ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಗುರುವಾರ (ಜ.6) ಸಂಜೆ ಪ್ರಕಟ ಮಾಡಿದೆ. ವೇಳಾಪಟ್ಟಿಯ ಪ್ರಕಾರ ಪರೀಕ್ಷೆಯು ಮಾರ್ಚ್ 28 ರಿಂದ ಏಪ್ರಿಲ್ 11ರ ವರೆಗೆ ನಡೆಯಲಿದೆ.

ವೇಳಾಪಟ್ಟಿಯ ಕುರಿತು ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಪೋಷಕರು ಜನವರಿ 6 ರಿಂದ 14,2022ರೊಳಗೆ ಆಕ್ಷೇಪಣೆ ಸಲ್ಲಿಸಬಹುದು. ಆಕ್ಷೇಪಣೆಗಳನ್ನು ಮಂಡಳಿಯ ಅಂತರ್ಜಾಲ www.sslc.karnataka.gov.in ಅಥವಾ ಇ-ಮೇಲ್ ಮೂಲಕ ಅಥವಾ ನಿರ್ದೇಶಕರು ಇಲ್ಲಿಗೆ ಸಲ್ಲಿಸಬಹುದು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ :
ಮಾರ್ಚ್ 28,2022 - ಪ್ರಥಮ ಭಾಷೆ
ಮಾರ್ಚ್ 30,2022 - ದ್ವಿತೀಯ ಭಾಷೆ
ಏಪ್ರಿಲ್ 1,2022 - ಅರ್ಥಶಾಸ್ತ್ರ, ಕೋರ್ ಸಬ್ಜೆಕ್ಟ್
ಏಪ್ರಿಲ್ 4,2022 - ಗಣಿತ, ಸಮಾಜಶಾಸ್ತ್ರ
ಏಪ್ರಿಲ್ 6,2022 - ಸಮಾಜ ವಿಜ್ಞಾನ
ಏಪ್ರಿಲ್ 8,2022 - ತೃತೀಯ ಭಾಷೆ
ಏಪ್ರಿಲ್ 11,2022 - ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ / ಹಿಂದೂಸ್ತಾನಿ ಸಂಗೀತ

ಪರೀಕ್ಷಾ ಸಮಯ : ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷೆಗಳು ನಡೆಯಲಿವೆ.
ಪ್ರತಿ ವಿಷಯಕ್ಕೂ ಪ್ರಶ್ನಪತ್ರಿಕೆ ಓದಲು 15 ನಿಮಿಷ ಕಾಲಾವಕಾಶ ನೀಡಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ತಿಳಿಸಿದೆ.


Click it and Unblock the Notifications











