ರಿಂದ ಜುಲೈ 4ರ ವರೆಗೆ ನಡೆಸಲಾಗಿತ್ತು. ಇದೀಗ ವಾರದೊಳಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದ್ದು ವಿದ್ಯಾರ್ಥಿಗಳು ಆಫೀಶಿಯಲ್ ಸೈಟ್ ಮೂಲಕ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ.

Karnataka SSLC ಫಲಿತಾಂಶ ಚೆಕ್ ಮಾಡುವುದು ಹೇಗೆ?
ಸ್ಟೆಪ್ 1: ಆಫೀಶಿಯಲ್ ಸೈಟ್ http://kseeb.kar.nic.in/ ಗೆ ವಿಸಿಟ್ ಮಾಡಿ
ಸ್ಟೆಪ್ 2: ಕರ್ನಾಟಕ 'ಎಸ್‌ಎಸ್‌ಎಲ್‌ಸಿ ಪರೀಕ್ಷೆ 2020ರ ಫಲಿತಾಂಶ' ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಅಲ್ಲಿ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 4: ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 5: ಸ್ಕ್ರೀನ್ ಮೇಲೆ ಫಲಿತಾಂಶ ಪ್ರಕಟವಾಗುತ್ತದೆ
ಸ್ಟೆಪ್ 6: ರಿಸಲ್ಟ್ ನೋಡಿದ ಬಳಿಕ ಡೌನ್‌ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ


Click it and Unblock the Notifications











